Breaking News

ಖಾಸಗಿ ಆಸ್ಪತ್ರೆ ಮುಂದೆ ಕಸ ಸುರಿದು ಬಿಸಿ ಮುಟ್ಟಿಸಿದ ಬಳ್ಳಾರಿ ಪಾಲಿಕೆ‌ ಸಿಬ್ಬಂದಿ

Spread the love

ಬಳ್ಳಾರಿ: ಖಾಸಗಿ ಅಸ್ಪತ್ರೆಯವರಿಗೆ ಬುದ್ದಿ ಕಲಿಸಲು ಮಹಾನಗರ ಬಳ್ಳಾರಿ  ಪಾಲಿಕೆ ಸಿಬ್ಬಂದಿ ಕಸವನ್ನು ತಂದು ಅಸ್ಪತ್ರೆ ಮುಂದೆ ಸುರಿದು ಬಿಸಿ ಮುಟ್ಟಿಸಿದ್ದಾರೆ.

ಬಳ್ಳಾರಿಯ ಪಾರ್ವತಿ ನಗರದ ಪದ್ಮಾವತಿ ಕಿಡ್ನಿಕೇರ್ ಸೆಂಟರ್ ಮತ್ತು ಮೋಕಾ ರಸ್ತೆಯ ದ್ವಾರಕಾ ಆಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ವಾಹನದಲ್ಲಿ ಕಸ ತಂದು ಸುರಿದಿದ್ದಾರೆ.

ಪದ್ಮಾವತಿ ಕಿಡ್ನಿಕೇರ್ ಆಸ್ಪತ್ರೆ ಮತ್ತು ದ್ವಾರಕ ಅಸ್ಪತ್ರೆ ಸಿಬ್ಬಂದಿ ಮೆಡಿಕಲ್ ‌ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಈ ಎರಡು ಅಸ್ಪತ್ರೆಗೆ ಪಾಲಿಕೆ ನೋಟಿಸ್ ನೀಡಿದರೂ ಎಚ್ಚೆತ್ತುಕೊಂಡಿರಲಿಲ್ಲ.

ದಂಡ ಹಾಕಿದರೂ ಸರಿಯಾಗಿ ಕಟ್ಟದೇ ಉಡಾಫೆ ಮಾತನಾಡುತ್ತಿದ್ದರು. ಹೀಗಾಗಿ ಇಂದು ಬೆಳ್ಳಂಬೆಳಿಗ್ಗೆ ಅಸ್ಪತ್ರೆ ಮುಂದೆ ಪಾಲಿಕೆ ಸಿಬ್ಬಂದಿ ಕಸ ಸುರಿದಿದ್ದಾರೆ. ಹೀಗೆಯೇ ಮುಂದುವರಿದರೆ ಯಾರಾದರೂ ಕಸ ಎಲ್ಲೆಂದರಲ್ಲಿ ಅವರಿಗೂ ಹೀಗೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.


Spread the love

About Laxminews 24x7

Check Also

ಬಳ್ಳಾರಿಯಲ್ಲಿ ಉತ್ಖನನ ವೇಳೆ 3,000 ವರ್ಷಗಳಷ್ಟು ಹಳೆಯ ಮಾನವನ ಪಳೆಯುಳಿಕೆ ಪತ್ತೆ

Spread the loveಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ವೇಳೆ 3,000 ವರ್ಷದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ