ಬೆಂಗಳೂರು – ರಾಜ್ಯದಲ್ಲಿ ಇಂದು ಕೊರೋನಾ ಸಂಬಂಧ ಹೊಸ ದಾಖಲೆ ಸೃಷ್ಟಿಯಾಗಿದೆ. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡಿದ್ದ ಕೊರೋನಾ ಇಂದು ಕೇವಲ ಒಂದೇ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಇಂದು ಬಂದಿರುವ ವರದಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯೋರ್ವಳಲ್ಲಿ ಮಾತ್ರ ಕೊರೋನಾ ವೈರಸ್ ಪತ್ತೆಯಾಗಿದೆ. ಉಳಿದಂತೆ ಬೇರೆ ಯಾವುದೇ ಪ್ರದೇಶದಲ್ಲಿ ಕೊರೋನಾ ರೋಗ ಪತ್ತೆಯಾಗಿಲ್ಲ. ಇದರಿಂದಾಗಿ ರಾಜ್ಯದಲ್ಲಿ ರೋಗಿಗಳ ಸಂಖ್ಯೆ 501 ಆದಂತಾಗಿದೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದ ವರೆಗೆ ರಾಜ್ಯದಲ್ಲಿ ಓರ್ವರಲ್ಲಿ ಮಾತ್ರ ಸೋಂಕು ಪತ್ತೆಯಾಗಿರುವುದು ಸಾಮಾಧಾನಕರ ಸಂಗತಿಯಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ,ಕಲಬುರಗಿ, ಮೈಸೂರಿನಲ್ಲಿ ಕೂಡ ಯಾವುದೇ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ನಿನ್ನೆ ಒಂದೇ ದಿನ 26 ಕೇಸ್ ಗಳು ಪಾತ್ತೆಯಾಗಿತ್ತು.
ಇಂದು ರಾಜ್ಯದಲ್ಲಿ ಪತ್ತೆಯಾದ ಕರೊನಾ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯದ್ದಾಗಿದೆ. ಜಿಲ್ಲೆಯ 47 ವರ್ಷದ ಓರ್ವ ಮಹಿಳೆಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪಾದರಯನಪುರ, ಬಿಹಾರಿ ಕಾರ್ಮಿಕರ ನಂಟಿನ ನಡುವೆಯೂ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂಬುದು ನಂಜಿನ ನಾಡುವೆಯೂ ನಿಟ್ಟುಸಿರು ಬಿಡುವಾಂತಗಿದೆ.