Breaking News

Laxminews 24x7

P.S.I. ನೇಮಕಾತಿ ಪ್ರಕರಣ ಅಕ್ರಮ: ಪೌಲ್ ಡೈರಿಯಲ್ಲಿ ಪ್ರಭಾವಿಗಳ ಹೆಸರು

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಡಿಜಿಪಿ ಅಮ್ರಿತ್ ಪೌಲ್‌ ಅವರಿಗೆ ಸೇರಿದ್ದು ಎನ್ನಲಾದ ಡೈರಿಯನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.   ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮ್ರಿತ್ ಪೌಲ್, ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಅಂಶಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದರೆಂಬ ಮಾಹಿತಿ ಗೊತ್ತಾಗಿದೆ. ಕೆಲವುಅಧಿಕಾರಸ್ಥರು, ರಾಜಕೀಯ ಪಕ್ಷಗಳ ಮುಖಂಡರು, ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಭಾವಿಗಳ ಹೆಸರು ಡೈರಿಯಲ್ಲಿರುವುದಾಗಿ ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ಪೌಲ್ …

Read More »

ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರಿಗೆ ಸೋಲಿನ ಭಯ ಕಾಂಗ್ರೆಸ್ ಸಮೀಕ್ಷೆಯಲ್ಲಿ ಬಯಲು..

 ರಾಜ್ಯ ವಿಧಾನಸಭಾ ಚುನಾವಣೆ  ಸಮೀಪಿಸುತ್ತಿದ್ದಂತೇ, ಹಲವು ಹಾಲಿ ಕಾಂಗ್ರೆಸ್ ಶಾಸಕರಿಗೆ  ಸೋಲಿನ ಭೀತಿ ಎದುರಾಗಿದೆ. ಹತ್ತಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ. ಇದೆಲ್ಲವೂ ಇತ್ತೀಚಿಗೆ ಕಾಂಗ್ರೆಸ್ ನಡೆಸಿದಂತ ಆಂತರಿಕ ಸಮೀಕ್ಷೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಶಾಸಕರು ಕೂಡ ಚುನಾವಣೆಯ ( Election ) ವೇಳೆಗೆ ಬಂಡಾಯವೇಳಲಿದ್ದು, ಕೈ ಪಕ್ಷಕ್ಕೆ ಬಂಡಾಯದ ಭೀತಿ ಕೂಡ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಹೌದು.. ಕೆಲವರಿಗೆ ಕಾರ್ಯಕರ್ತರ ಜೊತೆಗೆ …

Read More »

ಭೂಕಂಪನ: ಬಿರುಕು ಬಿಟ್ಟ ಮನೆ ಗೋಡೆ; ಬತ್ತಿ ಹೋದ ಬಾವಿ!

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೂ ಕಂಪನದಿಂದಾಗಿ ತಿಕೋಟಾ ಹಾಗೂ ಇಂಡಿ ತಾಲ್ಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ. ತಿಕೋಟಾ ತಾಲ್ಲೂಕಿನ ಅರಕೇರಿ ಮತ್ತು ಅರಕೇರಿ ತಾಂಡಾದಲ್ಲಿ ಎರಡು ಹಳೆಯ ಮನೆಗಳ ಹಿಂಭಾಗದ ಭಾಗವು ಭಾಗಶಃ ಹಾನಿಯಾಗಿದೆ. ಇದೇ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ, ಅರಕೇರಿ ಗ್ರಾಮದ ಸುತ್ತಲಿನ ತಾಂಡಾಗಳಲ್ಲಿ ಮತ್ತು ಮಜರೆ ಗ್ರಾಮದಲ್ಲಿ ಅಂದಾಜು 48 ಮನೆಗಳ ಗೋಡೆಗಳಲ್ಲಿ ಅಲ್ಪ …

Read More »

ಗ್ರಾಮ ಪಂಚಾಯತ್‌ಗಳಲ್ಲಿ ಪಂಚತಂತ್ರ 2.0 ಕಡ್ಡಾಯ

ಬೆಂಗಳೂರು: ಪಂಚಾಯತ್‌ಗಳ ಆಡಳಿತ, ಯೋಜನೆ ಮತ್ತು ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸುವ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಯಾಗಿಸಲು ಪಂಚತಂತ್ರ 2.0 ತಂತ್ರಾಂಶ ಹಾಗೂ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ 2.0 ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದ ಎಲ್ಲ ಪಂಚಾಯತ್‌ಗಳಲ್ಲಿ ಇದನ್ನು ಕಡ್ಡಾಯ ಗೊಳಿಸಲಾಗಿದೆ.   ಗ್ರಾಮ ಪಂಚಾಯತ್‌ಗಳ ದೈನಂದಿನ ಕಾರ್ಯಗಳ ಮೇಲ್ವಿಚಾರಣೆ, ಸೇವೆಗಳ ವಿಲೇ ವಾರಿಗೆ ಬೇಕಾದ ಯೋಜನೆಗಳ ಅನುಷ್ಠಾನ ಮತ್ತು ತೀರ್ಮಾನಗಳನ್ನು ಕೈಗೊಳ್ಳಲು 2011ರಿಂದ ಬಳಸಲಾಗುತ್ತಿದ್ದ ಪಂಚತಂತ್ರ 1.0 ತಂತ್ರಾಂಶವನ್ನು ಉನ್ನತೀಕರಿಸಿ ಪಂಚತಂತ್ರ …

Read More »

Bakrid 2022: ‘ಬಕ್ರೀದ್‌’ನ ಸಂದೇಶ

ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್‌ ಅದ್‌ಹಾ’. ಭಾರತದಲ್ಲಿ ಈ ಹಬ್ಬ ‘ಬಕ್ರೀದ್‌’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ದೇಶದಾದ್ಯಂತ ಮುಸ್ಲಿಮರು ಇಂದು (ಜುಲೈ 10) ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.   ‘ರಂಜಾನ್’ ತಿಂಗಳ ಉಪವಾಸದ ಬಳಿಕ ‘ಈದುಲ್‌ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಆಚರಣೆ ನಡೆಯುತ್ತದೆ. ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ …

Read More »

ಬಕ್ರೀದ್‌ಗೆ ಪ್ರಾಣಿ ಬಲಿ ನಿಷೇಧಿಸಿ ಆದೇಶ

ಹೊಸಪೇಟೆ (ವಿಜಯನಗರ): ‘ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿ ಬಲಿ (ಕುರ್ಬಾನಿ) ನಿಷೇಧಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ತಿಳಿಸಿದ್ದಾರೆ. ‘ಜು. 10ರಂದು ಬಕ್ರೀದ್‌ ಹಬ್ಬ ಆಚರಿಸಲಾಗುತ್ತಿದ್ದು, ಹಬ್ಬದ ದಿನದಿಂದ ಮೂರು ದಿನಗಳ ವರೆಗೆ ಪ್ರಾಣಿ ಬಲಿ ನೀಡಲಾಗುತ್ತದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಅದನ್ನು ಮಾಡತಕ್ಕದ್ದು. ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನವನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ’ ಎಂದು ಶನಿವಾರ ತಿಳಿಸಿದ್ದಾರೆ. ‘ಎಲ್ಲರೂ …

Read More »

ಜ್ಯೋತಿಷಿಗಳಿಗೆ ಇದು ಸಂಕಷ್ಟಕಾಲ. ಐದು ದಿನಗಳ ಹಿಂದೆ ಚಂದ್ರಶೇಖರ ಗುರೂಜಿ ಹತ್ಯೆ. ಇವತ್ತು ಪ್ರಮೋದ್ ಗುರೂಜಿ ದರೋಡೆ..

ಜ್ಯೋತಿಷಿಗಳಿಗೆ ಇದು ಸಂಕಷ್ಟಕಾಲ. ಐದು ದಿನಗಳ ಹಿಂದೆ ಚಂದ್ರಶೇಖರ ಗುರೂಜಿ ಹತ್ಯೆ. ಇವತ್ತು ಪ್ರಮೋದ್ ಗುರೂಜಿ ದರೋಡೆ.. ಬೆಂಗಳೂರಿನಲ್ಲಿ ಹಾಡಹಗಲೇ ಜ್ಯೋತಿಷಿ ಮನೆ ರಾಬರಿ. ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದು, ಹಲ್ಲೆ ನಡೆಸಿ ದರೋಡೆ.ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪದ ಜ್ಯೋತಿಷಿ ಪ್ರಮೋದ್ ಮನೆಯಲ್ಲಿ ದರೋಡೆ. 400 ಗ್ರಾಂ ಚಿನ್ನಾಭರಣ,350 ಗ್ರಾಂ ಬೆಳ್ಳಿ,5 ಲಕ್ಷ ನಗದು ಎಗರಿಸಿ ಎಸ್ಕೇಪ್. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ.ಮೂವರು ಅಪರಿಚಿತ ವ್ಯಕ್ತಿಗಳಿಂದ ಪ್ರಮೋದ್ ಎಂಬುವರ …

Read More »

ಬಕ್ರೀದ್:‌ 30 ಲಕ್ಷಕ್ಕೆ ಮಾರಾಟವಾದ ಅಪರೂಪ ತಳಿಯ ಮೇಕೆ!

ಬಕ್ರೀದ್‌ ಹಬ್ಬದ ಪ್ರಯುಕ್ತ ಕುರಿ-ಮೇಕೆಗಳ ಮಾರಾಟ ದೇಶಾದ್ಯಂತ ಭರ್ಜರಿಯಾಗಿ ನಡೆದಿದ್ದು, ಉತ್ತರ ಪ್ರದೇಶದ ಮೀನಾ ಬಜಾರ್‌ ನಲ್ಲಿ ಅಪರೂಪದ ತಳಿಯ ಮೇಕೆಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿ ಸುದ್ದಿ ಮಾಡಿವೆ. ದೆಹಲಿಯ ಪ್ರಸಿದ್ದ ಮಾರುಕಟ್ಟೆ ಸ್ಥಳವಾದ ಮೀನಾ ಬಜಾರ್‌ ನಲ್ಲಿ ಅಪರೂಪದ ತಳಿಯ ಒಂದು ಮೇಕೆ 30 ಲಕ್ಷಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ. ಎರಡು ಮೇಕೆಗಳು ತಮ್ಮ ಹೆಸರಿನಿಂದಲೇ ತಲಾ 15 ಲಕ್ಷ ರೂ.ಗೆ ಮಾರಾಟವಾಗಿ ಗಮನ ಸೆಳೆದಿವೆ. ೩೫ ವರ್ಷ …

Read More »

ಶ್ರೀಲಂಕಾ ಅಧ್ಯಕ್ಷರ ಬಂಗಲೆಗೆ ಮುತ್ತಿಗೆ ಹಿಂಸಾಚಾರಕ್ಕೆ ತಿರುಗಿದ ರಾವಣ ರಾಷ್ಟ್ರ

ಶ್ರೀಲಂಕಾ ಕಳೆದ 4 ತಿಂಗಳುಗಳಿಂದ ಆರ್ಥಿಕ ಬಿಕ್ಕಟ್ಟನ್ನ ಎದುರಿಸುತ್ತಿದೆ, ಆಹಾರಕ್ಕಾಗಿ ಜನ ತತ್ತರಗೊಂಡಿದ್ದಾರೆ. ಜನ ಸಾಮಾನ್ಯ ವಸತಿಗಾಗಿ ಸಾವಿರಾರು ರೂಗಳನ್ನ ತೆತ್ತಲು ಅವರ ಬಳಿ ಹಣ ಇಲ್ಲದೆ ನೆರೆ ದೇಶಗಳಿಗೆ ನಡೆದು ಆ ದೇಶಗಳ ಪೋಲಿಸರ ಅತಿಥಿಗಳಾಗಿದ್ದಾರೆ , ನೆರೆ ದೇಶಗಳು ಸಾವಿರಾರು ಕೋಟಿ ಹಣ ಸಹಾಯ ಮಾಡಿದರು ಶ್ರೀಲಂಕಾ ಇನ್ನೂ ಸರಿದಾರಿ ತರುವಲ್ಲಿ ಏಡವಿದ್ದಾರು ಎಲ್ಲಿ ಎಂದು ಈಗ ಜನ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ , ಮುಖ್ಯವಾಗಿ ರಾಜಕಾರಣಿಗಳ ಏಡಬಿಡಂಗಿತನ …

Read More »

U.P.S.C.ಯಲ್ಲಿ 319ನೇ ರ‍್ಯಾಂಕ್ ಪಡೆದ ಗಜಾನನ ಬಾಲೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸತ್ಕಾರ

ಯುಪಿಎಸ್‍ಸಿ ಪರೀಕ್ಷೆಯಲ್ಲಿ 319ನೇ ರ್ಯಾಂಕ್ ಪಡೆದ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪುತ್ರ ಗಜಾನನ ಶಂಕರ್ ಬಾಲೆ ಅವರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಸತ್ಕರಿಸಿ ಗೌರವಿಸಿದರು. ಕೇಂದ್ರ ಲೋಕಸೇವಾ ಆಯೋಗವು 2021ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 319ನೇ ಯಾರ್ಂಕ್ ಪಡೆದಿರುವ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಶಂಕರ್ ಬಾಲೆ ಅವರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶುಕ್ರವಾರ (ಜು.8) ತಮ್ಮ ಕಚೇರಿಯಲ್ಲಿ ಸನ್ಮಾನಿಸಿ, ಗೌರವಿಸಿದರು. …

Read More »