ಬೆಂಗಳೂರು, ಮಾ.14- ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿದ್ದಕ್ಕಾಗಿ ಪೀಣ್ಯ ಸಂಚಾರಿ ಠಾಣೆ ಪೊಲೀಸರು 500 ರೂ. ದಂಡ ವಿಧಿಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪೀಣ್ಯ ಬಳಿ ಸಂಚರಿಸುತ್ತಿದ್ದ ಹೀರೋ ವೊಂಡಾ ಬೈಕ್‍ನನ್ನು ತಡೆದ ಪೊಲೀಸರು ಚಾಲಕ ಮಹೇಶ್‍ಗೆ 500 ರೂ. ದಂಡ ವಿಧಿಸಿದ್ದಾರೆ.
ಕಾರಣ ಕೇಳಿದಾಗ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಸಂಪೂರ್ಣವಾಗಿ ಕನ್ನಡದಲ್ಲಿ ಬರೆಸಲಾಗಿದೆ. ಇದು ನಿಯಮ ಬಾಹೀರ, ಹಾಗಾಗಿ ದಂಡ ವಿಧಿಸಿರುವುದಾಗಿ ಪೊಲೀಸರು ಸಮಜಾಯಿಸಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಆಗಿದ್ದ ಮೇಲೆ ಕನ್ನಡದಲ್ಲಿ ವಾಹನಗಳ ನೋಂದಣಿ ಫಲಕ ಬರೆಸಿದರೆ ತಪ್ಪೇನು ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
