ಕಿತ್ತೂರು ಕ್ಷೇತ್ರದ ಕಾರ್ಮಿಕರ ಮಕ್ಕಳ ಪಾಲಿಗೆ ಹೊಸ ಆಶಾಕಿರಣ ಮೂಡಿದೆ. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಸತತ ಪ್ರಯತ್ನದ ಫಲವಾಗಿ, 36.75 ಕೋಟಿ ರೂಪಾಯಿ ವೆಚ್ಚದ ಹೈಟೆಕ್ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣಕ್ಕೆ ಅದ್ಧೂರಿ ಭೂಮಿ ಪೂಜೆ ನೆರವೇರಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೈಗಾರಿಕಾ ಪ್ರದೇಶದ ಸಮೀಪ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಿರ್ಮಾಣವಾಗಲಿರುವ ಶ್ರಮಿಕ ವಸತಿ ಶಾಲೆಯ ಭೂಮಿ ಪೂಜಾ ಸಮಾರಂಭ …
Read More »ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಶಾಲೆಗಳಿಗೆ ‘ಶಾಲಾ ಎಕ್ಸಲೆನ್ಸ್ ಪ್ರಶಸ್ತಿ’ ಗೌರವ: ಶಾಂತಿ ವೃದ್ಧಾಶ್ರಮದಲ್ಲಿ ಅದ್ಧೂರಿ ಸಮಾರಂಭ
ಬೆಳಗಾವಿಯ ಪ್ರತಿಷ್ಠಿತ ಶಾಂತಿ ವೃದ್ಧಾಶ್ರಮದ ವತಿಯಿಂದ ನೀಡಲಾಗುವ 2025-26ನೇ ಸಾಲಿನ ‘ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್’ ಅನ್ನು ಕ್ಯಾಂಟೋನ್ಮೆಂಟ್ ಬೋರ್ಡ್ ಆಡಳಿತದ ಶಾಲೆಗಳಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಅಪಾರ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗಳ ಶ್ರೇಷ್ಠತೆಯನ್ನು ಗುರುತಿಸಿ ಇಂದು ಈ ವಿಶೇಷ ಗೌರವ ಸಮರ್ಪಿಸಲಾಯಿತು.” ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ನಡೆಸುತ್ತಿರುವ ವಿವಿಧ ಶಾಲೆಗಳಿಗೆ ಅವುಗಳ ಗಣನೀಯ ಶೈಕ್ಷಣಿಕ ಸಾಧನೆಗಾಗಿ ‘ಶಾಲಾ …
Read More »ಆರ್.ಎಸ್.ಎಸ್. ಮುಖಂಡನ ಮೇಲೆ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೋಮು ವಿವಾದವಲ್ಲ, ಇದು ಅಧಿಕಾರಕ್ಕಾಗಿ ನಡೆದ ಅಂತರ್ಯುದ್ಧ!
ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ನಡೆದ ಆರ್‌ಎಸ್‌ಎಸ್ ತಾಲೂಕಾಧ್ಯಕ್ಷ ದತ್ತಾ ಥೋರಾವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಈಗ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈ ಘಟನೆ ಕೋಮು ಸಂಘರ್ಷದ ಬಣ್ಣ ಪಡೆದಿತ್ತಾದರೂ, ಈಗ ಪೊಲೀಸರು ಹೊರಹಾಕಿರುವ ಸತ್ಯಾಂಶಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಕೇವಲ ವರ್ಚಸ್ಸು ಮತ್ತು ಅಧಿಕಾರದಾಸೆಗಾಗಿ ಸ್ವಪಕ್ಷೀಯರೇ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಹುಕ್ಕೇರಿ ತಾಲೂಕಿನ ಆರ್‌ಎಸ್‌ಎಸ್ ಮುಖಂಡರಾದ ದತ್ತಾ ಥೋರಾವತ್ ಹಾಗೂ ಸಮೀರ್ ಪಾಟೀಲ್ ನಡುವೆ ಮೊದಲಿನಿಂದಲೂ …
Read More »ಪಕ್ಷದ ವಿಚಾರ ಬಂದಾಗ ಮಾಜಿ ಸಚಿವ ಎ.ಬಿ. ಪಾಟೀಲ ಹಾಗೂ ನಾನು ಒಂದೇ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಸಂಘ- ಸಂಸ್ಥೆ ವಿಚಾರ ಬಂದಾಗ ಎ. ಬಿ. ಪಾಟೀಲ ಹಾಗೂ ನಾವು ಬೇರೆ ಬೇರೆ, ಆದರೆ ಪಕ್ಷದ ವಿಚಾರ ಬಂದಾಗ ನಾವು ಅವರು ಒಂದೇ ಎಂದು ಲೋಕೋಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಸಂಘ-ಸಂಸ್ಥೆಗಳ ಚುನಾವಾಣೆ ಬಂದಾಗ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಬೇರೆ ಬೇರೆಯಾಗಿದ್ದೇವೆ ಹೊರತು ಪಕ್ಷದ ವಿಚಾರ ಬಂದಾಗ ನಾವು ಅವರು ಕೂಡಿ ಪ್ರಚಾರ ಮಾಡುತ್ತೇವೆ. ಈ ಕುರಿತು …
Read More »ಧನಲಕ್ಷ್ಮೀ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಗುರುವಾರ ಮುಕ್ತಾಯ
ಧನಲಕ್ಷ್ಮೀ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಕಬ್ಬು ನೊಂದಾಯಿಸಿದ ರೈತ ಬಾಂಧವರು ಹಾಗೂ ಶೇರು ಸದಸ್ಯರು ಗುರುವಾರ ದಿನಾಂಕ : 26-02-2026 ರಂದು ರಾತ್ರಿ 8:00 ಗಂಟೆಗೆ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಕಾರಣ ರೈತರು ಕಬ್ಬನ್ನು ಕಟಾವು ಮಾಡಿ ನಿಗದಿಪಡಿಸಿದ ದಿನಾಂಕದೊಳಗಾಗಿ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ತಿಳಿಯಪಡಿಸಲಾಗಿದೆ. ಸದರಿ ಅವಧಿಯ ಒಳಗಾಗಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡದೇ ಇರುವ ಕಬ್ಬಿಗೆ ಕಾರ್ಖಾನೆಯವರು …
Read More »ಘಟಪ್ರಭಾ ಕೆನಾಲ್‌ಗೆ ಸೇತುವೆ ನೆಲಸಮ ಸತೀಶ ಜಾತಕಿಹೋಳಿ ಪರಿಶೀಲನೆ
ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಗಂಭೀರ ಬಿರುಕು ಬಿಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದರಿಂದ ಅದನ್ನು ನೆಲಸಮ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸತೀಶ ಜಾರಕಿಹೋಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ, ಅಂದಾಜು ರೂ. 5.00 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯವನ್ನು 45 ದಿನಗಳೊಳಗೆ …
Read More »ಗೋಹತ್ಯೆ ತಡೆಗೆ ಬೆಳಗಾವಿಯಲ್ಲಿ ಸಂಕಲ್ಪ: ಗಣಪತಿ ಪಾದಕ್ಕೆ ಪತ್ರವನ್ನಿಟ್ಟು ವಿಶೇಷ ಪೂಜೆ
ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು ಮತ್ತು ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕು ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಬೆಳಗಾವಿಯಲ್ಲಿ ಚಾಲನೆ ಸಿಕ್ಕಿದೆ. ಗಣಪತ್ ಗಲ್ಲಿಯ ಶ್ರೀ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಗೋಭಕ್ತರು ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಭಾರತ ಭೂಮಿಯಿಂದ ಗೋಹತ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಮತ್ತು ಗೋಮಾಳ ಭೂಮಿಯನ್ನು ಸಂರಕ್ಷಿಸಲು ಆಗ್ರಹಿಸಿ ದೇಶಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ಬೆಳಗಾವಿಯ ಪ್ರಸಿದ್ಧ ಗಣಪತ್ ಗಲ್ಲಿಯ ಶ್ರೀ ಗಣೇಶನ …
Read More »ಆಸ್ತಿಗಾಗಿ ಮಗುವಿನ ಹಂತಕ ದೊಡ್ಡಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿ ಕೋರ್ಟ್
ಆಸ್ತಿಗಾಗಿ ಕಂದಮ್ಮನನ್ನೇ ಬಲಿಪಡೆದ ಕ್ರೂರದೊಡ್ಡಪ್ಪನಿಗೆ ಬೆಳಗಾವಿ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಪುಟ್ಟ ಮಕ್ಕಳ ಸಾಕ್ಷ್ಯವನ್ನೇ ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಧೀಶರು, ಹಂತಕನಿಗೆ ಸಾಯುವವರೆಗೂ ಕಂಬಿ ಎಣಿಸುವಂತೆ ಆದೇಶ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ 2021ರಲ್ಲಿ ನಡೆದಿದ್ದ ಸಿದ್ಧಾರ್ಥ್ ಸಂಕನ್ನವರ ಎಂಬ ಆರು ವರ್ಷದ ಮಗುವಿನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ತನ್ನ ತಮ್ಮ …
Read More »ಶಾಲೆಗಳ ಮೂಲಸೌಕರ್ಯಕ್ಕೆ ಶಾಸಕ ಆಸೀಫ್ ಸೇಠ್ ಕಾಯಕಲ್ಪ: ಮಾಲಿ ಗಲ್ಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ
ಬೆಳಗಾವಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಾಸಕ ಆಸೀಫ್ ಸೇಠ್ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಇಂದು ಮಾಲಿ ಗಲ್ಲಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಅವರು, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುವ ಮೂಲಕ ಶಿಕ್ಷಣದ ಗುಣಮಟ್ಟಕ್ಕೆ ಪೂರಕವಾದ ಪರಿಸರ ನಿರ್ಮಿಸುವ ಭರವಸೆ ನೀಡಿದರು. ಬೆಳಗಾವಿಯ ಮಾಳಿ ಗಲ್ಲಿಯಲ್ಲಿರುವ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ. 4, ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ. 2 ಮತ್ತು ಸರ್ಕಾರಿ ಕನ್ನಡ …
Read More »ಮಾರ್ಚ 1 ರಿಂದ ಯಡೂರಿನಲ್ಲಿ ಮಹಾಕುಂಭಾಭಿಷೇಕ
ಚಿಕ್ಕೋಡಿ :ಯಡೂರು ಗ್ರಾಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯು ಮಾರ್ಚ 1ರಿಂದ 6 ರವರೆಗೆ ನಡೆಯಲಿದೆ ಯಡೂರ ಶ್ರೀವೀರಭದ್ರ ದೇವಸ್ಥಾನದ ಹಾಗೂ ಧರ್ಮಾಧಿಕಾರಿಗಳು ಶ್ರೀಶೈಲ್ ಜಗದ್ಗುರು ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜೀಯವರು ಹೇಳಿದರು. ಯಡೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ 1 ರಂದು ಸಂಜೆ 6 ಗಂಟೆಗೆ ಶ್ರೀ ಸಿದ್ಧಲಿಂಗ ಶಿವಾಚಾರ್ಯ ವೇದಾಗಮ ಸಂಸ್ಕೃತ ಪಾಠ ಶಾಲೆಯ 12 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜರುಗುವುದು. ಶ್ರೀಶೈಲ ಮತ್ತು ಕಾಶೀ …
Read More »
Laxmi News 24×7