Home / ಜಿಲ್ಲೆ / ಬೆಳಗಾವಿ (page 501)

ಬೆಳಗಾವಿ

ಲಾಕ್ ಡೌನ್ ಹಿನ್ನೆಲೆ ಅನವಶ್ಯಕವಾಗಿ ಮನೆಯಿಂದ ಯಾರು  ಹೊರಗೆ ಬರಬೇಡಿ ಅಂತಾ ಬೆಳಗಾವಿ ಜನತೆಗೆ ಶಾಸಕ  ಅನಿಲ್ ಬೆನಕೆ ಮನವಿ

ಬೆಳಗಾವಿ: ಲಾಕ್ ಡೌನ್ ಹಿನ್ನೆಲೆ ಅನವಶ್ಯಕವಾಗಿ ಮನೆಯಿಂದ ಯಾರು  ಹೊರಗೆ ಬರಬೇಡಿ ಅಂತಾ ಬೆಳಗಾವಿ ಜನತೆಗೆ ಶಾಸಕ  ಅನಿಲ್ ಬೆನಕೆ ಮನವಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟಲು  ಪ್ರತಿಯೊಬ್ಬರು ಸಹಕರಿಸಬೇಕು. ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇದ್ದಾಗ ಮನೆಯ ಒಬ್ಬ ಸದಸ್ಯರು ಮಾತ್ರ  ಬಂದು ತಗೆದುಕೊಂಡು ಹೋಗಬೇಕು. ಅಗತ್ಯ ಸಾಮಗ್ರಿಗಳ ಪೂರೈಕೆ ವಿಚಾರವಾಗಿ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಪ್ರತಿಯೊಬ್ಬರು ಲಾಕ್ ಡೌನ್ ಗೆ ಸ್ಪಂದಿಸಬೇಕು …

Read More »

ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.: ಎಸ್ಪಿ ಲಕ್ಷ್ಮಣ ನಿಂಬರಗಿ

ಬೆಳಗಾವಿ: ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ. ಜನರು ಸಹ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ನಿಯಮಾನುಸಾರವಾಗಿ ನಡೆದರೆ ಹರಡುವಿಕೆಯನ್ನು ತಡೆಯಬಹುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಇಂದು ಕಚೇರಿಯಲ್ಲಿ ವಿಡಿಯೋದರಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಕೊರೊನಾ ವ್ಯಾಪಿಸಿಕೊಂಡಿದೆ. ಗುಂಪು ಗುಂಪು ತಿರುಗಾಡುವುದು, ರೈಲು ಸಂಚಾರ ತಿರುಗಾಡುವುದರಿಂದ ಹರಡುವಿಕೆಯನ್ನು ತಡೆಯಬಹುದು. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೆ ಆದಲ್ಲಿ ಹತೋಟೆಗೆ ತರಬಹುದಾಗಿದೆ ಎಂದರು. ಸರ್ಕಾರ, ಪೊಲೀಸ್ …

Read More »

ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು(ಮಾರ್ಕ್)  ಮಾಡಲಾಗುತ್ತಿದೆ.

ಬೆಳಗಾವಿ:  ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು(ಮಾರ್ಕ್)  ಮಾಡಲಾಗುತ್ತಿದೆ. ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ.  ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್.‌ಅವರ ನೇತ್ರತ್ವದಲ್ಲಿ ಮಾರ್ಕಿಂಗ್ ಕೆಲಸ ನಡೆದಿದೆ. ಕೃಷ್ಣದೇವರಾಯ ಸರ್ಕಲ್ ಬಳಿ ಇರುವ ಮೋರ್, ರಾಮದೇವ ಹೊಟೇಲ್ ಬಳಿ ಇರುವ ರಿಲಾಯನ್ಸ್ ಮಾಲ್ ಸೇರಿದಂತೆ …

Read More »

ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು

ಬೆಳಗಾವಿ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಇರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದರೆ ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ತಾಲ್ಲೂಕಗಳ ಅಧಿಕಾರಿಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದೇ ರೀತಿ ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ …

Read More »

ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ನವ ಭಾರತ ಕಟ್ಟೋಣ” ಸೌ. ಶಶಿಕಲಾ ಜೊಲ್ಲೆ

ಚಿಕ್ಕೋಡಿ “ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ನವ ಭಾರತ ಕಟ್ಟೋಣ”ಬೆಂಗಳೂರಿನಲ್ಲಿ ನಡೆದ ವಿಧಾನ ಸಭೆಯ ಅಧಿವೇಶನ ಮುಗಿಸಿ ಬಂದ ತಕ್ಷಣ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕೊರೋನಾ ವೈರಾಣು ಹರಡುವುದನ್ನು ತಪ್ಪಿಸುವ ಸಲುವಾಗಿ, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಕೊಂಡು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ …

Read More »

ಕೊರೋನಾಗೆ ಸವಾಲ್ ಹಾಕಿದ ಜನರು

ಶಿಂದಿಕುರಬೇಟ :ಶಿಂದಿಕುರಬೇಟ್ ಗ್ರಾಮದಲ್ಲಿ ಕಿರಾಣಿ ಅಂಗಡಿ ಮುಂಭಾಗದಲ್ಲಿ ಗುಂಪಿನಲ್ಲಿ ಬಂದರೆ ಕೊರೋನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಬರುತ್ತೆ ಅಂತ ಪೊಲೀಸ್ ಸಹಾಯದಿಂದ ಸರದಿ ಸಾಲಿನಲ್ಲಿ ನಿಂತು ಸಾಮಗ್ರಿಗಳನ್ನು ತಗೆದುಕೊಂಡು ಹೋಗುತ್ತಿದ್ದಾರೆ ಕೊರೋನಾ ವೈರಸ್ಗೆ ನಮ್ಮ ಜನ ಸವಾಲ್ ಹಾಕಿದ್ದಾರೆ

Read More »

ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ

ಮೂಡಲಗಿ :ಮೂಡಲಗಿ ನಗರದಲ್ಲಿ ರಸ್ತೆಯ ಮೇಲೆ ವಯಸ್ಸಾದ ಮಹಿಳೆ ಸ್ವ ಗ್ರಾಮಕ್ಕೆ ಹೋಗಲು ಬಸ್ ಇಲ್ಲದೆ ಪರದಾಡುತ್ತಿರುವುದನು ಕಂಡು ಮೂಡಲಗಿ ಸಿ.ಪಿ.ಆಯ್.ಹಾಗೂ ಸಿಬ್ಬಂದಿ ವರ್ಗ ಮತ್ತು ಮೂಡಲಗಿ ಬಿಇಒ ಸಹಕಾರದಿಂದ ತಮ್ಮ ಸ್ವ -ಸ್ಥಳಕ್ಕೆ ಪೋಲೀಸ್ ವಾಹನದ ಮೂಲಕ ಕಳಿಸಿಕೊಡಲಾಯಿತು. ಮಾನವಿಯತೆ ಮೇರೆದ ಇಲಾಖೆಯವರಿಗೆ ನನ್ನದೊಂದು ಸಲಾಂ…      

Read More »

ಜನರು ಮನೆಯಿಂದ ಹೊರ ಬರದಂತೆ ಚಿಕ್ಕೋಡಿ ಪೊಲೀಸರಿಂದ ಹೊಸ ಪ್ಲಾನ್

ಚಿಕ್ಕೋಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಅನೇಕರು ತರಕಾರಿ ಖರೀದಿಗೆ ಅಂತ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಪೊಲೀಸರು ಪ್ಲಾನ್ ಮಾಡಿ ಮನೆಯಿಂದ ಜನರು ಹೊರ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ತರಕಾರಿ ಮಾರುವ ಒಟ್ಟು 12 ಜನರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಅವರಿಗೆ ನಗರದ ವಿವಿಧ …

Read More »

ವಿಚಿತ್ರ ವದಂತಿ, ಅಲ್ಲಗಳೆದ ಶ್ರೀಶೈಲ ಜಗದ್ಗುರು……….

ಶ್ರೀಶೈಲದಲ್ಲಿ ದೀಪ ಆರಿದೆಯಂತೆ, ಪ್ರತಿಯೊಬ್ಬರೂ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ತಮ್ಮ ಮನೆಯ ಮಗನ ಮೇಲೆ ಸುರುವಬೇಕಂತೆ -ಇದು ಇಂದು ಸಂಜೆಯಿಂದ ಅಥಣಿಯಲ್ಲಿ ಹಬ್ಬಿರುವ ವಿಚಿತ್ರ ವದಂತಿ. ಅಥಣಿಯ ಗಲ್ಲಿ ಗಲ್ಲಿಯಲ್ಲಿ ಜನ ಐದೈದು ಮನೆಗೆ ಹೋಗಿ ಒಂದೊಂದು ಕೊಡ ನೀರು ತಂದು ಮನೆಯ ಮಕ್ಕಳ ಮೇಲೆ ಸುರುವುತ್ತಿದ್ದಾರಂತೆ. ಕೊರೋನೋ ಇರುವ ಈ ಸಂದರ್ಭದಲ್ಲಿ ಇಂತಹ ವದಂತಿ ಮತ್ತು ಇದರಿಂದ ಜನರು ಮಾಡುತ್ತಿರುವ ಮೂಢನಂಬಿಕೆಗೆ ಅವರು …

Read More »

ಕೊರೋನಾ ಭೀತಿ; ಮಹಾರಾಷ್ಟ್ರದಿಂದ ಅಕ್ರಮವಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಸಾವಿರಾರು ಜನರು

ಚಿಕ್ಕೋಡಿ(ಮಾ.25): ಮಹಾರಾಷ್ಟ್ರದಲ್ಲಿ ದಿನನಿತ್ಯ ಕೊರೋನಾ ಭೀತಿ ಹೆಚ್ಚುತ್ತಿರುವ ಹಿನ್ನಲೆ ಮಹಾರಾಷ್ಟ್ರದಲ್ಲಿ ಕೆಲಸಕ್ಕೆಂದು ತೆರಳಿದ್ದ ಬೆಳಗಾವಿ ಜಿಲ್ಲೆಯ ಸಾವಿರಾರು ಜನ ಮರಳಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕೊರೋನಾ ಭೀತಿ ಹೆಚ್ಚಾಗಿದೆ. ಇಷ್ಟು ದಿನ ಬರಿ ನಗರ ಪ್ರದೇಶಗಳಲ್ಲಿ ಕೊರೋನಾ ಭೀತಿ ತಾಂಡವಾಡುತ್ತಿತ್ತು ದಿನಗಳು ಕಳೆಯುತ್ತಿದ್ದಂತೆ ಅದು ಜಿಲ್ಲಾ ಕೇಂದ್ರಗಳು ಗ್ರಾಮೀಣ ಭಾಗಕ್ಕೂ ಆವರಿಸಿದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಜಿಲ್ಲೆಯಲ್ಲಿಗ ಕೊರೋನಾ …

Read More »