ಬೆಳಗಾವಿ: ನಮ್ಮ ರಾಜ್ಯದಲ್ಲಾಗಲಿ, ಹೊರರಾಜ್ಯದಲ್ಲಾಗಲಿ ಶಿವಾಜಿ ಮಹಾರಾಜ ಪುತ್ಥಳಿಗೆ ಅವಮಾನ ಮಾಡಿರುವುದು, ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಭಗ್ನ ಮಾಡಿರುವ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಇಬ್ಬರು ಮಹಾಪುರುಷರಿಗೆ ಅಪಮಾನ ಮಾಡಿರುವುದನ್ನು ನಾನು ಖಂಡಿಸುತ್ತೀನಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ನಗರದ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ರಾಜಕೀಯ ಬೇಳೆ ಬೇಯಿಸಲು ಈ ರೀತಿ ಮಾಡುತ್ತಿದ್ದಾರೆ. ಸಮಾಜದ, ರಾಜ್ಯದ ಮಧ್ಯೆ ಹೀಗೆ ಮಾಡಿ ಒಕ್ಕೂಟ …
Read More »ಬೆಳಗಾವಿಯ ಅಧಿವೇಶನದಲ್ಲಿ ನಾಳೆಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ : ಸಚಿವ ಸಂಪುಟ ತೀರ್ಮಾನ
ಬೆಳಗಾವಿ : ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಪ್ರಮುಖ ನಿರ್ಧಾರವೂ ಇದೆ. ಪ್ರತಿ ಪಕ್ಷಗಳ ವಿರೋಧದ ನಡುವೆಯೂ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ. ವಿಧಾನಸಭೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ. ಪರಿಷತ್ತಿನಲ್ಲಿ …
Read More »ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಮಹಿಳಾಮಣಿಗಳ ಆಕ್ರೋಶ
ಬೆಳಗಾವಿ – ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ ನೀಡಿದ ಹೇಳಿಕೆ ಖಂಡಿಸಿ ಭಾರತೀಯ ಜನತಾಪಾರ್ಟಿ ಮಹಿಳಾ ಮೋರ್ಚಾ ಸೋಮವಾರ ಪ್ರತಿಭಟನೆ ನಡೆಸಿತು. ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಮಹಾನಗರ ಅಧ್ಯಕ್ಷೆ ಸುವರ್ಣಾ ಪಾಟೀಲ ಮೊದಲಾದವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿದರು. ರಮೇಶ್ ಕುಮಾರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ
Read More »ಕಿಡಿಗೇಡಿಗಳಿಗೆ ಪೊಲೀಸರ ಭಯವಿಲ್ಲ:ಸಿದ್ದರಾಮಯ್ಯ
ಬೆಳಗಾವಿ: ಕೆಲ ಪುಂಡರು ರಾಯಣ್ಣ ಪ್ರತಿಮೆ ವಿರೂಪಗೊಳಿಸುವ ಕೆಲಸ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ದುರುದ್ದೇಶದಿಂದಲೇ ಇಂತ ಕೃತ್ಯವೆಸಗಲಾಗಿದೆ. ಇಂತಹ ಘಟನೆ ಖಂಡನಿಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಳಗಾವಿಯ ಆನಗೋಳದಲ್ಲಿ ಮರುಸ್ಥಾಪನೆಯಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಿದ್ದರಾಮಯ್ಯ, ರಾಯಣ್ಣ ಯಾವುದೆ ಒಂದು ಜಾತಿಗೆ ಸೀಮಿತರಾದವರಲ್ಲ, ಬ್ರೀಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿ, ಮಹಾನ್ ದೇಶಭಕ್ತ. ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ …
Read More »ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಡಿ.ಕೆ.ಶಿವಕುಮಾರ್
ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು, ಅದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಮ್ಮ ಅಧಿಕಾರ ತೋರಲು ಆಗುವುದಿಲ್ಲ. ಹೀಗಾಗಿ ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಶಾಂತಿ ಕಾಪಾಡುವುದೇ ಕಾಂಗ್ರೆಸ್ ಸಂಕಲ್ಪ. ಈ ಕೃತ್ಯವನ್ನು ಏಕಾಏಕಿಯಾಗಿ ಎಂಇಎಸ್ …
Read More »ಎಂಇಎಸ್ ವಿರುದ್ಧ ಕರವೇ ನಾರಾಯಣಗೌಡ ನೇತೃತ್ವದ ಬಣದ ಪ್ರತಿಭಟನೆ
ಬೆಳಗಾವಿ: ಎಂಇಎಸ್ ವಿರುದ್ಧ ಕರವೇ ನಾರಾಯಣಗೌಡ ನೇತೃತ್ವದ ಬಣದ ಪ್ರತಿಭಟನೆ ತೀವ್ರಗೊಂಡಿದ್ದು, ಬೆಳಗಾವಿಯಲ್ಲಿ ಲಾರಿ, ಬಸ್ ಗಳ ಮೇಲೆ ಹತ್ತಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಎಂಇಎಸ್, ಶಿವಸೇನೆ ಪುಂಡಾಟ ಪ್ರಕರಣದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಡಿದೆದ್ದಿದ್ದು, ಬೃಹತ್ ಪ್ರತಿಭಟನೆ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕರವೇ ನಾರಾಯಣಗೌಡ ನೇತೃತ್ವದ ಬಣವನ್ನು ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ತಡೆದಿದ್ದಾರೆ. ಪೊಲೀಸರ …
Read More »ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ವಿವಿಧ ಕಟ್ಟಡಗಳ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ
ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದ ನೂತನ ಅತಿಥಿ ಗೃಹ, ವ್ಯಾಯಾಮ ಶಾಲೆ, ಸೆಂಟನರಿ ಹಾಲ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಬೆಳಗಾವಿಯ ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನ ವಂಟಮೂರಿಯ ರಾಜಾ ಲಖಮಗೌಡ ಅವರು ಸ್ಥಾಪಿಸಿದ್ದ 103 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಸೊಶಿಯಲ್ ಕ್ಲಬ್ ಮತ್ತು ಕ್ರೀಡಾ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಅವರ ತಂದೆಯ ಹೆಸರಿನ ಅತಿಥಿ …
Read More »ಸಂದಿಗ್ಧದಲ್ಲಿ ಕಾಂಗ್ರೆಸ್: ಕೈಪಡೆಗೆ ಬಿಸಿತುಪ್ಪವಾದ ಹೋರಾಟದ ಅಸ್ತ್ರ
ಬೆಳಗಾವಿ: ಭೂಹಗರಣದ ಅಸ್ತ್ರ ಪ್ರಯೋಗಿಸಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ರಾಜೀನಾಮೆ ಪಡೆದುಕೊಳ್ಳಲು ಅಣಿಯಾಗಿದ್ದ ಕಾಂಗ್ರೆಸ್ಗೀಗ ಸಂದಿಗ್ಧ ಎದುರಾಗಿದೆ. ಸೋಮವಾರ ಆರಂಭವಾ ಗಲಿರುವ ಚಳಿಗಾಲದ ಅಧಿವೇಶನದ ಉತ್ತರಾರ್ಧದಲ್ಲಿ ಯಾವ ಅಸ್ತ್ರ ಹಿಡಿಯಬೇಕೆಂಬ ಚಿಂತೆ ಶುರುವಾಗಿದೆ. ಈ ಸಂಬಂಧ ಸೋಮವಾರ ಬೆಳಗ್ಗೆ ಸುರ್ವಣಸೌಧದಲ್ಲಿ ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆಂಬ ಕಾರಣಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರಕರಣ ಮುಂದಿಟ್ಟು ಕೊಂಡು ಧರಣಿ ನಡೆಸಿದ್ದ ಕಾಂಗ್ರೆಸ್, ರಾಜಿನಾಮೆಗೆ ಆಗ್ರಹಿಸಿತ್ತು. ಧರಣಿಯೊಂದಿಗೇ …
Read More »ಶೋಭಾ ಕರಂದ್ಲಾಜೆಗೆ ಕರ್ನಾಟಕದಲ್ಲಿ ‘ದೊಡ್ಡ ಹುದ್ದೆ’ಯ ಮುನ್ಸೂಚನೆ ಕೊಟ್ಟ ಹೈಕಮಾಂಡ್!
ಬೆಂಗಳೂರು, ಡಿ.20: ಕರ್ನಾಟಕ ಬಜೆಪಿಯ ಪ್ರಮುಖ ಮಹಿಳಾ ನಾಯಕಿ, ಪ್ರಸ್ತುತ ಕೇಂದ್ರದಲ್ಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ವಿವಾದಗಳಿಂದ ದೂರ ಉಳಿಯುತ್ತಿರುವುದು ಹಾಗೂ ಎಲ್ಲದ್ದಕ್ಕೂ ಪ್ರತಿಕ್ರಿಯಿಸದಿರುವುದರ ಹಿಂದೆ ಬಿಜೆಪಿ ಹೈಕಮಾಂಡ್‌ನ ವಿಶೇಷ ಸೂಚನೆಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರು ಕೆಲವು ತಿಂಗಳಿಂದ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆಗಳು, …
Read More »ಜನೇವರಿ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೌಜಲಗಿ ಭಾಗದ ರೈತರ ಜೀವನಾಡಿಯಾಗಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜನೇವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವುದಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ತಾಲೂಕಿನ ಕೌಜಲಗಿ ಅರ್ಬನ್ ಬ್ಯಾಂಕಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌಜಲಗಿ ಮತ್ತು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರು ಹರಿಸುವ ಮೂಲಕ ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ …
Read More »
Laxmi News 24×7