Breaking News

Laxminews 24x7

ಹೆಂಡತಿ ದಪ್ಪಗಿದ್ದಾಳೆಂದು ಕತ್ತು ಹಿಸುಕಿ ಕೊಲೆಗೈದ ಪತಿ – ವರದಕ್ಷಿಣೆ ಕಿರುಕುಳ ಆರೋಪ

ಧಾರವಾಡ: ಹೆಂಡತಿ ದಪ್ಪಗಿದ್ದಾಳೆ ಎಂದು ಪಾಪಿ ಪತಿ ಕತ್ತು ಹಿಸುಕಿ ಕೊಲೆಗೈದ ಘಟನೆ ಧಾರವಾಡ  ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ. ಪ್ರಿಯಾಂಕ್ ಕಮಲಾಕರ್ (29) ಕೊಲೆಯಾದ ಮಹಿಳೆ . ಬಸವರಾಜ್ ವಡ್ಡರ್ ಕೊಲೆ ಮಾಡಿದ ಪತಿ.‌ 2024 ರಲ್ಲಿ ಪ್ರಿಯಾಂಕ್‌ಳನ್ನ ಮದುವೆಯಾಗಿದ್ದ ಬಸವರಾಜ್ ಮದುವೆಯಾದ ಒಂದೇ ವರ್ಷದಲ್ಲಿ ಬಂಗಾರ ತರುವಂತೆ ಕಿರುಕುಳ ನೀಡುತಿದ್ದ. ತವರು ‌ಮನೆಯಿಂದ ಬಂಗಾರ, ಹಣ ತರುವಂತೆ ಕಿರುಕುಳ ನೀಡಿದ್ದಲ್ಲದೇ ನೀನು ದಪ್ಪ ಇದ್ದಿ, …

Read More »

ಕೆ.ಆರ್ ಪುರಂ ತ್ರಿವಳಿ ಕೊಲೆ ಕೇಸ್; ಸಾಕ್ಷ್ಯ ಸಂಗ್ರಹಕ್ಕೆ ಘಟನೆ ಮರುಸೃಷ್ಟಿ ಮಾಡಿಸಿದ ಪೊಲೀಸರು

ಬೆಂಗಳೂರು: ಬೆಂಗಳೂರಿನ ಕೆ.ಆರ್ ಪುರಂದ ಸಿಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಶ್ವೇತಾ ಮತ್ತು ಕೆನತ್‌ನನ್ನು ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಇದೇ ವೇಳೆ ಕೃತ್ಯವನ್ನು ಮರುಸೃಷ್ಟಿ  ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪೊಲೀಸರು ಆರೋಪಿಗಳ ಮುಂದೆ ಕೃತ್ಯ ನಡೆದ ರೀತಿಯನ್ನು ಒಂದೊಂದಾಗಿ ಪರಿಶೀಲಿಸಿದ್ದಾರೆ. ಮೊದಲು ಯಾರ ಮೇಲೆ ದಾಳಿ ನಡೆಸಲಾಯಿತು? ನಂತರ ಯಾರನ್ನು ಕೊಲೆ ಮಾಡಲಾಯಿತು? ಯಾರು ಹಲ್ಲೆ …

Read More »

ಡಿಕೆಶಿ ಕನಸಿನ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ಗೆ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್ ವಿರೋಧ

ತುಮಕೂರು: ಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸು ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ಗೆ  ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್‌ಆರ್ ಶ್ರೀನಿವಾಸ್  ವಿರೋಧ ವ್ತಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣವೂ ಒಂದು ಕಾರಣ ಆಗಿತ್ತು. ಈಗ ನಮ್ಮ ವಿರೋಧ ಮೀರಿ ಮತ್ತೆ ಎಕ್ಸ್‌ಪ್ರೆಸ್ ಕೆನಾಲ್ ಆರಂಭಿಸಿದರೆ ಪಕ್ಷದಲ್ಲಿ ಇರಬೇಕೋ ಬೇಡವೋ ಅನ್ನೋದನ್ನು ಯೋಚನೆ ಮಾಡಬೇಕಿದೆ ಎಂದು ಎಕ್ಸ್‌ಪ್ರೆಸ್ …

Read More »

ಶುದ್ಧ ಚಿನ್ನದಲ್ಲೇ ಒಳ ಉಡುಪು, 146 ಕೋಟಿ ಕ್ಯಾಶ್‌, ಗೋಪುರದ ರೀತಿ ಹಣ ಸಂಗ್ರಹ – ಜಗತ್ತಿನ ಅತಿದೊಡ್ಡ ಭ್ರಷ್ಟ ಸಂಸದೆ ಲಾಕ್‌

ಬಾಗ್ದಾದ್: ಇರಾಕ್‌ನಲ್ಲಿ ಅತಿದೊಡ್ಡ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆಸಲಾಗಿದೆ. ಇರಾಕ್ ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದು ಪತ್ತೆಯಾಗಿದೆ. ಪ್ರಧಾನಿ ಅಲಿ ಅಲ್ ಜೈದಿ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಯಿತು. ಇರಾಕ್‌ನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಹಲವಾರು ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಇತರೆ ಸ್ಥಳಗಳಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ …

Read More »

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಹೊತ್ತಿ ಉರಿದ ಆಪರೇಷನ್‌ ಥಿಯೇಟರ್

ದಾವಣಗೆರೆ: ಇಲ್ಲಿನ  ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು , ಆಪರೇಷನ್‌ ಥಿಯೇಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆಪರೇಷನ್ ಥಿಯೇಟರ್‌ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಆಪರೇಷನ್ ಥಿಯೇಟರ್ ಸುತ್ತಾಮುತ್ತ ಇರುವ ಕೊಠಡಿಗಳಿಗೂ ಹಾನಿಯಾಗಿದೆ. ಅಗ್ನಿ ಅವಘಡದಿಂದ ದಟ್ಟ ಹೊಗೆ ಆವರಿಸಿದೆ. ಇದರಿಂದ ಭಯಭೀತರಾಗಿ ಸಿಬ್ಬಂದಿ ಅಲ್ಲಿಂದ ಓಡಿ ಹೊರಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ, ಏಳೆಂಟು ಜನ ಸಿಬ್ಬಂದಿ ಮಾತ್ರ ಇದ್ದೆವು. ಏಕಾಏಕಿ ಬೆಂಕಿ …

Read More »

220 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 4 ವರ್ಷದ ಬಾಲಕ ಸಾವು

ಚಂಡೀಗಢ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ 220 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. 21 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಂತರ ಬುಧವಾರ ಮುಂಜಾನೆ ಬಾಲಕನನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು. ಆದರೆ, ದುರದೃಷ್ಟವಶಾತ್‌ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಂಗಳವಾರ ಬೆಳಗ್ಗೆ ಪ್ರಾರಂಭವಾದ ಬಹು-ಏಜೆನ್ಸಿ ಕಾರ್ಯಾಚರಣೆಯ ನಂತರ ಬಾಲಕ ನಿರ್ವೈರ್ ಸಿಂಗ್‌ನನ್ನು ಮುಂಜಾನೆ 3:40 ರ ಸುಮಾರಿಗೆ ಕೊಳವೆ ಬಾವಿಯಿಂದ ಹೊರತೆಗೆದು, ತಕ್ಷಣವೇ ಅಂಬುಲೆನ್ಸ್‌ನಲ್ಲಿ ಅಂಬಾಲಾ ಕಂಟೋನ್ಮೆಂಟ್‌ನಲ್ಲಿರುವ …

Read More »

ಮಂಗಳೂರಿನಲ್ಲಿ ರಾತ್ರಿ ಮಳೆಗೆ ಭೂಕುಸಿತ – ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ

ಮಂಗಳೂರು: ಮಂಗಳವಾರ (ಜೂ.30) ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರಿನ  ನಾಗುರಿ ಎಂಬಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಭೂಕುಸಿತ ಉಂಟಾದ ಪರಿಣಾಮ ಮಣ್ಣು ಕುಸಿದು ಮನೆ ಮೇಲೆ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಆರು ಜನ ಮಣ್ಣಿನಡಿ ಸಿಲುಕಿಕೊಂಡಿದ್ದರು. ಈ ಪೈಕಿ ಓರ್ವ ಪುರುಷ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ ಓರ್ವ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ. …

Read More »

ಮತದಾರರ ಪಟ್ಟಿ ಪರಿಷ್ಕರಣೆಗೆ ಎಲ್ಲರೂ ಸಹಕರಿಸಿ: ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ವೀರಣ್ಣ ಚರಂತಿಮಠ

ಬಾಗಲಕೋಟೆ: ಪ್ರತಿಯೊಬ್ಬರೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು ಅವರು ರಾಜ್ಯಾದ್ಯಂತ ಜುಲೈ ೨೯ರವರೆಗೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ಮಂಗಳವಾರ ಆರಂಭಗೊAಡಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಅವರು ತಮ್ಮ ನಿವಾಸದಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ (SIR) ಅಗತ್ಯ ದಾಖಲೆಗಳು …

Read More »

ಇಂದಿನಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 183.50 ರೂ. ಇಳಿಕೆ

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 183.50 ರೂ. ಇಳಿಕೆ ಮಾಡಿದೆ. ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ. ಈ ಮೂಲಕ 3,113.50 ರೂ. ಇದ್ದ ಸಿಲಿಂಡರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. …

Read More »

ಹನ್ನೊಂದು ಸಾವಿರ ನಕಲಿ ಮತದಾರರ ಸುಳಿವು

ತಲ್ಲೂರ: ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೧೧ ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎನ್ನುವ ಸುಳಿವು ಸಿಕ್ಕಿದೆ ಎಂದು ಸವದತ್ತಿ ಬಿಜೆಪಿ ಮಂಡಲ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿದರು. ಬುದಿಗೊಪ್ಪ, ಯರಝರ್ವಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಪ್ರತಿ ಬೂತ್‌ಗೂ ಏಜೆಂಟರನ್ನು ನೇಮಕ ಮಾಡಿದ್ದು, ಬಿಎಲ್‌ಎ ಸರ್ಕಾರದಿಂದ ನೇಮಕವಾಗಿರುವ ಬಿಎಲ್‌ಒ ಅಧಿಕಾರಿಗಳ ಜತೆಗೂಡಿ ನಿರ್ಭಯದಿಂದ ಕೆಲಸ …

Read More »