Breaking News

Laxminews 24x7

ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದ ಪ್ರತಿಭಟನಾಕಾರರು!

ಮಂಡ್ಯ, ನವೆಂಬರ್ 25: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಾಡಅಂಕನಹಳ್ಳಿ ಗ್ರಾಮದಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಾಲು ಉತ್ಪಾದಕರು ಹತ್ತಾರು ಲೀಟರ್​​ ಹಾಲನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಸೇರಬೇಕಿದ್ದ ನೂರಾರು ಲೀಟರ್ ಹಾಲು ಮಣ್ಣು ಪಾಲಾಗಿದೆ. ಗ್ರಾಮದ ಹಾಲು ಉತ್ಪಾದಕರ ಸಂಘವನ್ನು ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಕೊಟ್ಟಿರುವ ಸೂಚನೆ‌ಯಂತೆ ಸೂಪರ್ ಸೀಡ್ ಮಾಡಲಾಗಿದೆ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಸಚಿವರು ದ್ವೇಷದಿಂದ ಹಾಲು ಖರೀದಿಸದಂತೆ ಮನ್ಮುಲ್​ಗೆ …

Read More »

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ಜೀವ ಕಳೆದುಕೊಂಡ ದುರ್ದೈವಿಗಳು

ಗೂಗಲ್​ ಮ್ಯಾಪ್ ನಂಬಿ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದು ಕಾರಿನ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದ, ಜತೆ ಆತನ ಸ್ನೇಹಿತರು ಕೂಡ ಇದ್ದರು. ಗೂಗಲ್ ತೋರಿಸಿದ್ದನ್ನು ನಂಬಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಹತ್ತಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸೇತುವೆ ಕಾಮಗಾರಿ ಅಲ್ಲಿಗೇ ನಿಂತಿದೆ ಅವರಿಗೆ ಇದು ಕಂಡಿಲ್ಲ, ಅಲ್ಲಿಂದ ನೇರವಾಗಿ ಕಾರು ಕೆಳಗಿರುವ ನದಿಗೆ ಬಿದ್ದ ಪರಿಣಾಮ ಮೂವರು ಪ್ರಾಣ …

Read More »

ಕುಲಿ ಕಾರ್ಮಿಕರ ಜೊತೆಗೆ ಕಬ್ಬು ಕಟಾವು ಮಾಡಿ ಸರಳತೆ ಮೆರೆದ ಸಿಪಿಐ ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರವಿಚಂದ್ರ ಬಿ ಸರಳತೆ

ಕುಲಿ ಕಾರ್ಮಿಕರ ಜೊತೆಗೆ ಕಬ್ಬು ಕಟಾವು ಮಾಡಿ ಸರಳತೆ ಮೆರೆದ ಸಿಪಿಐ ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರವಿಚಂದ್ರ ಬಿ ಸರಳತೆ ಹಾರೂಗೇರಿ ರೈತರ ಗದ್ದೆಯಲ್ಲಿ ಅರ್ಧಗಂಟೆ ಕಬ್ಬು ಕಟಾವು ಕೆಲಸದ ಒತ್ತಡ ನಡುವೆ ಕಬ್ಬು ಕಟಾವು ಕಾರ್ಮಿಕರ ಜೊತೆಗೆ ಜನಸಂಪರ್ಕ ಮುಂಜಾನೆ ಜಾಗಿಂಗ್ ಸಮಯದಲ್ಲಿ ರೈತರ ಗದ್ದೆಯಲ್ಲಿ ಕೆಲಸ ಸಿಪಿಐ ರವಿಚಂದ್ರ ಬಿ ಸರಳತೆ ನೋಡಿ ರೈತರು ಸಂತಸ ಇದೇ ಸಂದರ್ಭದಲ್ಲಿ ರೈತರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ …

Read More »

ಸರ್ಕಾರಕ್ಕೆ ಸಾರಿಗೆ ನೌಕರರ ಎಚ್ಚರಿಕೆ

ಬೆಂಗಳೂರು, ನವೆಂಬರ್ 25: ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರಕ್ಕೆ ಈಗಾಗಲೇ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್-9 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ‘ಕೈಗಾರಿಕಾ ವಿವಾದ ಕಾಯಿದೆ’ ಸೆಕ್ಷನ್- 22 ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್- 9 …

Read More »

ಕಾಂಗ್ರೆಸ್​​ನಲ್ಲಿ ಮತ್ತೆ ಭುಗಿಲೆದ್ದ ಅನುದಾನ ವಾರ್:

ಕಾಂಗ್ರೆಸ್​ನಲ್ಲಿ ಮತ್ತೆ ಅನುದಾನ ಸಂಬಂಧಿತ ವಾಕ್ಸಮರ​ ಶುರುವಾಗಿದೆ. ‘ಕೈ’ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ. ಹೊಸಪೇಟೆಯಲ್ಲಿ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮತ್ತು ಶಾಸಕ ಗವಿಯಪ್ಪ ಮಧ್ಯೆ ವಾಕ್ಸಮರ ಜೋರಾಗಿದೆ. ಜೊತೆಗೆ ಬಿಜೆಪಿ ಶಾಸಕರು ಕೂಡ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಗೂ ಮುನ್ನ ಕೆಲವು ದಿನಗಳ ಹಿಂದೆ ಕಾಂಗ್ರೆಸ್​ನಲ್ಲಿ ಸ್ಫೋಟಗೊಂಡಿದ್ದ ಅನುದಾನ ಅಸಮಾಧಾನದ ಬಾಂಬ್, ಇದೀಗ ಮತ್ತೆ ಸದ್ದು ಮಾಡುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಅನುದಾನದ …

Read More »

ಲೋಕಾಯುಕ್ತ ಸರ್ಚ್ ವಾರಂಟ್ ಜಾರಿ ಮಾಡಿದ್ದನ್ನು ಮೊದಲು ಸಚಿವ ಭೈರತಿ ಸುರೇಶ್​ಗೆ ತಿಳಿಸಲಾಗಿದೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಹಾಗಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಮ್ಮೆ ಹೇಳಿದರು. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಕೃಷ್ಣ, ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರಂಟ್ ಜಾರಿಯಾಗಿದ್ದರೂ ಡಿವೈಎಸ್​ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ, ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವರಿಗೆ ವಿಷಯವನ್ನು ತಿಳಿಸಲಾಗಿದೆ, ಭೈರತಿ ಸುರೇಶ್ ಚಾಪರ್​ನಲ್ಲಿ …

Read More »

ಜನವೇರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ನಡೆಯಲಿದೆ.

ಬೆಳಗಾವಿ : ಜನವೇರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ, ಉಪಾಧ್ಯಕ್ಷ ಭರತ ದೇಶಪಾಂಡೆ ಮತ್ತು  ಗುತ್ತಿಗೆದಾರ ರಾಜೇಂದ್ರ ದೇಸಾಯಿ ಅವರನ್ನು ಸಮಾವೇಶ ಸಮಿತಿಯ ರಾಜ್ಯಮಟ್ಟದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಅವರನ್ನು ಜಿಲ್ಲಾ ಮಟ್ಟದ ಸಂಘಟಕರನ್ನಾಗಿ ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ಈಗಾಗಲೇ …

Read More »

ಉಪ‌ ಚುನಾವಣಾ ಫಲಿತಾಂಶ ವಿಪಕ್ಷಗಳ ಆರೋಪಕ್ಕೆ ಜನರಿಂದಲೇ ಚಾಟಿ ಏಟು:ಹೆಬ್ಬಾಳಕರ್

ಜನರ ಆಶೀರ್ವಾದದಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ವಿರೋಧಿಗಳ ಟೀಕೆಗೆ ಜನ ಉತ್ತರ ಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿಗಳನ್ನು ನೀಡಿದೆ. ಮಹಿಳೆಯರು ಕೂಡ ಗ್ಯಾರಂಟಿಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಆಗಿದೆ. ಗ್ಯಾರಂಟಿಗಳ ಬಗ್ಗೆ ವಿರೋಧಿಗಳು ಪದೇ ಪದೇ ಟೀಕೆ ಮಾಡುತ್ತಿದ್ದರು. ಈ ಎಲ್ಲಾ …

Read More »

ಮನ್ ಕೀ ಬಾತ್’ನಲ್ಲಿ ಗುಬ್ಬಚ್ಚಿ ರಕ್ಷಣೆ ಪ್ರಸ್ತಾಪ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ “ಗುಬ್ಬಚ್ಚಿ” ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ಮನ್ ಕೀ ಬಾತ್’ನಲ್ಲಿ ಕರೆ ನೀಡಿದ್ದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬಾಗಲಕೋಟೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಮನ್ ಕೀ ಬಾತ್ ವೀಕ್ಷಿಸಿದ ಸಚಿವರು, ಮಕ್ಕಳು ಗುಬ್ಬಚ್ಚಿಯನ್ನು ಫೋಟೋ – ವಿಡಿಯೋದಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ದೇಶದಾದ್ಯಂತ …

Read More »

ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ

ಬೆಳಗಾವಿ: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು ಎಂದು ಗದುಗಿನ ಡಾ ತೋಂಟದ ಸಿದ್ದರಾಮ ಶ್ರೀಗಳು ನುಡಿದರು ಅವರು ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ  2024ನೇ ಸಾಲಿನ ಕರ್ಕಿ ಕಾವ್ಯಶ್ರೀ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಳಿದರು ಬೆಳಗಾವಿಯಂತಹ ಮರಾಠಿಮಯ …

Read More »