Breaking News
Home / ಜಿಲ್ಲೆ / ಕಲಬುರ್ಗಿ (page 3)

ಕಲಬುರ್ಗಿ

ಭೀಕರ ಅಪಘಾತ : 18 ವರ್ಷದ ಯುವತಿ ಸೇರಿ ಮೂವರು ಸಾವು

ಕಲಬುರಗಿ : ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಭೀಮಾಶಂಕರ್ ಪ್ಯಾಟಿ, ಅಕ್ಬರ್ ಪಟೇಲ್ ಮತ್ತು 18 ವರ್ಷದ ಯುವತಿ ಜವರಾಯನ ಅಟ್ಟಹಾಸಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಮೂವರು ಒಂದೆ ದ್ವಿ ಚಕ್ರದ ಮೇಲೆ ಹೊಗುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಮೃತದೇಹಗಳು ರಕ್ತಸಿಕ್ತವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೈಕ್​ ನಜ್ಜುಗುಜ್ಜಾಗಿದೆ. ಈ …

Read More »

12 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಬೆರಳಿನ ಮಾದರಿ ಕೊಟ್ಟು, ಫೋಟೋ ತೆಗೆಯಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ.

ಕಲಬುರ್ಗಿ : ಮಹಿಳೆಯೊಬ್ಬರು ಆಧಾರ್ ಕಾರ್ಡ್ ಗಾಗಿ ಅಲೆದಾಡುತ್ತಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 30 ವರ್ಷದ ಈ ಮಹಿಳೆ ಆಧಾರ್ ಕಾರ್ಡ್ ಗಾಗಿ ಇದುವರೆಗೂ ಬರೋಬ್ಬರಿ 12 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಬೆರಳಿನ ಮಾದರಿ ಕೊಟ್ಟು, ಫೋಟೋ ತೆಗೆಯಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಆಧಾರ್ ಗಾಗಿ ಅಲೆದಾಡುತ್ತಲೇ ಇರುವ ಮಹಿಳೆ, ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಲು ಪರದಾಡುತ್ತಿದ್ದಾರೆ. ಹೀಗೆ ಪದೇ ಪದೇ ರಿಜೆಕ್ಟ್ ಆಗಲು ಕಾರಣವೇನೆಂದು ಪತ್ತೆ ಹಚ್ಚಿದಾಗ ಅಚ್ಚರಿ …

Read More »

ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ನಾಲ್ಕು ಜನ ಸಾವನ್ನಪ್ಪಿರುವ ಘಟನೆ

ಕಲಬುರಗಿ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ನಾಲ್ಕು ಜನ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಲಾಡ್ಲಾಪುರ ಗ್ರಾಮದ ಮರೆಪ್ಪ (50), ಬಸ್ಸಪ್ಪ (32) ಮತ್ತು ಅಲ್ಲೂರು ಗ್ರಾಮದ ದೇವೇಂದ್ರ (50) ಹಾಗೂ ಮಲ್ಲಪ್ಪ ರಾಯಪ್ಪ (35) ಎಂದು ಗುರುತಿಸಲಾಗಿದೆ. ಎರಡು ಬೈಕುಗಳ ಮೇಲೆ ಮೂರು ಮೂರು ಜನ ಹೋಗುತ್ತಿದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆರು ಜನರಲ್ಲಿ ನಾಲ್ವರು …

Read More »

ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ  ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ  ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯ್​ ಪಟೇಲ್ ವೃತ್ತದಲ್ಲಿ ಸೇರಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡು  ಪೊಲೀಸರು  ಧ್ವಜಾರೋಹಣ  10 ಜನರ ವಶಕ್ಕೆ ಪಡೆದರು. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕಲ್ಯಾಣ ಕರ್ನಾಟಕ ಭಾಗವನ್ನು ಪದೇ ಪದೇ ನಿರ್ಲಕ್ಷಿಸಲಾಗುತ್ತಿದೆ. ನಮಗೆ ಪ್ರತ್ಯೇಕ …

Read More »

ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್:ಸಿದ್ದರಾಮಯ್ಯಲ

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ ಹೋಗಿದ್ದಾರೆ. ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 100 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಒಟ್ಟು 700 …

Read More »

ಉತ್ತರ ಕರ್ನಾಟಕ ನೆರೆ ಪ್ರದೇಶದಲ್ಲಿ ಸಿಎಂ ಬಿಎಸ್ ವೈ ವೈಮಾನಿಕ ಸಮೀಕ್ಷೆ

ಕಲಬುರಗಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ನೆರೆ, ಪ್ರವಾಹ ಪೀಡಿತ ಪ್ರದೇಶಗಳಾದಂತ ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ. ಹಾನಿಯ ಬಗ್ಗೆ ಮಾಹಿತಿ ಪಡೆದು, ಹೆಚ್ಚಿನ …

Read More »

ಕೊರೋನಾ ಮಹಾಮಾರಿಗೆ ಹೋರಾಟಗಾರ ಬಲಿ

ಕಲಬುರಗಿ : ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೋರಾಟಗಾರ ಮಾರುತಿ ಮಾನ್ಪಡೆ (65) ಮಹಾಮಾರಿಗೆ ಬಲಿಯಾಗಿದ್ದಾರೆ ಕಮ್ಯುನಿಸ್ಟ್ ಪಾರ್ಟಿ ಮುಖಂಡರು ಆಗಿದ್ದ ಮಾನ್ಪಡೆ ಕಳೆದ ಎರಡು ವಾರದ ಹಿಂದೆ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಿಸದೆ ಇಂದು ಅವರು ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್ ಹಿನ್ನೆಲೆ ಅಕ್ಟೋಬರ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಹಾಮಾರಿ ಕೊರೋನಾದಿಂದ ನಿಧನರಾಗಿದ್ದು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ ಇಂದು ಬೆಳಗ್ಗೆ 9.30ಕ್ಕೆ ಮಾರು ಅವರು …

Read More »

ಭೀಮಾ ನದಿ ಪ್ರವಾಹ ಮುಂದುವರೆದಿದೆ.

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಮುಂದುವರೆದಿದೆ. ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಮನೆಗಳ ಹಾನಿಯ ಜೊತೆ ಅಂಗಡಿಗಳಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ಭೀಮಾ ನದಿ ಪ್ರವಾಹಕ್ಕೆ ಕಲಬುರ್ಗಿ ಜಿಲ್ಲೆ ಜನತೆ ತತ್ತರಿಸಿ ಹೋಗಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗಿದೆ. ಆದರೆ ಕಲಬುರ್ಗಿ, ಜೇವರ್ಗಿ, ಶಹಾಬಾದ್ ಹಾಗು ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಕಲಬುರ್ಗಿ ತಾಲೂಕಿನ ಸರಡಗಿ …

Read More »

ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ.

ಅಫಜಲಪುರ: ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ. ತಾಲ್ಲೂಕಿನ ಭೀಮಾ ಬ್ಯಾರೇಜಿನ ಹಿನ್ನೀರಿನಿಂದ ಕರಜಗಿ ಹೋಬಳಿಯ ಸುಮಾರು 20 ಗ್ರಾಮಗಳು ಮೂರಾಬಟ್ಟೆಯಾಗಿವೆ. ಸೊನ್ನ ಬ್ಯಾರೇಜನಿಂದ ಭೀಮಾ ನದಿಗೆ ಶನಿವಾರ 8.50 ಲಕ್ಷ ಕ್ಯುಸೆಕ್‌ ನೀರು ಹರಿಬಿಡುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೀಮಾ ತೀರದ ಮಣ್ಣೂರ, ಹೊಸುರ, ಶೇಷಗೀರಿ, ಉಡಚಣ, ಭೋಸಗಾ, ಅಳ್ಳಗಿ(ಬಿ), ಗೌರ, ಬಂಕಲಗಾ, ಶಿರವಾಳ, ದಿಕ್ಸಂಗಾ, ತೆಲ್ಲುಣಗಿ, ನಂದರಗಿ ಸೇರಿದಂತೆ ಹಲವು ಹಳ್ಳಿಗಳು …

Read More »

ಕಳಪೆ ಕಾಮಗಾರಿ: ಸೇತುವೆ ಮುಳುಗಡೆಯಾಗದಿದ್ರೂ ವಾಹನ ಸಂಚಾರ ಬಂದ್

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗದಿದ್ದರೂ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದೆ.    ಅಚ್ಚರಿಯ ಸಂಗತಿಯೆಂದರೆ, ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು 2 ವರ್ಷಗಳ ಹಿಂದಷ್ಟೆ ಉದ್ಘಾಟನೆಯಾಗಿದ್ದ ಸೇತುವೆಯ ಗುಣಮಟ್ಟ ಕಳಪೆಯಾಗಿರುವ ಆರೋಪ ಕೇಳಬಂದಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನಿನ್ನೆಯಿಂದಲೇ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಕಲಬುರಗಿ ಬೆಂಗಳೂರು …

Read More »