ನವದೆಹಲಿ: ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರನ್ನು ಎಕೆ-47 ಬಂದೂಕು ಹಿಡಿದು ನಿಲ್ಲಿಸಲಾಗಿದೆ, ಇಲ್ಲೇನು ನಕ್ಸಲೈಟ್ಗಳು, ದೇಶದ್ರೋಹಿಗಳು ಅಥವಾ ಟೆರರಿಸ್ಟ್ಗಳು ಇದ್ದಾರಾ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಶಾಂತಿಯುತವಾಗಿ ಪ್ರತಿಭಟನೆ …
Read More »ಭಾರತೀಯ ನೌಕಾಪಡೆಗೆ ಆನೆಬಲ – 3ನೇ ಜಲಾಂತಗಾರ್ಮಿ ಐಎನ್ಎಸ್ ಮಂಗ್ರೋಲ್ ಸೇರ್ಪಡೆ
ಮುಂಬೈ: ಭಾರತದ ನೌಕಾಪಡೆಗೆ 3ನೇ ಜಲಾಂತಗಾರ್ಮಿ ಐಎನ್ಎಸ್ ಮಂಗ್ರೋಲ್ ಸೇರ್ಪಡೆಯಾಗಿದೆ. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಸ್ವದೇಶಿ ಯುದ್ಧನೌಕೆಯನ್ನ ಮುಂಬೈನ ನೌಕಾ ಡಾಕ್ಯಾರ್ಡ್ನಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ಕರಾವಳಿ ಮತ್ತು ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿ ಬೆದರಿಕೆಗಳನ್ನು ಪತ್ತೆಹಚ್ಚಿ ಎದುರಿಸುವ ನೌಕಾಪಡೆಯ ಸಾಮರ್ಥ್ಯವನ್ನ ಈ ಯುದ್ಧನೌಕೆ ಹೆಚ್ಚಿಸಲಿದೆ. ನೀರಿನೊಳಗಿನ ಚಲನವಲನಗಳನ್ನ ಪತ್ತೆಹಚ್ಚಲು ನೆರವಾಗುವ ಅಭಯ್ ಹಲ್-ಮೌಂಟೆಡ್ ಸೋನಾರ್, ಶತ್ರು ಜಲಾಂತರ್ಗಾಮಿ ನೌಕೆಗಳನ್ನ ಧ್ವಂಸಗೊಳಿಸಲು ಲಘು ತೂಕದ …
Read More »SC, ST ಮೀಸಲಾತಿ ಹೆಚ್ಚಿಸಿದ್ದ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: SC & ST ಮೀಸಲಾತಿ ಹೆಚ್ಚಿಸಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಶೇ.50 ರಿಂದ ಶೇ.56 ಕ್ಕೆ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಿಸಿತ್ತು. ಸರ್ಕಾರ ಹೆಚ್ಚುವರಿ ಮೀಸಲಾತಿ ಕೊಟ್ಟಿದ್ದನ್ನ ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿಶ್ರಾ ಎಂಬವರು ಹೈಕೋರ್ಟ್ನಲ್ಲಿ PIL ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ಹಾಗೂ ನ್ಯಾ. ಕೆ.ಎಸ್.ಹೇಮಲೇಖಾ ಪೀಠ ಎಸ್ಸಿ-ಎಸ್ಟಿಗೆ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿಯನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಪರಿಶಿಷ್ಟ …
Read More »ಕಾಂಗ್ರೆಸ್ನಿಂದ ಸುಪ್ರೀಂ ಕೋರ್ಟ್ ಚಲೋ – ದೆಹಲಿಯ 6 ಮೆಟ್ರೋ ನಿಲ್ದಾಣಗಳು ಬಂದ್
ನವದೆಹಲಿ: ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಯಿಂದ ಕೇಂದ್ರ ದೆಹಲಿಯ ಪ್ರಮುಖ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಸೋಮವಾರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ ಕೇವಲ ಎರಡು ದಿನಗಳ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು …
Read More »ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ದುರ್ಮರಣ
ರಿಯಾದ್/ಹೈದರಾಬಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್ನ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಹೈದರಾಬಾದ್ನ ಮೆಹದಿಪಟ್ನಂ ನಿವಾಸಿಯಾದ ಮೊಹಮ್ಮದ್ ಯೂಸುಫ್ ಅಲಿ ಶನಿವಾರ (ಅ. 10) ನಡೆದ ಮೊದಲ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಓರ್ವ ಪುತ್ರನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೋರ್ವ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿಹೋಗಿವೆ. ಯೂಸುಫ್ ಅವರ ಪತ್ನಿ …
Read More »ಪ್ರಜ್ವಲ್ ರೇವಣ್ಣ ಬೆಳಗಾವಿ ಜೈಲಿಗೆ ಶಿಫ್ಟ್ ಹೈಡ್ರಾಮಾ: ತುಮಕೂರಿನವರೆಗೂ ಕರೆದೊಯ್ದು ಮತ್ತೆ ವಾಪಸ್
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ಮಾರ್ಗಮಧ್ಯೆ ತುಮಕೂರಿನ ತನಕ ತಲುಪಿದ ಬಳಿಕ ದಿಢೀರ್ ವಾಪಸ್ ಬೆಂಗಳೂರಿಗೆ ಮರಳಿದ್ದಾರೆ. ಶನಿವಾರ ಸಂಜೆ ಸಿಎಆರ್ ಎಸ್ಕಾರ್ಟ್ ಪೊಲೀಸರು ಬಿಗಿ ಭದ್ರತೆಯೊಂದಿಗೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆದೊಯ್ಯುತ್ತಿದ್ದರು. ವಾಹನ …
Read More »ನಂದಿನಿ ಮಿಲ್ಕ್ ಪೌಡರ್ ಸೇಫ್ – ಆಹಾರ ಸುರಕ್ಷತಾ ಇಲಾಖೆ ವರದಿ
ಬೆಂಗಳೂರು: ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆಗಿದೆ ಎಂಬ ಆರೋಪದ ಬಳಿಕ ಇದೀಗ ಲ್ಯಾಬ್ ವರದಿ ಹೊರಬಂದಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತ (ಸೇಫ್) ಎಂದು ತಿಳಿದುಬಂದಿದೆ. ಈ ಹಿಂದೆ ನಂದಿನಿ ಮಿಲ್ಕ್ ಪೌಡರ್ನಲ್ಲಿ ಕಲಬೆರಕೆ ಆಗ್ತಿದೆ ಅನ್ನೋ ಗಂಭೀರ ಆರೋಪ ಇತ್ತು. ಇದರ ಬೆನ್ನಲ್ಲೇ ಮಿಲ್ಕ್ ಪೌಡರ್ ಗುಣಮಟ್ಟ ಟೆಸ್ಟ್ ಮಾಡಿಸಲು ಆರೋಗ್ಯ ಸಚಿವರು ಸೂಚನೆ ನೀಡಿದ್ದರು. ಬಳಿಕ ಸೆಪ್ಟೆಂಬರ್ 26ರಂದು ಕೆಎಂಎಫ್ ಡೈರಿಗಳಿಂದ ಮಿಲ್ಕ್ ಪೌಡರ್ ಸ್ಯಾಂಪಲ್ ಸಂಗ್ರಹ …
Read More »ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪ – ಖಂಡ್ರೆ ಸಹೋದರನಿಗೆ ಹೈಕೋರ್ಟ್ ನೋಟಿಸ್
ಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸಹೋದರ ಅಮರ್ ಖಂಡ್ರೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಡಿಸಿಸಿ ಬ್ಯಾಂಕ್ ಸದಸ್ಯರಾದ ಅತಿವಾಳ ಕಪಲಾಪುರ, ಶಿವರಾಜ್ ವೀರಶೆಟ್ಟಿ ಎಂಬುವರು ಅಮರ್ ಖಂಡ್ರೆ ರಾಜಕೀಯ ಪ್ರಭಾವದಿಂದಾಗಿ ನಿಯಮ ಬಾಹಿರವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಆದರೆ ಬ್ಯಾಂಕಿಂಗ್ ರೆಗ್ಯೂಲೇಶನ್ ಕಾಯ್ದೆ ಮತ್ತು ಆರ್ಬಿಐ (RBI) ತಿದ್ದುಪಡಿ ಗವರ್ನರ್ 2026ರ ಪ್ರಕಾರ ಒಬ್ಬರು ಮೂರನೇ ಅವಧಿಗೆ …
Read More »ಮಂಡ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಗಾಡಿ ರೇಸ್
ಮಂಡ್ಯ: ಕಟ್ಟುನಿಟ್ಟಿನ ನಿಯಮಗಳಿರಬೇಕಾದ ರಾಷ್ಟ್ರೀಯ ಹೆದ್ದಾರಿಯಲ್ಲೇ ಕೆಲ ಕಿಡಿಗೇಡಿಗಳು ಕಾನೂನನ್ನು ಗಾಳಿಗೆ ತೂರಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ಅನ್ನು ರೇಸ್ ಟ್ರಾಕ್ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ನಿಂದ ಕದಬಳ್ಳಿ ಟೋಲ್ ಗೇಟ್ವರೆಗಿನ ಹೆದ್ದಾರಿ ರಸ್ತೆಯಲ್ಲಿ ನಿನ್ನೆ ಸಂಜೆ ಕುದುರೆ ಗಾಡಿ ರೇಸ್ ಜೋರಾಗಿಯೇ ನಡೆದಿದೆ. ಪೊಲೀಸ್ ಇಲಾಖೆಯ ಅಥವಾ ಕಾನೂನಿನ ಯಾವುದೇ ಭಯವಿಲ್ಲದೇ, ಹೆದ್ದಾರಿಯ ಮಧ್ಯದಲ್ಲೇ ಕುದುರೆ …
Read More »ರಾಮಾಪುರದಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚನ್ನರಾಜ ಚಾಲನೆ
ಖಾನಾಪುರ: ತಾಲ್ಲೂಕಿನ ಭೂರಣಕಿ ಗ್ರಾಪಂ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿ ಭಾನುವಾರ ನವರಾತ್ರಿ ಅಂಗವಾಗಿ ಗ್ರಾಮಸ್ಥರು ಆಯೋಜಿಸಿದ್ದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಚಿನ್ನಿ ದಾಂಡು, ಲಗೋರಿ,ಖೋಖೋ, ಕುಸ್ತಿ, ಕಬಡ್ಡಿ, ಪಂದ್ಯಾವಳಿಗಳು ಇಂದಿನ ಯುಗದಲ್ಲಿ ನಶಿಸಿ ಹೋಗುವ ಸ್ಥಿತಿಗೆ ತಲುಪಿವೆ. ಗ್ರಾಮೀಣ ಪ್ರದೇಶದ ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದರು. ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ …
Read More »
Laxmi News 24×7