Breaking News

Laxminews 24x7

ಸೋರುತಿದೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನದ ಛಾವಣಿ! ದೇಣಿಗೆ ನೀಡಿದ್ದು ವಿಜಯ್ ಮಲ್ಯ!

ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ( Travancore Devaswom Board) ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ನಿರ್ಧರಿಸಿದೆ. ಇದಿಷ್ಟೇ ಆಗಿದ್ದರೆ ಕರ್ನಾಟಕದ ಪಾಲಿಗೆ ಅಷ್ಟೇನೂ ಸುದ್ದಿಯಾಗುತ್ತಿರಲಿಲ್ಲ. ಆದರೆ ಸದ್ಯ ಸೋರುತ್ತಿರುವ ಚಿನ್ನ ಲೇಪಿತ ಛಾವಣಿಯನ್ನು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದೇಣಿಗೆ ನೀಡಿದ್ದು ವಿಜಯ್ ಮಲ್ಯ! (Vijay Mallya) ಇದೇ ಕಾರಣಕ್ಕೆ ಶಬರಿಮಲೆ ಅಯ್ಯಪ್ಪ ದೇಗುಲದ (Sabarimala Ayyappa …

Read More »

ನಿಮ್ಮದೇ ಕ್ಷೇತ್ರದಲ್ಲಿ ಸರಣಿ ಹತ್ಯೆ; ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಶ್ರಮವಾದರೂ ಏನು..? BJP ರಾಜ್ಯಾಧ್ಯಕ್ಷರಿಗೆ ಅಮಿತ್ ಶಾ ಖಡಕ್ ಕ್ಲಾಸ್

ಬೆಂಗಳೂರು: ಕರಾವಳಿಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.   ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿಯಾಗಿದ್ದು, ಈ ವೇಳೆ ಮಂಗಳೂರಿನಲ್ಲಿ …

Read More »

ಅರ್ಧ ಬೆಲೆಗೆ ಸರಕು ಮಾರಾಟ!

ಭಟ್ಕಳ: ತಾಲ್ಲೂಕಿನಲ್ಲಿ ಸೋಮವಾರ ಸಂಭವಿಸಿದ ಮೇಘಸ್ಪೋಟ ಪುರಸಭೆ ವ್ಯಾಪ್ತಿಯ ಅಂಗಡಿಕಾರರನ್ನು ಬೀದಿಗೆ ತಳ್ಳಿದೆ. ಭಟ್ಕಳದ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯುವುದು ಸಾಮಾನ್ಯ. ಆದರೆ ಅಂಗಡಿಗೆ ನುಗ್ಗುವುದು ವಿರಳವಾಗಿತ್ತು. ಈ ರಸ್ತೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಬಟ್ಟೆ ಹಾಗೂ ಚಪ್ಪಲಿ ಅಂಗಡಿಗಳು ಇವೆ. ಈ ಅಂಗಡಿಗಳು ಸೋಮವಾರ ಸುರಿದ ಭಾರಿ ಮಳೆಗೆ ಸಂಪೂರ್ಣ ಜಲಾವೃತ್ತಗೊಂಡಿದ್ದವು. ಆಳೆತ್ತರದ ನೀರಿನಲ್ಲಿ ಬಟ್ಟೆ, ಚಪ್ಪಲ್ಲಿ, ಮೊಬೈಲ್, ಸೇರಿದಂತೆ …

Read More »

ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು

ಮೈಸೂರು: ಆರು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕಿ ನಿಗೂಢ ಸಾವಿನ ಪ್ರಕರಣವನ್ನು ನಂಜನಗೂಡು ಪೊಲೀಸರು ಕೊನೆಗೂ ಭೇದಿಸಿದ್ದು, ನಗರಸಭಾ ಸದಸ್ಯೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ನಂಜನಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತರು. ಕಳೆದ ಮಾರ್ಚ್ 9 ರಂದು ಶಿಕ್ಷಕಿ ಸುಲೋಚನಾ ಅನುಮಾನಸ್ಪಾದವಾಗಿ ಮನೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ನಿಗೂಢ ಸಾವಿನ ಪ್ರಕರಣ ಬೆನ್ನತ್ತಿದ್ದ ನಂಜನಗೂಡು ಪೊಲೀಸರಿಗೆ ಒಂದು ಮಹತ್ವದ ಸುಳಿವು ದೊರೆಯಿತು. ಯಾವುದು …

Read More »

ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ತನಿಖೆಯಲ್ಲಿ ದೋಷ ಕಂಡುಬಂದರೆ ಕಾರ್ಡ್ ರದ್ದು!

ನವದೆಹಲಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈಗ ಪಡಿತರ ಚೀಟಿಗಳ ಬಗ್ಗೆ ಕಠಿಣ ನಿಲುವು ತಳೆಯುತ್ತಿವೆ. ಈ ಹಿಂದೆಯೂ, ಅನರ್ಹರು ಪಡಿತರ ಚೀಟಿಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಸರ್ಕಾರವು ಅವರನ್ನ ಗುರುತಿಸುತ್ತಿದ್ದು, ಇಲ್ಲಿಯವರೆಗೆ ನೀಡಿದ ಪಡಿತರವನ್ನ ವಸೂಲು ಮಾಡುತ್ತದೆ. ಅನರ್ಹರು ಎಂದು ಕಂಡುಬಂದಲ್ಲಿ ಅವರಿಗೆ ಹೆಚ್ಚಿನ ದರದಲ್ಲಿ ಆಹಾರ ಬೆಲೆಗಳನ್ನ ವಿಧಿಸಲಾಗುತ್ತದೆ. ಆದ್ರೆ, ದೇಶಾದ್ಯಂತ ಕೋಲಾಹಲ ಉಂಟಾದಾಗ, ಸರ್ಕಾರವು ಅಂತಹ ಯಾವುದೇ ಉದ್ದೇಶವನ್ನ ಹೊಂದಿಲ್ಲ ಎಂದು ಹೇಳಿಕೆಯನ್ನ …

Read More »

ಬೈಕಲ್ಲಿ ಇಬ್ಬರು ಪುರುಷರ ಪ್ರಯಾಣ ನಿಷೇಧ: ನಾಳೆಯಿಂದ ಹೊಸ ನಿಯಮ!

ಒಂದೇ ಬೈಕಲ್ಲಿ ಇಬ್ಬರು ಪುರುಷರು ಪ್ರಯಾಣಿಸುವಂತಿಲ್ಲ ಎಂದುಮಂಗಳೂರುಕಾನೂನು ಸುವ್ಯವಸ್ಥೆ ಪೊಲೀಸರು ಆದೇಶ ಹೊರಡಿಸಿದ್ದು, ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ. ಮಂಗಳೂರು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಕರಾವಳಿಯಲ್ಲಿ ಹತ್ಯೆ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ನಿಯಮ ನಾಳೆಯಿಂದ ಅಂದರೆ ಆಗಸ್ಟ್‌ ೫ರಿಂದ ಜಾರಿಗೆ ಬರಲಿದೆ ಎಂದರು.   ನಾಳೆಯಿಂದ ಒಂದು ವಾರ ಕಾಲ ಈ ನಿಯಮ ಜಾರಿಗೆ ಬರಲಿದ್ದು, …

Read More »

ಮನೆಗೆ ನುಗ್ಗಿದ ಉಗ್ರರನ್ನು ಸಂಹರಿಸಿದ ಕಾಶ್ಮೀರಿ ಹುಡುಗಿ ರುಕ್ಸಾನ ಕೌಸರ್; ಸ್ವಾತಂತ್ರ್ಯೋತ್ಸವದಂದು ಒಂದು ನೆನಪು

ಜಮ್ಮು ಮತ್ತು ಕಾಶ್ಮೀರ ಅಂದರೆ ಅಮರನಾಥ ದೇವಾಲಯ, ಶಿವನ ಮಂದಿರಗಳು, ದಾಲ್ ಲೇಕ್, ಅಮೋಘ ಪರಿಸರ, ಜನರ ಆತ್ಮೀಯ ಒಡನಾಟ ಇವೆಲ್ಲವೂ ನೆನಪಾಗುತ್ತಿದ್ದವು. ಈಗ ಜಮ್ಮು ಮತ್ತು ಕಾಶ್ಮೀರ ಎಂದರೆ ಭಯೋತ್ಪಾದಕರ ಕಣಿವೆ, ಉಗ್ರರ ಅಟ್ಟಹಾಸ, ಭದ್ರತಾ ಪಡೆಗಳ ಕಣ್ಗಾವಲು, ಯುವಕರ ಕಲ್ಲು ತೂರಾಟ ಇವೆಲ್ಲವೂ ನೆನಪಾಗುತ್ತವೆ.   ಕಾಶ್ಮೀರೀ ಫೈಲ್ಸ್ ಸಿನಿಮಾ ಬಂದ ನಂತರವಂತೂ ಕಾಶ್ಮೀರ ಮತ್ತು ಕಾಶ್ಮೀರಿಗಳು ಹೀಗೇ ಎಂದು ಸಾಮಾನ್ಯೀಕರಿಸಿ ಭಾವಿಸಿಬಿಡುವ ಸಾಧ್ಯತೆಗಳುಂಟು. ಆ ಸಿನಿಮಾದಲ್ಲಿರುವುದು …

Read More »

ನಿರೀಕ್ಷಣಾ ಜಾಮೀನು ಅರ್ಜಿ ವಜಾ: ರಾಜಕುಮಾರ್ ಟಾಕಳೆಗೆ ಸಂಕಷ್ಟ

ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಇಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಈ ಆದೇಶ ಹೊರಡಿಸಿದ್ದಾರೆ. ರಾಜಕುಮಾರ್ ‌ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …

Read More »

ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ಎಸಿಬಿ ಬಲೆಗೆ

ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ. ಅಥಣಿ ತಾಲೂಕಿನ ಬಳಿಗೇರಿ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ದನದಮನಿ ಹಾಗೂ ಗ್ರಾಮ ಸಹಾಯಕ ಪ್ರಹ್ಲಾದ ಸನದಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವವರು. ರಾಯಬಾಗ ತಾಲೂಕಿನ ಗಣಪತಿ ಮೊನಪ್ಪ ಬಡಿಗೇರ ಸಾಹಾರೂಗೇರಿ ಎಂಬುವವರು ಬೆಳಗಾವಿ ಎಸಿಬಿ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು …

Read More »

ಹೈಟೆಕ್ ಸ್ವೀಟ್‍ಶಾಪ್ ಮತ್ತು ಹೊಟೇಲ್ ಅದ್ಧೂರಿ ಉದ್ಘಾಟನೆ

ಬೆಳಗಾವಿಯ ಪ್ರಸಿದ್ಧ ರಾಜಪುರೋಹಿತ ಕುಟುಂಬ ಒಂದೇ ಬಿಲ್ಡಿಂಗ್‍ನಲ್ಲಿ ಸ್ವೀಟ್‍ಶಾಪ್, ಹೊಟೇಲ್ ಮತ್ತು ಲಾಡ್ಜ್‍ನ್ನು ಭವಾನಿಸಿಂಗ್ ಆರಂಭಿಸಿದ್ದಾರೆ. ಹೌದು ಸಿಹಿ ಪದಾರ್ಥಗಳು ಬೇಕಾದರೆ ಜನರಿಗೆ ತಟ್ ಅಂತಾ ನೆನಪು ಆಗುವುದೇ ಬೆಳಗಾವಿಯ ಶ್ರೀ ಪುರೋಹಿತ ಸ್ವೀಟ್ಸ್. ಸುಮಾರು 50 ವರ್ಷಗಳಿಂದ ಈ ರಾಜಪುರೋಹಿತ್ ಕುಟುಂಬವು ನಗರದಲ್ಲಿ 20ಕ್ಕೂ ಹೆಚ್ಚು ಸ್ವೀಟ್‍ಮಾರ್ಟ, ಹೊಟೇಲ್ಸ್ ಮತ್ತು ಲಾಡ್ಜಿಂಗ್‍ಗಳನ್ನು ನಡೆಸುತ್ತಿದ್ದಾರೆ. ಗುರುವಾರ ಬೆಳಗಾವಿಯ ನೆಹರು ನಗರದ ಮುಖ್ಯ ರಸ್ತೆಯಲ್ಲಿ ಹೊಟೇಲ್ ಸಜಿಟೇರಿಯಸ್ ಮತ್ತು ಶ್ರೀ ಪುರೋಹಿತ್ …

Read More »