Home / ಜಿಲ್ಲೆ / ಕಲಬುರ್ಗಿ (page 2)

ಕಲಬುರ್ಗಿ

ಹಣ ನೀಡಿದರೆ ಫೇಲ್ ಆದವರಿಗೂ ಸಿಗುತ್ತಿದೆ ಪಾಸಾದ (Gulbarga University)ಅಕ್ರಮ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ (Gulbarga University)ಅಕ್ರಮಬಯಲಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಸ್ ಆಗಿರುವ ಅಂಕಪಟ್ಟಿ (Marks Card) ನೀಡಿರುವುದು ಬೆಳಕಿಗೆ ಬಂದಿದೆ. ಹಣ ನೀಡಿದರೆ ಸಾಕು ಫೇಲ್ ಆದವರಿಗೂ ವಿವಿ ಸಿಬ್ಬಂದಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ. ನಾಗರಾಜ್ ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈತ ಫೇಲ್ ಆಗಿದ್ದರೂ ವಿವಿ ಸಿಬ್ಬಂದಿ 30 ಸಾವಿರ ರೂಪಾಯಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿದೆ. ಈ ಬಗ್ಗೆ ವಿದ್ಯಾರ್ಥಿ ತನಗೆ ವಿವಿಯಿಂದ ಅನ್ಯಾಯವಾಗಿದೆ …

Read More »

ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಕೈದಿಯಾಗಿ ಪತಿ ಮಹಾಶಯ ಎಂಟ್ರಿ!

ಕಲಬುರಗಿ: ಪತಿಯನ್ನು ಪತ್ನಿಯೇ ಬಂಧಿಸಿ ಜೈಲಿಗೆ ಕಳುಹಿಸುವುದು, ಪತ್ನಿಯನ್ನು ಬಂಧಿಸಿ ಪತಿ ಜೈಲಿಗೆ ಕಳುಹಿಸುವುದು, ಮಗನೇ ಹೆತ್ತವರನ್ನು ಬಂಧಿಸೋದು, ಈ ರೀತಿಯ ಅನೇಕ ಘಟನೆಗಳು ಆಗಾಗ ಘಟಿಸುತ್ತಿರುತ್ತವೆ. ಇಲ್ಲಾ ಅಂತೇನೂ ಅಲ್ಲ. ಆದ್ರೆ ಇದೀಗ ಸ್ವತಃ ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಪತಿ ಮಹಾಶಯ ಹೋಗಿದ್ದಾನೆ. ಹಾಗಂತ ಅತಿಥಿಯಾಗಿ ಅಲ್ಲಾ, ಬದಲಾಗಿ ವಿಚಾರಣಾಧೀನ ಕೈದಿಯಾಗಿ! ಇಂತಹದೊಂದು ಘಟನೆಗೆ ಇದೀಗ ಕಲಬುರಗಿ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದೆ. ಹೌದು ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ …

Read More »

5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಕೈಗಾರಿಕಾ ವಲಯ

ಕಲಬುರಗಿ: ಹಿಂದುಳಿದ ಭಾಗವಾದ ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ಹಾಗೂ ‌ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ‌ನಿರಾಣಿ ಪ್ರಕಟಿಸಿದರು. ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ …

Read More »

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

ಕಲಬುರಗಿ: ನಗರದಲ್ಲಿ ಹಾಡು ಹಗಲೇ ಬೈಕ್‌ಗಳ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಸಹೋದರರನ್ನು ಉತ್ತರ ಉಪವಿಭಾಗದ ಚೌಕ್‌ ಠಾಣೆ ಪೊಲೀಸರು ಬಂಧಿಸಿ, 3.5 ಲಕ್ಷ ರೂ. ಮೌಲ್ಯದ ಐದು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಕಾಳಗಿ ತಾಲೂಕಿನ ಕೊರವಾರ ಗ್ರಾಮದ ವಿಕಾಸ ಹೊಸಮನಿ, ರಾಮಚಂದ್ರ ಹೊಸಮನಿ ಬಂಧಿತ ಸಹೋದರರು. ಬುಧವಾರ ಬೆಳಗ್ಗೆ ತಾಜ್‌ ಸುಲ್ತಾಪುರ ರಸ್ತೆಯಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ಕಳ್ಳರು …

Read More »

ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

ಕಲಬುರಗಿ: ಪಾರ್ಕ್ ನಲ್ಲಿ ಆಟ ಆಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಆಘಾತಕಾರಿ ಘಟನೆ ನಗರದ ಎನ್.ಜಿ.ಓ. ಕಾಲೋನಿಯ ಹನುಮಾನ್ ಮಂದಿರದ ಉದ್ಯಾನವನದಲ್ಲಿ ನಡೆದಿದೆ. ನಗರದ ಎನ್.ಜಿ.ಓ. ಕಾಲೋನಿಯ ಮಹಾದೇವಿ ಸುರೇಶ ದಂಪತಿ ಪುತ್ರ 6 ವರ್ಷದ ಸಿದ್ದು ಮೃತ ಬಾಲಕ. ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾನೆ. ಹನುಮಾನ್ ಮಂದಿರದ ಉದ್ಯಾನವನದಲ್ಲಿನ ಹೈ ಮಾಸ್ಕ್ ದೀಪದ ವಿದ್ಯುತ್ ವೈರ್ ಕಟ್ ಆಗಿ ಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. …

Read More »

ಕಾನೂನು ಸುವ್ಯವಸ್ಥೆಗೆ 10 ಸ್ಕಾರ್ಪಿಯೊ

ಕಲಬುರ್ಗಿ: ದೆಹಲಿಯ ನಿರ್ಭಯಾ ಘಟನೆ ಬಳಿಕ ನಗರ ಪ್ರದೇಶದಲ್ಲಿ ಮಹಿಳಾ ಸುರಕ್ಷತೆ ಸೇರಿದಂತೆ ಸಂಭವ ನೀಯ ಅವಘಡಗಳನ್ನು ತಡೆಯಲು ಕಲಬುರ್ಗಿ ಕಮಿಷನರೇಟ್‌ಗೆ ಗೃಹ ಇಲಾಖೆ 10 ಸುಸಜ್ಜಿತ ಸ್ಕಾರ್ಪಿಯೊ ಜೀಪ್‌ಗಳನ್ನು ಮಂಜೂರು ಮಾಡಿದೆ. ಕೆಲವೇ ದಿನಗಳಲ್ಲಿ ಅವು ಸೇವೆಗೆ ಸೇರ್ಪಡೆಗೊಳ್ಳಲಿವೆ. ಈ ವಾಹನಕ್ಕೆ ಜಿಪಿಎಸ್‌ ವ್ಯವಸ್ಥೆ ಇರಲಿದ್ದು, 112 ಸಂಖ್ಯೆಗೆ ಯಾರಾದರೂ ಕರೆ ಮಾಡಿದರೆ ಅದರ ವಿವರಗಳು ಬೆಂಗಳೂರಿನ ಕಂಟ್ರೋಲ್‌ ರೂಮ್‌ಗೆ ಹೋಗಲಿದೆ. ಅಲ್ಲಿಂದ ಸಮೀಪದ ವಾಹನದಲ್ಲಿರುವ ಕಂಪ್ಯೂಟರ್‌ ಪರದೆಯ …

Read More »

ಕೊರೊನಾ ಸಂದರ್ಭದಲ್ಲಿ ಪ್ರತಿಭಟನೆ ಕೈಬಿಡುವಂತೆ ಸಾರಿಗೆ ನೌಕರರಲ್ಲಿ ಸಚಿವ ಲಕ್ಷ್ಮಣ್ ಸವದಿ ಮನವಿ

ಕಲಬುರಗಿ: ಕೊರೊನಾ ಸಂದರ್ಭದಲ್ಲಿ ಪ್ರತಿಭಟನೆ ಕೈಬಿಡುವಂತೆ ಸಾರಿಗೆ ನೌಕರರಲ್ಲಿ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಯವಿಟ್ಟು ಕೊರೊನಾ ಸಂಕಷ್ಟದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನೀತಿ ಸಂಹಿತೆಯಿಂದಾಗಿ ಬೇಡಿಕೆ ಈಡೇರಿಕೆಗೆ ಸಾಧ್ಯವಿಲ್ಲ. ಘೋಷಣೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು. ನೀತಿ ಸಂಹಿತೆ ಜಾರಿ ಇರೋದ್ರಿಂದ ಏನು ಹೇಳಲು ಆಗೋದಿಲ್ಲ. ಇಂದು ಸಾರಿಗೆ ನೌಕರರ ಜೊತೆ ಜೊತೆ …

Read More »

ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ :ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕಲಬುರಗಿ : ಸಿಡಿ ಪ್ರಕರಣದ ಬಗ್ಗೆ ಏನು ಮಾತಾಡಬೇಕೋ ಅದನ್ನು ವಿಧಾನಸಭೆಯಲ್ಲೇ ಮಾತನಾಡಿದ್ದೇನೆ. ನಾನು ಈಗ ಚುನಾವಣೆ‌ಗೋಸ್ಕರ ಬಂದಿದ್ದೇನೆ. ಅದರ ಬಗ್ಗೆ ಮಾತನಾಡಲ್ಲ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿ ಸಂಸ್ಕೃತಿ ಸೇರಿದಂತೆ ಎಲ್ಲರ ಸಂಸ್ಕೃತಿಯನ್ನ ಜನ ಗಮನಿಸುತ್ತಿದ್ದಾರೆ. ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ. ಅವರ ಸರ್ಕಾರ ಅವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆ‌ ನೀಡಿಸುತ್ತಿರಬಹುದು. ಅವರು ಏನಾದರೂ ಹೇಳಿಕೆ ಕೊಡಲಿ, ನಾನು ತಲೆ ಕೆಡಿಸಿಕೊಳ್ಳಲ್ಲ. …

Read More »

ಮೂವರು ಖತರ್ನಾಕ್ ಕಳ್ಳರ ಬಂಧನ: 28 ಬೈಕ್ ಜಪ್ತಿ

ಕಲಬುರಗಿ:  ನಗರದ ವಿವಿಧ ಕಾಲೋನಿಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಸ್ಟೇಷನ್​ ಬಜಾರ್​​ ಠಾಣೆಯ ಪೊಲೀಸರು   ಬಂಧಿಸಿದ್ದಾರೆ. ವಿಶ್ವನಾಥ್​ ಹಂಗರಗಿ (19), ಮಲ್ಲಿಕಾರ್ಜುನ್​ ಮಲಬುದ್ದಿ (23) ಹಾಗು ಭಗವಂತ ಪೂಜಾರಿ(22) ಬಂಧಿತರು. ಆರೋಪಿ ಕಲಬುರಗಿ ನಗರದ ನಿವಾಸಿಗಳಾಗಿದ್ದು ಇಬ್ಬರು ಮೊಬೈಲ್​ ರಿಪೇರಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ವಿದ್ಯಾರ್ಥಿಯಾಗಿದ್ದ. ಕಳೆದ ಕೆಲ ದಿನಗಳಿಂದ ಮೂವರು ಸೇರಿ ಕಲಬುರಗಿ ನಗರದ ಖೂಬಾ ಪ್ಲಾಟ್​, ಸಿಐಬಿ ಕಾಲೋನಿ, ಗೊದುತಾಯಿ ನಗರ, ಸಾಯಿ ಮುಂದಿರ, ಸಂತೋಷ್​ ಕಾಲೋನಿ, …

Read More »

ಸಿಡಿ ವಿವಾದವು ಬಿಜೆಪಿ ಮುಕ್ತ ರಾಜ್ಯಕ್ಕೆ ಮುನ್ನುಡಿ ಬರೆದಿದೆ | ಭವಿಷ್ಯ ನುಡಿದ ಪ್ರಿಯಾಂಕ್ ಖರ್ಗೆ

  ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿವಾದ ಸೃಷ್ಟಿಯಾಗಿದ್ದು, ಇದು ಬಿಜೆಪಿ ಮುಕ್ತ ಕರ್ನಾಟಕಕ್ಕೆ ನಾಂದಿ ಹಾಡಲಿದೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಎದ್ದಿರುವ ಸಿಎಂ ಯಡಿಯೂರಪ್ಪನವರ ಸಿಡಿ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಕೇವಲ ಬಿಎಸ್ ವೈ ಮುಕ್ತ ಬಿಜೆಪಿ ಮಾತ್ರವಲ್ಲ, ಬಿಜೆಪಿ ಮುಕ್ತ ರಾಜ್ಯ ಆಗುವ ಮುನ್ನುಡಿ …

Read More »