Breaking News

Laxminews 24x7

C.M. ಆಗ್ತಾರಾ ಲಕ್ಷ್ಮಣ ಸವದಿ ಎಂಬುದಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ……..!

ಬೆಂಗಳೂರು: ದೆಹಲಿ ಭೇಟಿ ಕುರಿತು ಸ್ಪಷ್ಟೀಕರಣ ನೀಡಿರುವ ಡಿಸಿಎಂ ಲಕ್ಷಣ ಸವದಿ ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು.ಅನಗತ್ಯವಾದ ಪ್ರಚಾರ ಬೇಡ ಎಂದು ಅಭಿಮಾನಿಗಳಲ್ಲಿ ಹಾಗೂ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಈ ಕುರಿತು ಬರೆದುಕೊಂಡಿರುವ ಅವರು ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯವಾದ ಪ್ರಚಾರ ಬೇಡ ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವ ನಿರ್ಧಾರಿತವಾಗಿದ್ದ ಕಾರ್ಯಕ್ರಮ ಅದರ ಬಗ್ಗೆ …

Read More »

ಖಾತೆಯಲ್ಲಿಯ 15 ಕೋಟಿ ಹೋಗಿದ್ದು ಯಾರ ಖಾತೆಗೆ?ಪಂಚ ಸವಾಲುಗಳಿಗೆ ಉತ್ತರ ಬೇಕೆಂದ ಸುಶಾಂತ್ ತಂದೆ

ಮುಂಬೈ/ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನದಿಂದ ದಿನ ಜಟಿಲವಾಗುತ್ತಾ ಹೋಗ್ತಿದೆ. ಸುಶಾಂತ್ ತಂದೆ ಕೆಕೆ ಸಿಂಗ್ ನಟಿ ರಿಯಾ ಚಕ್ರವರ್ತಿ ಮತ್ತು ಇಂದ್ರಜಿತ್ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಕೆ ಸಿಂಗ್ ದೂರಿನಲ್ಲಿ ತಮಗೆ ಐದು ಪ್ರಶ್ನೆಗಳಿಗೆ ಉತ್ತರ ಬೇಕಂದಿದ್ದಾರೆ. ಪಂಚ ಸವಾಲುಗಳು: 1. 2019ಕ್ಕಿಂತ ಮೊದಲು ನನ್ನ ಮಗನಿಗೆ ಯಾವುದೇ ಸಮಸ್ಯೆ ಇರಲಿಲ್ಲ. ರಿಯಾಳ ಸಂಪರ್ಕಕ್ಕೆ …

Read More »

ಆಕೆ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ನೀಡಿದ್ದಾಳೆ:ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ರಿಯಾ ಚಕ್ರವರ್ತಿ ಅವರ ವಿರುದ್ಧ ದೂರು ನೀಡಿದ್ದು, ಆಕೆ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ನೀಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುಶಾಂತ್ ಸಿಂಗ್ ಸಾವನ್ನಪ್ಪಿ ಒಂದು ತಿಂಗಳ ನಂತರ ಅವರ ತಂದೆ ಕೆಕೆ ಸಿಂಗ್ ಅವರು, ಇಂದು ಪೊಲೀಸರಿಗೆ ದೂರು ನೀಡಿದ್ದು, ರಿಯಾ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಜೊತೆಗೆ ಆಕೆ ನನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ …

Read More »

ಪತಿಯೊಬ್ಬ ಪತ್ನಿಯನ್ನು ಕೊಂದು ನಂತರ ಕುತ್ತಿಗೆ ಕೊಯ್ದುಕೊಂಡು ತಾನೂ ಆತ್ಮಹತ್ಯೆಗೆ

ಹೈದರಾಬಾದ್: ಪತಿಯೊಬ್ಬ ಪತ್ನಿಯನ್ನು ಕೊಂದು ನಂತರ ಕುತ್ತಿಗೆ ಕೊಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಅರುಣಾ (29) ಕೊಲೆಯಾದ ಪತ್ನಿ. ಆರೋಪಿ ಪತಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಭಾಕರ್ ಎಂಟು ವರ್ಷಗಳ ಹಿಂದೆ ಕರ್ನಾಟಕದ ಕೋಲಾರ ಮೂಲದ ಅರುಣಾ ಜೊತೆ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಭಾಕರ್ ಕುರಿಗಳನ್ನು ಸಾಕುತ್ತಾ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಇತ್ತೀಚೆಗೆ …

Read More »

ಕೊರೊನಾ ಸೋಂಕಿನಿಂದ ಬಿಡುಗಡೆಯಾದ ಬಳಿಕ ಜವಾಬ್ದಾರಿ ಮರೆತ ಸ್ಥಳೀಯ ಪತ್ರಿಕೆ ಪತ್ರಕರ್ತ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚಾಟ

ಬಾಗಲಕೋಟೆ: ಕೊರೊನಾ ಸೋಂಕಿನಿಂದ ಬಿಡುಗಡೆಯಾದ ಬಳಿಕ ಜವಾಬ್ದಾರಿ ಮರೆತ ಸ್ಥಳೀಯ ಪತ್ರಿಕೆ ಪತ್ರಕರ್ತ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚಾಟ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದಲ್ಲಿ ನಡೆದಿದೆ. ಇಬ್ಬರೂ ಕೊರೊನಾ ಸೋಂಕಿನಿಂದ ಬಿಡುಗಡೆ ಆಗಿದ್ದಕ್ಕೆ ಊರಲ್ಲಿ ಅಭಿಮಾನಿಗಳಿಂದ ಸಂಭ್ರಮ ಎಂಬ ಹುಚ್ಚಾಟ ನಡೆದಿದೆ. ಕೋವಿಡ್‍ನಿಂದ ಗುಣಮುಖ ಆಗಿ ಬಂದಿದ್ದಕ್ಕೆ ಇಬ್ಬರಿಗೆ ಅದ್ಧೂರಿ ಸ್ವಾಗತ ಕೋರಿದ್ದಲ್ಲದೇ ಗುಂಪು ಗುಂಪು ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, …

Read More »

ಮೆಜೆಸ್ಟಿಕ್‍ನಲ್ಲಿ ನೋಡ ನೋಡುತ್ತಿದ್ದಂತೆಯೇ ಧರೆಗುರುಳಿದ ಕಟ್ಟಡಗಳು!

ಬೆಂಗಳೂರು: ಕಪಾಲಿ ಚಿತ್ರಮಂದಿರದವರು ಮಾಡಿದ ಎಡವಟ್ಟಿನಿಂದ ಸಿಲಿಕಾನ್ ಸಿಟಿಯ ಮೆಜೆಸ್ಟಿಕ್ ನಲ್ಲಿ ಎರಡು ಕಟ್ಟಡಗಳು ಬಿದ್ದು ನೆಲಸಮವಾಗಿವೆ. ಇತ್ತೀಚೆಗೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಿಸಲು ಕಪಾಲಿ ಥಿಯೇಟರ್ ಅನ್ನು ಒಡೆದು ಹಾಕಲಾಗಿತ್ತು. ಈಗ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ಕಟ್ಟಡ ಕಟ್ಟಲಾಗುತ್ತದೆ. ಆದರೆ ಈ ಕಟ್ಟಡ ನಿರ್ಮಿಸಲು 80 ಅಡಿ ಆಳದಲ್ಲಿ ಗುಂಡಿ ತೆಗೆಯಲಾಗಿದೆ. ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಅಡಿಪಾಯ ಹಾಕಲು 80 ಅಡಿ ಆಳವಾಗಿ ಗುಂಡಿಯನ್ನು …

Read More »

ಮನೆಯಲ್ಲಿ ಜೂಜಾಟ ವಾಡುವಾಗ ಸಿಕ್ಕಿಬಿದ್ದ ಖ್ಯಾತ ನಟ.

ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. …

Read More »

ವರಮಹಾಲಕ್ಷ್ಮಿ ಹಬ್ಬಕ್ಕೆ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್ ಸಿನಿಮಾ ‘ಯುವರತ್ನ’ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್ ಎಂಬ ಮಹಾಮಾರಿಯಿಂದಾಗಿ ಅನಿವಾರ್ಯವಾಗಿ ಮುಂದೂಡಲಾಗಿದೆ. ಈ ಮಧ್ಯೆ ನಿರ್ದೇಶಕ ಸಂತೋಷ್ ಅವರು ಟ್ವೀಟ್ ಮಾಡಿ, ಅಭಿಮಾನಿಗಳ ಕೋರಿಕೆಗಾಗಿ “ಯುವರತ್ನ” ಪೋಸ್ಟರ್ ವರಮಹಾಲಕ್ಷ್ಮಿಗೆ ದೊಡ್ಮನೆ ಅಭಿಮಾನಿ ಬಳಗಕ್ಕೆ ಇದು ಸಮರ್ಪಣೆ ಎಂದು ಬರೆದುಕೊಂಡಿದ್ದಾರೆ.ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿತ್ತು. ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ …

Read More »

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸತೀಶ ಜಾರಕಿಹೊಳಿ ಅವರು ಭೇಟಿ

ಬೆಳಗಾವಿ: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿದರು. ಕಾಂಗ್ರೆಸ್ ಕಚೇರಿ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪರಿಶೀಲನೆ ನಡೆಸಿದರು.‌ ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಾಟಾಂಬಳೆ, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ್ ಹಣುಮನ್ನವರ್, ಮಹೇಶ್ ಕಡಪಟ್ಟಿ, ಮಲಗೌಡಾ ಪಾಟೀಲ್ ಮುಂತಾದವರು ಇದ್ದರು.

Read More »

ನಾಳೆ ಸಿಎಂ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ.ಆಶಾ ಕಾರ್ಯಕರ್ತರು

ಬೆಂಗಳೂರು,ಜು.28-ಮಾಸಿಕ ಗೌರವ ಧನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತರು ನಾಳೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ. ಕಳೆದ 19 ದಿನಗಳಿಂದ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ನಾಳೆ ಸಿಎಂ ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ. ಮಾಸಿಕ ಗೌರವಧನವನ್ನು 12 ಸಾವಿರ ರೂ.ಗೆ ಹೆಚ್ಚಳ ಮಾಡುವುದು, ಕೋವಿಡ್ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷತಾ ಸಾಮಾಗ್ರಿಗಳನ್ನು …

Read More »