ಬೆಂಗಳೂರು: ರಾಜ್ಯದಲ್ಲಿ ಸಂಜೆ ವೇಳೆ ಮತ್ತೆ 70 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಸೋಂಕಿತರ 2781 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 248 ದಾಖಲೆ ಪ್ರಮಾಣದ ಕೇಸ್ ಗಳು ದಾಖಲಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ವೇಳೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಚಿಕ್ಕಬಳ್ಳಾಪುರದಲ್ಲಿ ಅಡ್ಮಿಟ್ ಆಗಿದ್ದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಹೀಗಾಗಿ ಈವರೆಗೂ ಸೋಂಕಿನಿಂದಾಗಿ ಒಟ್ಟು 48 ಜನರು ಸಾವನ್ನಪ್ಪಿದ್ದಾರೆ. ಒಟ್ಟು 894 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 1837 ಆ್ಯಕ್ಟಿವ್ ಕೇಸ್ಗಳು ಇರೋದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಮಾಹಿತಿ:
ವಿಜಯಪುರ-4
ಕಲಬುರಗಿ-46
ಚಿಕ್ಕಬಳ್ಳಾಪುರ-3
ಬೆಂಗಳೂರು ನಗರ-2
ಹಾಸನ-4
ತುಮಕೂರು-2
ಬಳ್ಳಾರಿ-9
https://www.facebook.com/105350550949710/posts/168918847926213/?sfnsn=wiwspwa&extid=vrrditwxn4IpvDQJ&d=w&vh=e