ಚಿಕ್ಕಬಳ್ಳಾಪುರ: ಕೇವಲ 40 ದಿನದ ಹಸುಗೂಸನ್ನು ಹತ್ಯೆಗೈದಿದ್ದ ಅಜ್ಜಿಯನ್ನು ಚೇಳೂರು ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕತ್ತು ಹಿಸುಕಿ ಮರಿ ಮೊಮ್ಮಗನನ್ನೇ ಮೆಹಬೂಬಿ ಹತ್ಯೆಗೈದಿದ್ದರು. ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 2025ರ ಡಿಸೆಂಬರ್ 24ರಂದು ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿದೆ. ಎಫ್ಎಸ್ಎಲ್ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇವಲ 40 ದಿನದ ಗಂಡು ಮಗು, ಮರಿ ಮೊಮ್ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ …
Read More »ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಲಾಟೆ – ನೇಣುಬಿಗಿದ ಸ್ಥಿತಿಯಲ್ಲಿ ಪತ್ನಿ ಶವ ಪತ್ತೆ
ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ ಮಧ್ಯೆ ಗಲಾಟೆಯಾಗಿ ಕೊನೆಗೆ ಪತ್ನಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದ್ದು, ಗಂಡ ಗಂಗರಾಜು ಪತ್ನಿಯನ್ನು ಕೊಂದು ನೇಣು ಹಾಕಿರುವ ಆರೋಪ ಕೇಳಿಬಂದಿದೆ. ಘಟನೆ ನಡೆದ ದಿನ ಮೃತ ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ಕರೆ ಮಾಡಿದ್ದ. ಆತನ ಕರೆಯನ್ನು ವರಲಕ್ಷ್ಮಿ ರಿಸೀವ್ ಮಾಡಿದ್ದಳು. ಇದೇ ವಿಚಾರಕ್ಕೆ …
Read More »ಇರಾನ್ ಸುಪ್ರೀಂ ಲೀಡರ್ ಖಮೇನಿ ಖತಂ – ಚಿಕ್ಕಬಳ್ಳಾಪುರದ ಅಲೀಪುರದಲ್ಲಿ 3 ದಿನ ʻಬ್ಲಾಕ್ ಡೇʼ ಆಚರಣೆ
ಚಿಕ್ಕಬಳ್ಳಾಪುರ: ಅಮೆರಿಕ – ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ ಸಾವಿನಪ್ಪಿರುವ ಸುದ್ದಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. 3 ದಿನಗಳ ಕಾಲ ʻಬ್ಲಾಕ್ ಡೇʼ (ಕರಾಳ ದಿನ) ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಅಲೀಪುರಕ್ಕೆ ಖಮೇನಿ ನಂಟು ಏನು? ಬೇಬಿ ಅಪ್ ಇರಾನ್ ಅoತಲೇ ಕರೆಸಿಕೊಳ್ಳುವ …
Read More »ಉದ್ಯೋಗಾಂಕ್ಷಿಗಳು ಬಿಜೆಪಿ ಮಾತು ಕೇಳಿ FIR ಹಾಕಿಸಿಕೊಳ್ಳಬೇಡಿ: ಪ್ರದೀಪ್ ಈಶ್ವರ್
ಬೆಂಗಳೂರು: ಉದ್ಯೋಗಾಂಕ್ಷಿಗಳು ಬಿಜೆಪಿ ಅವರ ಮಾತು ಕೇಳಿ ಎಫ್‌ಐಆರ್ ಹಾಕಿಸಿಕೊಂಡು ಕೋರ್ಟ್‌ಗೆ ಅಲೆದಾಟ ಮಾಡಬೇಡಿ ಎಂದು ಉದ್ಯೋಗಾಂಕ್ಷಿಗಳಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಿವಿಮಾತು ಹೇಳಿದ್ದಾರೆ. ಧಾರವಾಡದಲ್ಲಿ ಮಂಗಳವಾರ ಉದ್ಯೋಗಾಂಕ್ಷಿಗಳ ಪ್ರತಿಭಟನೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಯುವಕರು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ್ರು. ಕರ್ನಾಟಕದ ಯುವಕರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ಪರವಾಗಿ ನಮ್ಮ ಸರ್ಕಾರ ಇದೆ. ನಿಮ್ಮ ಭವಿಷ್ಯ ನಮಗೆ ಮುಖ್ಯ. ಇದಕ್ಕಾಗಿಯೇ ವಯಸ್ಸಿನ ಮಿತಿ ಜಾಸ್ತಿ …
Read More »ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿದ್ರೆ ಖಂಡಿಸುತ್ತೇನೆ: ಪ್ರದೀಪ್ ಈಶ್ವರ್
ಬೆಂಗಳೂರು: ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿರೋ ವಿಚಾರ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದರು. ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡನೇ. ಬೇರೆ ಭಾಷೆಗಳು ಹೊಟ್ಟೆ ತುಂಬಿಸಿಕೊಳ್ಳೋಕೆ, …
Read More »ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ
ಚಿಕ್ಕಬಳ್ಳಾಪುರ: ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ (MGNREGA) ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಂದು ಚಿಕ್ಕಬಳ್ಳಾಪುರದಲ್ಲಿನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ದೇಶಾದ್ಯಂತ ‘ಮನರೇಗಾವನ್ನು ಉಳಿಸಿ’ ಅಭಿಯಾನ ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಭಾಜಪ ಸರ್ಕಾರ ಮನರೆಗಾವನ್ನು ರದ್ದುಪಡಿಸಿ, ವಿಬಿಜಿರಾಮ್ ಜಿ (VB-G RAM G) ಕಾಯ್ದೆಯನ್ನು …
Read More »ಬಾಗೇಪಲ್ಲಿ `ಕೈ’ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು: ಹೈಕೋರ್ಟ್ ಆದೇಶ
ಬೆಂಗಳೂರು: ಬಾಗೇಪಲ್ಲಿಯ ಕಾಂಗ್ರೆಸ್ ವಿಜಯಿ ಅಭ್ಯರ್ಥಿ ಸುಬ್ಬಾರೆಡ್ಡಿಯವರ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್‌ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಒಂದು …
Read More »ಮನೆ ತೆರವಿಗೆ ಮುಂದಾದ ತಹಶೀಲ್ದಾರ್ – ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಮನೆ ತೆರವು ಮಾಡಲು ಮುಂದಾಗಿದ್ದಕ್ಕೆ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಧಕೃಷ್ಣ ಜಿ ಎಂಬವರು ಆಂಟಿಬಯೊಟಿಕ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಕ್ಕೂ ಮುನ್ನ ರಾಧಾಕೃಷ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ತನ್ನ ಸಾವಿಗೆ ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ಹಾಗೂ ಜಿಲ್ಲಾಡಳಿತ ಕಾರಣ ಎಂದು ಡೆತ್ …
Read More »ಅನ್ಯ ಜಾತಿ ಯುವಕನ ಜತೆ ಮಗಳು ಪರಾರಿ: ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿದ ತಂದೆ, ತಾಯಿ, ಸಹೋದರ
ಚಿಕ್ಕಬಳ್ಳಾಪುರ: ಮಾನ-ಮರ್ಯಾದೆಗೆ ಹೆದರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ ಹಾಗೂ ಮಗ ಮನೋಜ್ ಮೃತ ದುರ್ದೈವಿಗಳು. ಹೆತ್ತ ಮಗಳು ಅನ್ಯ ಜಾತಿಯ ಯುವಕನ ಜೊತೆ ಪರಾರಿಯಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ. 26 ವರ್ಷದ ಮಗಳು ಅರ್ಚನಾ, ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ಯುವಕ ಅನ್ಯಜಾತಿಯವನಾಗಿರುವುದರಿಂದ ಊರಿನವರಿಂದ ನಿಂದನೆ ಒಳಗಾಗಬಹುದು ಎಂದು ಹೆದರಿ …
Read More »ಮಾಂಸಾಹಾರ ತಿಂದು ದೇವಾಲಯಕ್ಕೆ ಹೋದ್ರೆ ತಪ್ಪೇನು..? ಸಿದ್ದರಾಮಯ್ಯ ಆಕ್ರೋಶ
ಚಿಕ್ಕಬಳ್ಳಾಪುರ: ಮಡಿಕೇರಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ, ಮಾಂಸ ಆಹಾರ ಸೇವಿಸಿ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಿದ್ದರಾಮಯ್ಯ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವ್ಯಾರು? ನಾನು ಊಟ ಮಾಡಿದ್ದು, ಸುದರ್ಶನ್ ಗೆಸ್ಟ್ ಹೌಸ್ನಲ್ಲಿ. ಸಂಜೆ ನಾನು ಬಸವೇಶ್ವರ ದೇವಾಲಯಕ್ಕೆ ಹೋಗಿರೋದು. ನಾನ್ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು? ನನ್ನ ಊಟದ ಬಗ್ಗೆ …
Read More »
Laxmi News 24×7