ಬೆಳಗಾವಿ: ಸೂರ್ಯಗ್ರಹಣ ಹಿನ್ನಲೆಯಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಇಲ್ಲಿನ ಕೇಂದ್ರ ಕಚೇರಿಯಲ್ಲಿ ಭಾನುವಾರ ಬಾಡೂಟ ಸೇವಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ನೇತೃತ್ವದಲ್ಲಿ ವೇದಿಕೆಯ ಸಂಚಾಲಕರು, ಪ್ರಗತಿಪರರು, ಮುಂತಾದವರು ಭಾಗಿಯಾಗಿ ಊಟ ಸೇವಿಸಿದರು.
ಯುವಕರು ಮೌಢ್ಯದಿಂದ ಹೊರಬರಬೇಕು. ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳನ್ನು ಕಣ್ಣತುಂಬಿಕೊಳ್ಳಬೇಕು.
ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲ ರೀತಿಯಲ್ಲಿ ಅವುಗಳು ಸಹ ಗೋಚರಿಸುತ್ತಿವೆ. ಆದ್ರೆ ಅವುಗಳಿಗೆ ಮೌಢ್ಯದ ಆಚರಣೆ ಮೂಲಕ ಜನರ ಭಯಗೊಳಿಸಲಾಗುತ್ತಿದೆ. ಜನರು ಮೌಢ್ಯಗಳ ಆಚರಣೆಯಿಂದ ಹೊರ ಬರಬೇಕು. ಅಲ್ಲಿಯವರೆಗೂ ಮಾನವ ಬಂಧುತ್ವ ವೇದಿಕೆ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಯುವರಾಜ ತಳವಾರ, ರಾಮಕೃಷ್ಣ ಪಾನಬುಡೆ, ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್,
ಪ್ರಶಾಂತ ಪೂಜಾರಿ, ಸುಭಾಷ್ ಹೊನಮನಿ, ಚಿದು ಬೆಟಸೂರ, ಮಿಲಿಂದ ಕಾಂಬಳೆ, ಪ್ರಕಾಶ ಬಮ್ಮನವರ, ಬಸವರಾಜ ನಾಯಕ, ಪ್ರವೀಣ , ಬಾಲಕೃಷ್ಣ ನಾಯಕ, ಶಿವಾನಂದ ಕೋಳಿ, ಮನಿಷಾ ನಾಯಕ, ಉಶಾ ನಾಯಕ, ನೇಮಿಚಂದ್ರ ಸೇರಿದಂತೆ ಇತರರು ಇದ್ದರು.