Breaking News

Laxminews 24x7

ಹಬ್ಬದಂದೇ ದೇಶದ ಜನತೆಗೆ ‘ಬಿಗ್‌ ಶಾಕ್‌’:ರೆಪೊ ದರ 4.90% ರಿಂದ 5.40% ಕ್ಕೆ ಹೆಚ್ಚಳ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ ಎಂಪಿಸಿ) ಹಣಕಾಸು ನೀತಿ ಸಮಿತಿಯ ಆಗಸ್ಟ್ 2022 ರ ಸಭೆ ಶುಕ್ರವಾರ ಮುಕ್ತಾಯಗೊಂಡಿದೆ. ಬುಧವಾರದಿಂದ ಮೂರು ದಿನಗಳ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ರೆಪೊ ದರ ಏರಿಕೆಯನ್ನು ಈ ಬಾರಿ ಶೇಕಡಾ 0.50 ರಷ್ಟು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಇದರೊಂದಿಗೆ, ಕಳೆದ ನಾಲ್ಕು ತಿಂಗಳಲ್ಲಿ ರೆಪೊ ದರವು ಶೇಕಡಾ …

Read More »

ಜಪಾನ್‌ ದೇಶದಲ್ಲೂ ಕನ್ನಡಿಗ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಹವಾ ಜೋರು..!

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ಸಿನಿಮಾ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದ್ರಲ್ಲೂ ಜಪಾನ್‌ ದೇಶದಲ್ಲಿ ‘ವಿಕ್ರಾಂತ್‌ ರೋಣ’ ಹವಾ ಜೋರಾಗಿದ್ದು, ಸದ್ಯದಲ್ಲೇ ಜಪಾನ್‌ ಭಾಷೆಗೂ ಡಬ್‌ ಆಗಿ ‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಲಿದೆ. ಈಗಾಗಲೇ ₹150 ಕೋಟಿ ಗಡಿ ದಾಟಿ …

Read More »

ಮನೆಯಲ್ಲಿ ಕತ್ತಿ ಸುಳಿಬಾರದು, ಕೊಲೆ ಆಗಬಾರದು ಅಂದ್ರೆ ಹಿಂದೂಗಳ ಬಳಿ ವ್ಯವಹರಿಸಿ; ಮುತಾಲಿಕ್ ಕರೆ

ಧಾರವಾಡ: ಸಾರ್ವಜನಿಕ ಗಣೇಶೋತ್ಸವಕ್ಕೆ (Ganeshotsava) ಸರ್ಕಾರ (Government) ಹಲವು ನಿರ್ಬಂಧ ಹಾಕುತ್ತಿದೆ. ಇದರಿಂದ ಎಷ್ಟೊಂದು‌ ಕಿರಿಕಿರಿ ಆಗುತ್ತಿದೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೆನೆ. ಇದು ಬಿಜೆಪಿ ಸರ್ಕಾರದಲ್ಲೇ (BJP Government) ಹೀಗಾಗುತ್ತಿದೆ ಎಂದರೆ ಹೇಗೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅವರು ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರ್ಷಕ್ಕೊಮ್ಮೆ ಗಣೇಶೋತ್ಸವ ಹಬ್ಬ (Ganesha Festival …

Read More »

ನಿಧಿಗಾಗಿ ಶಿವಲಿಂಗವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

ಕೊಪ್ಪಳ: ನಿಧಿ ಆಸೆಗಾಗಿ ಶಿವಲಿಂಗವನ್ನು ಕಿತ್ತು ಹಾಕಿರುವ ಘಟನೆ ‌ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಶಿವಪುರ ಗ್ರಾಮದ ಬಳಿ ಇರುವ ಸೋಮನಾಥ ದೇವಾಲಯದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಿ ನಿಧಿ ಶೋಧಿಸಿದ್ದಾರೆ ಎನ್ನಲಾಗ್ತಿದೆ. ಶಿವಪುರದ ಪಕ್ಕದ ಬೆಟ್ಟದಲ್ಲಿರುವ ಸೋಮನಾಥ ದೇವಾಲಯ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ. ಈ ಐತಿಹಾಸಿಕ ದೇವಸ್ಥಾನದಲ್ಲಿ ಶಿವಲಿಂಗ ಪ್ರತಿಷ್ಠಾನೆ ಮಾಡಿರುವ ಸ್ಥಳದ ಸುತ್ತ ಕಬ್ಬಿಣದ ಸಲಾಕೆಗಳಿಂದ ಅಗೆಯಲಾಗಿದೆ. ಇದರಿಂದ ಅಲ್ಲಿದ್ದ ಶಿವಲಿಂಗ ಮೂರ್ತಿ ಭಗ್ನವಾಗಿದೆ. ನಂತರ ಕಬ್ಬಿಣದ ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಕಳ್ಳರು …

Read More »

ಬಿಜೆಪಿ, ಕಾಂಗ್ರೆಸ್​​ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿರುವ ಜೆಡಿಎಸ್‍!

ಬೆಂಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಬಿಜೆಪಿ ಮುಂದಾಗಿದ್ದರೆ, ಕಾಂಗ್ರೆಸ್ ಸಹ ರಾಜ್ಯದ ಗದ್ದುಗೆಗೆ ಏರಲು ತಂತ್ರಗಾರಿಕೆ ಮಾಡುತ್ತಿದೆ. ನಾವೇನು ಕಡಿಮೆ ಎಂಬಂತೆ ಜೆಡಿಎಸ್‍ ಕೂಡ ಬಿಜೆಪಿ ಮತ್ತು ಕಾಂಗ್ರೆಸ್​​ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಹವಣಿಸುತ್ತಿದೆ. ಆಂತರಿಕ ಕಚ್ಚಾಟ : ದಕ್ಷಿಣ ಭಾರತದ ರಾಜ್ಯಗಳ ಅಧಿಕಾರಕ್ಕಾಗಿ ದಂಡಯಾತ್ರೆ ಶುರು …

Read More »

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ಕಾರವಾರ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಹಾಗೂ 1. 20 ಲಕ್ಷ ರೂ ದಂಡ ವಿಧಿಸಿದೆ. ಮುಂಡಗೋಡದ ಓರಲಗಿಯ ಶಿವಾನಂದ ಗೌಳೇರ (60 ವರ್ಷ) ಶಿಕ್ಷೆಗೊಳಗಾದ ಅಪರಾಧಿ. ಈತ ಬಾಲಕಿಯನ್ನು ಮನೆೆ ಹಾಗೂ ಹೊಲಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಸೆ. 16- 2021ರಲ್ಲಿ ಪೋಕ್ಸೊ ಪ್ರಕರಣ …

Read More »

116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ದೂರ ನಡೆದು ಸಾಹಸ ಮೆರೆದಿದ್ದಾನೆ.

ವಿಜಯಪುರ: ಇತ ರೀಲ್ ಬಾಹುಬಲಿ ಅಲ್ಲ, ರಿಯಲ್ ಬಾಹುಬಲಿ. 116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದುಕೊಂಡು ಹೋಗಿ ಸಾಹಸ ಮೆರೆದಿದ್ದಾನೆ.‌ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿ ಚಿಕ್ಕರೋಗಿ ಗ್ರಾಮದ ಪ್ರಕಾಶ ಬೈರವಾಡಗಿ ಈ ಸಾಧನೆ ಮಾಡಿದ ಯುವಕ. ದೇವರಹಿಪ್ಪರಗಿ ತಾಲೂಕಿನ ಮುಳ ಸಾವಳಗಿ ಕ್ರಾಸ್​​ನಿಂದ ಚಿಕ್ಕರೂಗಿ ಗ್ರಾಮದವರೆಗೆ ಗೋಧಿ ಮೂಟೆ ಹೊತ್ತು ನಡೆದ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇವರ ಸಾಧನೆಗೆ ಸ್ನೇಹಿತರು ದಾರಿ ಉದ್ಧಕ್ಕೂ ಟವೆಲ್​​ನಿಂದ ಗಾಳಿ …

Read More »

ಕಿಸಾನ್​ ಸಮ್ಮಾನ್​ ನಿಧಿ ಫಲಾನುಭವಿ ಪಟ್ಟಿಯಲ್ಲಿ ಸಂಸದರ ಹೆಸರು: 9 ಕಂತು ಹಣ ಬಿಡುಗಡೆ

ಮಿರ್ಜಾಪುರ(ಉತ್ತರ ಪ್ರದೇಶ): ಸೋನಭದ್ರ ಸಂಸದ ಪಕೋರಿ ಲಾಲ್ ಕೋಲ್ ಹಾಗೂ ಪತ್ನಿ ಮತ್ತು ಅವರ ಮಗ ಛನ್ಬೆ ಶಾಸಕರಾಗಿರುವ ರಾಹುಲ್ ಪ್ರಕಾಶ್ ಕೋಲ್ (ರಾಹುಲ್ ಕೋಲ್) ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದು, ಯೋಜನೆಯ ಲಾಭ ಪಡೆಯಲು ಗುರುತನ್ನು ಮರೆಮಾಚಿರುವುದು ಕೇಂದ್ರ ಸರ್ಕಾರದ ಪರಿಶೀಲನಾ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ಈ ಪ್ರಕರಣದ ಬಗ್ಗೆ ಪಕೋರಿ ಲಾಲ್ ಕೋಲ್ ತಮಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಡಿಹಾನ್ ತೆಹಸಿಲ್‌ನ ಪತೇರಾ ಕಾಲಾ …

Read More »

ಕರಾವಳಿ ಘಟನೆ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ: ಆರಗ ವಿರುದ್ಧ ಶಾ ಗರಂ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಕುರಿತು ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಗರಂ ಆಗಿದ್ದಾರೆ. ಕಾರ್ಯಕರ್ತರ ರಕ್ಷಣೆ ಮತ್ತು ವಿಶ್ವಾಸ ಗಳಿಸಲು ಪ್ರಯತ್ನಿಸುವಂತೆ ಸಿಎಂ ಬಸವ ರಾಜ ಬೊಮ್ಮಾಯಿಗೆ ಸೂಚಿಸಿದ್ದಾರೆ.   ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ “ಸಂಕಲ್ಪ್ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಶಾ, ಗುರುವಾರ ಬೆಳಗ್ಗೆ ಸಿಎಂ …

Read More »

ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದ ಶಾಸಕ ಪಾಟೀಲ್​ಗೆ ಆಘಾತ: ವಾಪಸ್​ ಬರುವಾಗ ಕಾಲು ಮುರಿತ!

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಿನ್ನೆ (ಬುಧವಾರ) ನಡೆದಿದೆ. ಲಕ್ಷ ಲಕ್ಷ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಹಾರೈಸಿದ್ದಾರೆ. ಕಾಂಗ್ರೆಸ್​ನ ಬಹುತೇಕ ಎಲ್ಲಾ ನಾಯಕರೂ ಹುಟ್ಟುಹಬ್ಬದಂದು ದಾವಣಗೆರೆಯ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.   ಕಲಬುರಗಿಯ ಜಿಲ್ಲೆಯ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರು ಕೂಡ ದಾವಣಗೆರೆಗೆ ತೆರಳಿ ಅಲ್ಲಿ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿದ್ದರು. ಅದೇ ಸಂತಸದಲ್ಲಿ ವಾಪಸ್​ ಬಂದಿದ್ದ ಶಾಸಕ ಪಾಟೀಲ್​ ಅವರು ಇಂದು …

Read More »