Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ (page 5)

ಚಿಕ್ಕೋಡಿ

ಸೆ.3 ರಿಂದ ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಹೋರಾಟ ಮತ್ತೆ ಪ್ರಾರಂಭ: ಜಯಮೃತ್ಯುಂಜಯ ಸ್ವಾಮೀಜಿ

ಚಿಕ್ಕೋಡಿ (ಬೆಳಗಾವಿ) : ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸೆ.3 ರಂದು ನಿಪ್ಪಾಣಿಯ ರೈತ ಹುತಾತ್ಮ ವೃತ್ತದಲ್ಲಿ ಲಿಂಗ ಪೂಜೆ ಸಲ್ಲಿಸುವ ಮುಖಾಂತರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ‌ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಅಥಣಿ ಪಟ್ಟಣದಲ್ಲಿ ಹೋರಾಟದ …

Read More »

ದಶಕದಿಂದ ಪಡತರವಾಡಿ ಗ್ರಾಮಕ್ಕಿಲ್ಲ ಬಸ್​ ಸಂಪರ್ಕ.. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಕಷ್ಟ, ಗ್ರಾಮಸ್ಥರಿಗೂ ತೊಂದರೆ

ಚಿಕ್ಕೋಡಿ: ಅಥಣಿ ತಾಲೂಕಿನ ಪಡತರವಾಡಿ ಗ್ರಾಮಕ್ಕೆ ಸರಿಯಾದ ಬಸ್​ ಸಂಪರ್ಕವಿಲ್ಲದೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಮತ್ತು ಜನರು ಸಂಕಷ್ಟ ಎದುರಿಸುವಂತಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಈ ಗ್ರಾಮಕ್ಕೆ ಕಳೆದ 15 ವರ್ಷಗಳಿಂದ ಬಸ್​ ಸಂಚಾರ ಸ್ಥಗಿತಗೊಂಡಿದ್ದು ಗ್ರಾಮದ ಜನರು, ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರಿಗೆ ತೊಂದರೆಯಾಗಿದೆ. ಒಂದೂವರೆ ಕಿಲೋಮೀಟರ್ ದೂರದ ಐಗಳಿ-ತೆಲಸಂಗ್ ರಸ್ತೆಗೆ ಸಂಚಾರ ಮಾಡಿ ಬಳಿಕ ಅಲ್ಲಿಂದ ಬೇರೊಂದು ಬಸ್ ಮೂಲಕ ಊರುಗಳಿಗೆ ಸಂಚರಿಸಬೇಕಾಗಿದೆ​. ಮಳೆಗಾಲ ಹಾಗೂ ರಾತ್ರಿ ಸಮಯದಲ್ಲಿ …

Read More »

ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರ ವಾಂತಿ ಭೇದಿಯಿಂದ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ನಡೆದಿದೆ. ವಾಂತಿ ಭೇದಿಯಿಂದ ಬಳಲುತ್ತಿದ್ದ ಅವರನ್ನು ವಿವಿಧ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಸೋಮವಾರ ಪಟೇಲ್ ಬಂಧುಗಳ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಊಟ ಮಾಡಿ ಮನೆಗೆ ವಾಪಸ್​​ ಆಗುತ್ತಿದ್ದಂತೆ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇಡೀ ರಾತ್ರಿ ಪರದಾಟ ನಡೆಸಿದ ಬಳಿಕ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 10ಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ …

Read More »

ನಿಮ್ಮಗೆ ಮುಂದಿನ ಕಾರ್ಯ ಮಾಡೋಕೆ ಆದರೆ ಮಾಡಿ ಇಲ್ಲ ಹೆಣ ಬಿಸಾಕಿ ಎಂದು ಮಕ್ಕಳು

ಸುಮಾರು ಒಂದೂವರೆ ತಿಂಗಳ ಹಿಂದೆ #ಚಿಕ್ಕೋಡಿ ತಾಲ್ಲೂಕಿನ #ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ ನಲ್ಲಿ ಯಾರೋ ಚಿಕಿತ್ಸೆಗೆಂದು ಸುಮಾರು 72 ವರ್ಷದ ವೃದ್ಧನನ್ನು ತಂದು ಇಲ್ಲೆ ಬಿಟ್ಟು ಪರಾರಿಯಾಗಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದ ಮೇಲೆ ಚಿಕ್ಕೋಡಿ ಪೋಲಿಸರಾದ ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಮೂಲಚಂದ್ರ ಶರ್ಮಾ ಎನ್ನುವ ಪುನಾ ಮೂಲದ ವ್ಯಕ್ತಿ ಇಂಗ್ಲಿಷ್, ಹಿಂದಿ , ಮರಾಠಿ ಹೀಗೆ ಹಲವು ಭಾಷೆಗಳಲ್ಲಿ ಕರಾರುವಕ್ಕಾಗಿ ಕಡಕ್ಕಾಗಿ ಮಾತನಾಡುತ್ತಾ ಪಾರ್ಶ್ವವಾಯು …

Read More »

ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ; ಕವಟಗಿಮಠ

ಚಿಕ್ಕೋಡಿ: ರೈತರಿಗೆ ಏಳು ಗಂಟೆ ಅನಿಯಮಿತ ವಿದ್ಯುತ್ ನೀಡಬೇಕು ಮತ್ತುಬೆಳಗಾವಿಯನ್ನು (Belagavi) ಬರಪೀಡಿತ ಜಿಲ್ಲೆಯಂತ ಘೋಷಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ (Mahantesh Kavatagimath) ನೇತೃತ್ವದಲ್ಲಿ ಬಿಜೆಪಿ (BJP) ಮುಖಂಡರು ಚಿಕ್ಕೋಡಿ ಉಪವಿಭಾಗಧಿಕಾರಿ ಮಾಧವ್ ಗಿತ್ತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಳಿಕ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಜನರಿಗೆ ಹಲವು ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ನಿನಗೂ ಫ್ರೀ, ನನಗೂ ಫ್ರೀ ಅಂತ …

Read More »

ತೀವ್ರಗೊಳ್ಳುತ್ತಿರುವ ಬೆಳಗಾವಿ ಜಿಲ್ಲೆ ವಿಭಜನೆ ಕಿಚ್ಚು: ಅಥಣಿ ಜಿಲ್ಲೆ ಮಾಡುವಂತೆ ಹೋರಾಟ

ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆ ವಿಭಜನೆ ಕಿಚ್ಚು ದಿನೇದಿನೆ ತೀವ್ರಗೊಳ್ಳುತ್ತಿದೆ. ಅಥಣಿಯನ್ನು (Athani) ಜಿಲ್ಲೆ ಮಾಡುವಂತೆ ಹೋರಾಟ ಮಾಡವ ಕುರಿತು ಮೂವರು ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆದಿದೆ. ಅಥಣಿ ಪಟ್ಟಣದಲ್ಲಿರುವ ಮೋಟಗಿ ಮಠದ (Motagi Math) ಪ್ರಭುಚನ್ನಬಸವ ಸ್ವಾಮೀಜಿ, ಗಚ್ಚಿನಮಠದ ಶಿವಬಸವಶ್ರೀ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ಅಥಣಿಯ ಶಿವಣಗಿ ಸಾಂಸ್ಕೃತಿಕ ಸಭಾಭವನದಲ್ಲಿ ರೈತ ಮುಖಂಡರು, ಸಾಹಿತಿಗಳು, ಮಾಜಿ ಯೋಧರು ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವ ಸತೀಶ್ ಜಾರಕಿಹೊಳಿ ಗೋಕಾಕ್, …

Read More »

ಸಮಾಜ ಸೇವಕಿ ಪುಷ್ಪಾ ಬಾಳಾಸಾಹೇಬ್ ಕೋರೆ ನಿಧನ

ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದ ಹಿರಿಯ ಸಮಾಜ ಸೇವೆಗೆ ಶ್ರೀಮತಿ ಪುಷ್ಪಾ ಬಾಳಾಸಾಹೇಬ್ ಕೋರೆ, ಅವರು ನಿಧನರಾಗಿದ್ದಾರೆ ತಮ್ಮ 56 ವಯಸ್ಸಿನಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ನಿಧನ ಹೊಂದಿದರು ಮೃತರು ಶೀಡಬಾಳ ಪೋಸ್ಟ್ ಕಚೇರಿಯ ನಿವೃತ್ತ ಪೋಸ್ಟ್ ಮಾಸ್ಟರ್ ಬಾಳಾಸಾಹೇಬ್ ಕೋರೆ ಇವರ ಧರ್ಮಪತ್ನಿಯಾಗಿದ್ದರು, ಇಬ್ಬರ ಪುತ್ರಿಯರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಬೇಕಿದೆ ಸರ್ಕಾರದ ನೆರವು

ಚಿಕ್ಕೋಡಿ : ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಜೂನ್​ ಮೊದಲನೇ ವಾರದಲ್ಲಿ ಪ್ರಾರಂಭವಾಗಿ ರೈತರು ಬಿತ್ತನೆ ಕಾರ್ಯವನ್ನು ಮಾಡುತ್ತಿದ್ದರು. ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮುಂಗಾರು ಬಿತ್ತನೆ ಆಗದೆ ಕೃಷಿ ಚಟುವಟಿಕೆಗಳು ಮಂದಗತಿಯಲ್ಲೇ ಸಾಗಿದ್ದವು. ಅಲ್ಪ ಸ್ವಲ್ಪ ಮಳೆಯಲ್ಲೇ ಬೀಜ ಬಿತ್ತಿದ್ದ ರೈತರಿಗೆ ಆಘಾತವಾಗಿದೆ. ಮಳೆ ಕೈಕೊಟ್ಟ ಪರಿಣಾಮ, ಬಿತ್ತನೆ ಮಾಡಿರುವ ಬೀಜಗಳು ಮೊಳಕೆಯಲ್ಲಿ ಒಣಗುತ್ತಿರುವ ಹಿನ್ನೆಲೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳಗಾವಿ ಜಿಲ್ಲೆಯ …

Read More »

ನಂಬಿಕೆ ದ್ರೋಹ ಮಾಡಿದನೆಂದು ಸ್ನೇಹಿತನನ್ನೇ ದುಷ್ಕರ್ಮಿಗಳ ಕೊಲೆ

ಚಿಕ್ಕೋಡಿ : ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಹಾರುಗೇರಿ ಗ್ರಾಮದ ಅಕ್ಬರ್ ಶಬ್ಬೀರ್ ಜಮಾದಾರ್ (22) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳ್ಳತನದ ವ್ಯವಹಾರದಲ್ಲಿ ನಂಬಿಕೆ ದ್ರೋಹ ಎಸಗಿದ್ದಾನೆಂದು ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಮೃತನ ತಾಯಿ ಕೈರುಣ ಜಮಾದಾರ ಆರೋಪಿಸಿದರು. ಬಸ್ತವಾಡ ಗ್ರಾಮದ ಹೊರವಲಯದಲ್ಲಿ ಜಮಾದಾರ್​ನನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆಗೈದು, ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಳೆದ ಎರಡು …

Read More »

ನಾವು ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ: ಸತೀಶ್ ಜಾರಕಿಹೊಳಿ

ಚಿಕ್ಕೋಡಿ (ಬೆಳಗಾವಿ): “ಲೋಕಸಭಾ ಚುನಾವಣೆಗೆ ಇನ್ನು ತುಂಬಾ ಸಮಯವಿದೆ. ಯಾರು ಸ್ಪರ್ಧೆ ಮಾಡಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಪಕ್ಷ ಯಾರನ್ನು ಗುರುತಿಸುತ್ತದೋ ಅವರು ಸ್ಪರ್ಧೆ ಮಾಡುತ್ತಾರೆ. ನಾವು ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಪ್ರವಾಸ ಮಂದಿರದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡಬೇಕು ಎಂಬ …

Read More »