Breaking News
Home / ಜಿಲ್ಲೆ / ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಬೇಸತ್ತ ರೈತ ಆತ್ಮಹತ್ಯೆ

ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಬೇಸತ್ತ ರೈತ ಆತ್ಮಹತ್ಯೆ

Spread the love

ಬೆಂಗಳೂರು: ಕೊರೊನಾ ವೈರಸ್ ನಿಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್​ಡೌನ್​ನಿಂದಾಗಿ ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಬೇಸತ್ತ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಗಂಗಾಧರ್ (60) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ. ತುಮಕೂರಿನ ಶಿರಾ ತಾಲ್ಲೂಕಿನ ದೇವರಹಳ್ಳಿಯಲ್ಲಿರುವ ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಬ್ಯಾಂಕ್​ ಮತ್ತು ಸ್ಥಳೀಯ ಸಾಲಗಾರರ ಬಳಿ ಸುಮಾರು 4.4 ಲಕ್ಷ ರೂ ಸಾಲ ಮಾಡಿದ್ದರು. ಬಿಸಿಲಿನ ಪರಿಣಾಮ ಜಮೀನಿನಲ್ಲಿ ತೆರೆದ ಎರಡು ಬೋರ್ವ್​ವೆಲ್​​ಗಳು ಒಣಗಿದ ಕಾರಣ ರೈತ ಇತ್ತೀಚೆಗೆ ಮತ್ತೆರಡು ಹೊಸ ಬೋರುಗಳನ್ನು ತೆಗೆಸಿದ್ದ. ಬೇಸಿಗೆಯ ಕಾರಣದಿಂದಾಗಿ, ಆ ಹೊಸ ಬೋರುಗಳು ಸಹ ನೀರನ್ನು ಕಾಣಲಿಲ್ಲ. ಇದರಿಂದಾಗಿ ರೈತ ತತ್ತರಿಸಿ ಹೋಗಿದ್ದ, ಆದರೆ ಕಷ್ಟಪಟ್ಟು ಹೇಗೋ ಬೆಳೆಯನ್ನು ಉಳಿಸಿಕೊಂಡಿದ್ದ. ಇದರ ನಡುವೆ ಇತ್ತೀಚಿನ ದಿನಗಳಿಂದಾಗಿ ಲಾಕ್ ಡೌನ್ ಜಾರಿಯಾದ ಪರಿಣಾಮ ಬೆಳೆದ ಬೆಳೆಗಳನ್ನು ಮಾರಾಟ ಮಾಡಲೂ ಸಾಧ್ಯವಾಗದ ಕಾರಣ ದಿಕ್ಕೇ ತೋಚದಂತಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಭ್ರೂಣ ಹತ್ಯೆ ತಡೆಯುವಲ್ಲಿ ಕರ್ತವ್ಯ ಲೋಪ; ಇಬ್ಬರು ಅಧಿಕಾರಿಗಳ ಅಮಾನತು

Spread the love ನಗರದ ಮಾತಾ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ (Female foeticide) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ