Breaking News

ತಮಿಳುನಾಡಿಗೆ ಆಗಸ್ಟ್‌ ತಿಂಗಳ ನೀರಿನ ಪಾಲು ಬಿಡುಗಡೆ ಸಾಧ್ಯವಿಲ್ಲ: ಸುಪ್ರೀಂಗೆ ಕರ್ನಾಟಕ ಪ್ರತಿಕ್ರಿಯೆ

Spread the love

ನವದೆಹಲಿ: ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಪ್ರತಿಕ್ರಿಯೆ ಸಲ್ಲಿಸಿದೆ.

ತಮಿಳುನಾಡು ಸಲ್ಲಿಸಿದ ಅರ್ಜಿಗೆ ಕರ್ನಾಟಕ ಪ್ರತಿಕ್ರಿಯೆ ದಾಖಲು ಮಾಡಿದೆ. ಎಲ್-ನಿನೊ ಪರಿಣಾಮದಿಂದ ಪ್ರಸ್ತುತ ವರ್ಷ ಮಳೆಯ ಕೊರತೆಯಾಗಿದೆ. ಮಳೆಯ ಕೊರತೆ ನಡುವೆ ನೀರು ಹರಿಸಲು CWRC ಶಿಫಾರಸು ಮಾಡಿದೆ. ಈ ಶಿಫಾರಸನ್ನು CWMA ಅನುಮೋದಿಸಿದೆ. 12 ಸಾವಿರ ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ರಾಜ್ಯ ವಾದಿಸಿದೆ.

ಜೂನ್-ಜುಲೈ ತಿಂಗಳ ಬಾಕಿ ನೀರಿನ ಜೊತೆಗೆ ಆಗಸ್ಟ್ ತಿಂಗಳ ನೀರಿನ ಪಾಲು ತಮಿಳುನಾಡು ಕೇಳಿದೆ. ಮಳೆ ಕೊರತೆ ಸಮಯದಲ್ಲಿ ನೀರು ಹರಿಸಲು ಸಂಕಷ್ಟ ಸೂತ್ರ ಇಲ್ಲ. ವಾಸ್ತವಾಂಶಗಳ ಆಧಾರದ ಮೇಲೆ ನೀರು ಹರಿಸಬೇಕಿದೆ ಎಂದು ಕರ್ನಾಟಕ ಹೇಳಿದೆ. ಈ ಮೂಲಕ CWRC, CWMA ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ವಿಚಾರಣೆ ಹಿನ್ನೆಲೆ ನಿನ್ನೆ ಸಂಜೆ ಕರ್ನಾಟಕ ಪರ ವಕೀಲರು ಪ್ರತಿಕ್ರಿಯೆ ದಾಖಲು ಮಾಡಿದ್ದಾರೆ. ಆದರೆ, ಅರ್ಜಿ ವಿಚಾರಣೆ ಸೋಮವಾರಕ್ಕೆ ನಿಗದಿಯಾಗಿದೆ. ನ್ಯಾ. ವಿಕ್ರಮನಾಥ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಿಗದಿಯಾಗಿದೆ. ಈ ಪ್ರತಿಕ್ರಿಯೆ ನಡುವೆ ರಾಜ್ಯದಿಂದ ಪ್ರತ್ಯೇಕ ಅರ್ಜಿ ಸಲ್ಲಿಕೆಗೂ ಸಿದ್ಧತೆಯಾಗಿದೆ.


Spread the love

About Laxminews 24x7

Check Also

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ATM ದರೋಡೆಕೋರರು ಕೊನೆಗೂ ಅರೆಸ್ಟ್‌

Spread the loveಬಿಹಾರದಲ್ಲಿ  ಆರೋಪಿಗಳ ಕಾರು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಅಮನ್‌ಕುಮಾರ್ ಸಿಂಗ್ & ಅಲೋಕ್‌ಕುಮಾರ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ‌‌‌‌. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ