ಬೆಂಗಳೂರು: ನಿಮಗೆ ಮುಖ್ಯವಾದ ಬ್ಯಾಂಕ್ ವ್ಯವಹಾರಗಳೇನಾದ್ರೂ ಇದ್ರೆ, ಅದನ್ನ ಮಾರ್ಚ್ 7ನೇ ತಾರೀಖಿನೊಳಗೆ ಮುಗಿಸಿಕೊಳ್ಳೋದು ಒಳ್ಳೆಯದು. ಯಾಕಂದ್ರೆ ಸಾಲು ಸಾಲು ರಜೆ ಹಿನ್ನೆಲೆ ಮಾರ್ಚ್ ಎರಡನೇ ವಾರದಲ್ಲಿ ಒಂದು ದಿನ ಮಾತ್ರ ಬ್ಯಾಂಕ್ ಸೇವೆ ಲಭ್ಯವಿರಲಿದೆ.
ದೇಶದಾದ್ಯಂತ ಮತ್ತೆ ಬ್ಯಾಂಕ್ಗಳು ಬಂದ್
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಮಾರ್ಚ್ 11ರಿಂದ 13ರವರೆಗೆ ಮುಷ್ಕರಕ್ಕೆ ಕರೆ ನೀಡಿದೆ. ಮಾರ್ಚ್ ಎರಡನೇ ವಾರದಲ್ಲಿ 11ರಿಂದ 13ನೇ ತಾರೀಖು ಬುಧುವಾರ, ಗುರುವಾರ ಮತ್ತು ಶುಕ್ರವಾರ ಬರುತ್ತೆ. ಅದಕ್ಕೂ ಮುನ್ನ ಮಾರ್ಚ್ 8 ಭಾನುವಾರ, 10ನೇ ತಾರೀಖು ಹೋಳಿಹುಣ್ಣಿಮೆ. ಮಾರ್ಚ್ 14 ಎರಡನೇ ಶನಿವಾರ, 15ರಂದು ಭಾನುವಾರ. ಹೀಗಾಗಿ ಮಾರ್ಚ್ 9 ನೇ ತಾರೀಖು ಬಿಟ್ಟರೆ ತಿಂಗಳ ಎರಡನೇ ವಾರ ಪೂರ್ತಿ ಬ್ಯಾಂಕ್ ಸೇವೆ ಇರುವುದಿಲ್ಲ.