Breaking News
Home / ಜಿಲ್ಲೆ / ಬೆಂಗ್ಳೂರಿಗೆ ಲಾಕ್‍ಡೌನ್‍ನಿಂದ ಸದ್ಯಕ್ಕಿಲ್ಲ ರಿಲೀಫ್………

ಬೆಂಗ್ಳೂರಿಗೆ ಲಾಕ್‍ಡೌನ್‍ನಿಂದ ಸದ್ಯಕ್ಕಿಲ್ಲ ರಿಲೀಫ್………

Spread the love

ಬೆಂಗಳೂರು: ಸರ್ಕಾರ ಮಹಾಮಾರಿ ಕೊರೊನಾ ವೈರಸ್ ಅನ್ನು ಹೊಡೆದೊಡಿಸಲು ಲಾಕ್‍ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಈ ಲಾಕ್‍ಡೌನ್ ಇಡೀ ದೇಶಾದ್ಯಂತ 3ರವರೆಗೂ ಮುಂದುವರಿಯಲಿದೆ. ಆದರೆ ಸಿಲಿಕಾನ್ ಸಿಟಿಗೆ ಮಾತ್ರ ಲಾಕ್‍ಡೌನ್‍ನಿಂದ ಮೇ 3ರಂದು ರಿಲೀಫ್ ಇಲ್ಲ.

ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣಗಳು ರಾಜಧಾನಿ ಬೆಂಗಳೂರಲ್ಲಿ ದಾಖಲಾಗಿವೆ. ಈ ಕೊರೊನಾ ಪಾಸಿಟಿವ್ ಪ್ರಕರಣಗಳ ನಿಯಂತ್ರಣಕ್ಕೆ ಬಿಬಿಎಂಪಿ 19 ಕಂಟೈನ್‍ಮೆಂಟ್ ಝೋನ್‍ಗಳೆಂದು ವಿಂಗಡಿಸಿ, ಬಿಗಿ ಭದ್ರತೆ ಒದಗಿಸುತ್ತಿದೆ. ಆದರೆ ಈ ಕಂಟೈನ್‍ಮೆಂಟ್ ಝೋನ್‍ಗಳು ನಾರ್ಮಲ್ ಸ್ಥಿತಿಗೆ ಬರುವ ದಿನಾಂಕವನ್ನು ಬಿಬಿಎಂಪಿ ಹೊರಡಿಸಿದ್ದು, ಕೆಲ ಏರಿಯಾಗಳಲ್ಲಿ ಈ ಅವಧಿ ಮೇ 3ಕ್ಕಿಂತ ವಿಸ್ತರಣೆ ಆಗಿದೆ.

ಕ್ವಾರಂಟೈನ್ ಅವಧಿ ಅಂತ್ಯವಾಗುವವರೆಗೆ ಕಂಟೈನ್‍ಮೆಂಟ್ ಝೋನ್‍ಗೆ ರಿಲೀಫ್ ಇಲ್ಲವೆಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
1. ಪಾದರಾಯನಪುರ – ಮೇ 16
2. ಆರ್‍ಆರ್ ನಗರ – ಮೇ 11
3. ಬೊಮ್ಮನಹಳ್ಳಿ – ಮೇ 11
4. ಸುಧಾಮನಗರ – ಮೇ 10
5. ರಾಧಾಕೃಷ್ಣ ವಾರ್ಡ್ – ಮೇ 9

ಬಿಬಿಎಂಪಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಸೋಂಕಿತರ ಪ್ರಾಥಮಿಕ, ಸೆಕೆಂಡರಿ ಕಾಂಟ್ಯಾಕ್ಟ್‍ನ ಕ್ವಾರಂಟೈನ್ ಅವಧಿ ಮೇಲೆ ನಿರ್ಧಾರವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್ ಹಾಗೂ ಕಮೀಷನರ್ ಅನಿಲ್ ಕುಮಾರ್, ಕ್ವಾರಂಟೈನ್ ಆದ 28 ದಿನಗಳಲ್ಲಿ ಒಂದೇ ಒಂದು ಕೇಸ್ ಪಾಸಿಟಿವ್ ಬಂದರೂ ಸೀಲ್‍ಡೌನ್ ಮುಂದುವರಿಸುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ಲಂಚದ ಹಣಕ್ಕಾಗಿ ಜೋಡೆತ್ತು ತಂದ ರೈತ!

Spread the love ಬಸವಕಲ್ಯಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಬಿಲ್‌ ಪಾವತಿಗೆ 5 ಸಾವಿರ ರೂ. ಲಂಚ ಕೇಳಿದ್ದರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ