Breaking News
Home / ಜಿಲ್ಲೆ / ಕಷ್ಟಪಟ್ಟು ಬಿಎಂಟಿಸಿ ನೌಕರಿ ಗಿಟ್ಟಿಸಿದ್ದ ಮಗ ಈಗ ಐಎಎಸ್

ಕಷ್ಟಪಟ್ಟು ಬಿಎಂಟಿಸಿ ನೌಕರಿ ಗಿಟ್ಟಿಸಿದ್ದ ಮಗ ಈಗ ಐಎಎಸ್

Spread the love

ಬೆಂಗಳೂರು: ಆತನದ್ದು ತೀರ ಬಡ ಕುಟುಂಬ. ಮನೆಯಲ್ಲಿ ಹೆಚ್ಚು ಕಲಿತವರಿಲ್ಲ. ಸರ್ಕಾರಿ ನೌಕರಿ ಅಂದ್ರೆ ದೊಡ್ಡದು, ಕಷ್ಟಪಟ್ಟು ಬಿಎಂಟಿಸಿ ನೌಕರಿ ಗಿಟ್ಟಿಸಿದ್ದ ಮಗ ಈಗ ಐಎಎಸ್ ಪಾಸ್ ಆಗುವ ಹಂತದಲ್ಲಿ ಇದ್ದಾನೆಂದ್ರೆ ಸಂತಸಕ್ಕೆ ಪಾರವೇ ಇಲ್ಲ.

ಹೌದು, ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಧು ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿದ್ದು, ಸಂದರ್ಶನಕ್ಕೆ ಕಾಯುತ್ತಿದ್ದಾರೆ.

ದಿನಕ್ಕೆ ಎಂಟು ಗಂಟೆ ಕಂಡಕ್ಟರ್ ಕೆಲಸ ಮಾಡುತ್ತಿದ್ದ ಮಧು ಐದು ಗಂಟೆ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದರ ಫಲವಾಗಿ ಈಗ ಐಎಎಸ್ ಮುಖ್ಯ ಪರೀಕ್ಷೆಯಲ್ಲಿ ವಾಪಾಗಿದ್ದು, ಸಂದರ್ಶನ ತೇರ್ಗಡೆಯಾಗುವ ತವಕದಲ್ಲಿದ್ದರಾರೆ.

ಯುಪಿಎಸ್ಸಿ ಮುಖ್ಯ ಪರೀಕ್ಷೆ ಫಲಿತಾಂಶ ಈಚೆಗೆ ಇತ್ತೀಚೆಗೆ ಬಿಡುಗಡೆಯಾಗಿದ್ದು, ಆಯ್ಕೆ ಪಟ್ಟಿಯಲ್ಲಿ ತಮ್ಮ ರಿಜಿಸ್ಟರ್ ನಂಬರ್ ನೋಡಿದಾಗ ಮಧು ಅವರಿಗೆ ಎಲ್ಲಿಲ್ಲದ ಸಂತೋಷ. ಅವರ ಖುಷಿಗೆ ಪಾರವೇ ಇರಲಿಲ್ಲ. ಸಂದರ್ಶನ ಹಂತ ಬಾಕಿ ಇದ್ದು, ಮಧ್ಉ ತಮ್ಮ ಬದುಕಿನ ಅಮೂಲ್ಯ ಘಟಕ್ಕೆ ಕಾಯುತ್ತಿದ್ದಾರೆ.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಮಧು ಅವರು 2019 ಜೂನ್ ನಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. 2019ರ ಅಕ್ಟೋಬರ್ ನಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು.

ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿದ್ದ ಮಧು ಅವರು ಪೊಲಿಟಿಕಲ್ ಸೈನ್ಸ್ ಹಾಗೂ ಇಂಟರ್ನ್ಯಾಷನಲ್ ರಿಲೇಶನ್ಸ್ ವಿಷಯ ಆಯ್ಕೆ ಮಾಡಿಕೊಂಡಿದ್ದರು. ಮಧು ಅವರು ಕನ್ನಡದಲ್ಲಿ ಯುಪಿಎಸ್ಸಿ ಪೂರ್ವ ಪರೀಕ್ಷೆ ಬರೆದಿದ್ದರು ಎಂಬುದು ವಿಶೇಷ. ಇಂಗ್ಲಿಷ್ನಲ್ಲಿ ಮುಖ್ಯ ಪರೀಕ್ಷೆ ಬರೆದಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನವರಾದ ಮಧು ಶಾಲೆ, ಕಾಲೇಜು ಹಂತ ಮುಗಿಸಿ 19 ನೇ ವಯಸ್ಸಿಗೆ ಬಸ್ ಕಂಡಕ್ಟರ್ ವೃತ್ತಿ ಆರಂಭಿಸಿದ್ದರು. ತದನಂತ ದೂರ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪೂರೈಸಿದ್ದಾರೆ.

ಪರೀಕ್ಷೆಗಾಗಿ ಕೆಲಸ ನಡುವೆಯೂ ಪ್ರತಿದಿನ ಐದು ಗಂಟೆ ವಿದ್ಯಾಭ್ಯಾಸ ಮಾಡುತ್ತಿರುವ ಮಧು ಅವರಿಗೆ ತಮ್ಮ ಸಾಧನೆಗೆ ಬಗ್ಗೆ ಹೆಮ್ಮೆ ಇದೆ. ನನ್ನ ತಂದೆ ಹಾಗೂ ತಾಯಿಗೆ ಪರೀಕ್ಷೆ ಏನೆಂದು ಗೊತ್ತಿಲ್ಲ. ಆದರೆ ಈಗ ನನ್ನ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಾರೆ ಎಂದು ತಿಳಿಸಿದ್ದಾರೆ.

ಯುಪಿಎಸ್ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ತರಗತಿಗೆ ಹೋಗಿಲ್ಲ ಎನ್ನುವ ಮಧು ಬಿಎಂಟಿಸಿ ಹಿರಿಯ ಅಧಿಕಾರಿ ಎ.ಶಿಖಾ ಅವರು ಮಾರ್ಗದರ್ಶನ ನೀಡುತ್ತಿರುವುದನ್ನು ಸ್ಮರಿಸುತ್ತಾರೆ. ಪರೀಕ್ಷೆಗೆ ತಯಾರಿ ನಡೆಸಲು ಯುಟ್ಯೂಬ್ ವಿಡಿಯೋ ಹಾಗೂ ವೆಬ್ ಸೈಟ್ ನಲ್ಲಿ ಮಾಹಿತಿಯನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ.

2014 ರಲ್ಲಿ ಬರೆದ ಕೆಎಎಸ್ ಪರೀಕ್ಷೆಯಲ್ಲಿ ಫೇಲ್ ಆದೆ. ಅದರಿಂದ ನಾನು ನಿರುತ್ಸಾಹ ಪಡಲಿಲ್ಲ. ನಂತರ 2018 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದೆ. ಆಗಲೂ ಪಾಸ್ ಆಗಲಿಲ್ಲ. ನಂತರ 2019ರಲ್ಲಿ ಪರೀಕ್ಷೆ ಬರೆದಿದ್ದು ಈಗ ಅಂತಿಮ ಹಂತದಲ್ಲಿ ಇದ್ದೇನೆ. ಪರಿಶ್ರಮಕ್ಕೆ ಬೆಲೆ ಇದೆ ಎಂದು ಮಧು ತಿಳಿಸಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ