ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ. ಪವಾರ್ ಅವರ ಸಿಲ್ವರ್ ಓಕ್ಸ್ ಮನೆಗೆ ಕರೆ ಮಾಡಿದ ವ್ಯಕ್ತಿ, ಮುಂಬೈಗೆ ಬಂದು ಕಂಟ್ರಿಮೇಡ್ ಪಿಸ್ತೂಲ್ ನಿಂದ ಶೂಟ್ ಮಾಡುವುದಾಗಿ ಹಿಂದಿಯಲ್ಲಿ ಬೆದರಿಕೆ ಹಾಕಿದ್ದಾನೆ. “ಮುಂಬೈ ಆಯುಂಗಾ ಔರ್ ದೇಸಿ ಪಿಸ್ತೂಲ್ ಸೆ ಗೋಲಿ ಮಾರ್ ದೂಂಗಾ” ಎಂದು ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆಯಲ್ಲಿ …
Read More »ಬಿಜೆಪಿಯವರಿಗೆ ಧಮ್ ತಾಕತ್ತಿದ್ದರೆ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ: ಡಾ.ಪುಷ್ಪಾ ಅಮರನಾಥ
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋದಲ್ಲಿ ಬಂದಲ್ಲಿ ತಾಕತ್ತಿದ್ದರೆ, ಧಮ್ ಇದ್ದರೆ ಎನ್ನುತ್ತಾರೆ. ಬಿಜೆಪಿಯವರಿಗೆ ಧಮ್ -ತಾಕತ್ತಿದ್ದರೆ ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರಗೊಳ್ಳುವಂತೆ ಮಾಡಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಸವಾಲು ಹಾಕಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದುವರೆಗೂ ಆಗಿಲ್ಲ ಎಂದರು. ವಿಧಾನಸಭೆ ಚುನಾವಣೆಗೆ …
Read More »ಮುಂಬರುವ ಚುನಾವಣೆಗಾಗಿ ಕಾಂಗ್ರೆಸ್ ಭರ್ಜರಿ ತಯಾರಿ
ಬೆಂಗಳೂರು: ಮುಂಬರುವ ಚುನಾವಣೆಗಾಗಿ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಮತದಾರರನ್ನು ಸೆಳೆಯಲು ಬಸ್ ಯಾತ್ರೆಯನ್ನು ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಕೈಗೊಳ್ಳಲು ಯೋಜನೆ ರೂಪಿಸಿದ್ದರು. ಆದ್ರೇ ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಹೀಗಾಗಿ ನಾಳೆ ಇಬ್ಬರು ನಾಯಕರು ಒಟ್ಟಾಗಿ ಒಗ್ಗಟ್ಟು ಪ್ರದರ್ಶನಕ್ಕಾಗಿ ಹುಬ್ಬಳ್ಳಿಗೆ ಒಟ್ಟಾಗಿಯೇ ಪ್ರಯಾಣ ಬೆಳೆಸುತ್ತಿದ್ದಾರೆ. ಇಂದು ನಾಳಿನ ಹುಬ್ಬಳ್ಳಿಯ ಬಸ್ ಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಕರೆ ಮಾಡಿ …
Read More »ಕಾಲುವೆಗೆ ಹಾರಿ ಎರಡು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ತಾಯಿ
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾಳೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಾರಿದ್ದಾಳೆ. ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ (1) ಮೃತರಾದ ದುರ್ದೈಗಳು. ಕಳೆದ ಎರಡು ದಿನಗಳ …
Read More »ಇನ್ಮುಂದೆ ಮನೆಯಲ್ಲೇ ಕುಳಿತು `ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಬಹುದು
ಬೆಂಗಳೂರು : ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ( New Ration Card ) ಪಟ್ಟಿ 2022 ರಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, …
Read More »ಮರ ಎಂದು ಭ್ರಮಿಸಿ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿದ ಚಿರತೆ ವಿದ್ಯುತ್ ಆಘಾತಕ್ಕೆ ಸಾವು!
ತುಮಕೂರು: ರಾಜ್ಯದೆಲ್ಲೆಡ ಚಿರತೆ ದಾಳಿಯದ್ದೇ ಸುದ್ದಿ. ಹಳ್ಳಿ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳೂ ಚಿರತೆ ದಾಳಿಯಿಂದ ನಲುಗಿವೆ. ಕುರುಚಲು ಕಾಡುಗಳಲ್ಲಿ ವಾಸಿರುವ ಈ ಪ್ರಾಣಿಗಳು ಈಗ ನಾನಾ ಕಾರಣಕ್ಕೆ ಜನವಸತಿ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿವೆ. ಹೀಗಾಗಿ ದನ, ನಾಯಿಗಳನ್ನು ಹೊತ್ತೊಯ್ಯುವ, ಮನುಷ್ಯರ ಪ್ರಾಣವನ್ನೇ ತೆಗೆಯುವ (Leopard death) ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಸಿಲುಕಿದ ಚಿರತೆಇದರ ನಡುವೆ ಇಲ್ಲೊಂದು ಚಿರತೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದೆ. ಅಂದ ಹಾಗೆ ಇದು ಒಂದು …
Read More »ಸಿಎಂ ಆಗಮನ ವೇಳೆ ತರಾತುರಿಯಲ್ಲಿ ಮೆಟ್ಟಿಲಿಂಗ್ ರಸ್ತೆ ನಿರ್ಮಾಣ
ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಕೆಸರಿನಿಂದ ಕೂಡಿದ ರಸ್ತೆಯನ್ನು ಪಿಡಬ್ಯುಡಿ ಇಲಾಖೆಯ ಅಧಿಕಾರಿಗಳು ಸಿಎಂ ಆಗಮಿಸುವ ಒಂದೂವರೆ ಗಂಟೆ ಮುಂಚಿತವಷ್ಟೇ ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆಯನ್ನು ನಿರ್ಮಿಸಲಾಯಿತು. ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಮುಖ್ಯದ್ವಾರದಿಂದ ವೇದಿಕೆಗೆ ತೆರಳುವ ರಸ್ತೆಯು ಕೆಸರಿನಿಂದ ಕೂಡಿತ್ತು. ಈ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮತಟ್ಟು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಜೇಡಿಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದರೂ ಕೆಸರುಗದ್ದೆಯಂತಾಗಿತ್ತು. ಇದರಿಂದ ಸಿಎಂ …
Read More »ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂಬೊಮ್ಮಾಯಿ
ಮೈಸೂರು: ಕಾಂಗ್ರೆಸ್ ಜನರಿಗೆ ಮರೆವಿದೆ ಎಂದು ತಿಳಿದಂತಿದೆ. ಆದರೆ ಕಾಂಗ್ರೆಸ್ ನ ಪರಿಚಯ ಜನರಿಗಿದೆ. ಮಹದಾಯಿ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಒಟ್ಟಾಗಿ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಒಟ್ಟಾಗಿ ಹೋಗುವುದು ಅವರಿಗೆ ಸಂಬಂಧಿಸಿದ ಆಂತರಿಕ ವಿಚಾರ. ನಾವು ಹೇಳುವುದೇನೂ ಇಲ್ಲ. ಮಹದಾಯಿ, ಕೃಷ್ಣಾ ಹಾಗೂ …
Read More »ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್.. ಫಲಿಸುತ್ತಾ ಬಿಜೆಪಿ ನಾಯಕರ ತಂತ್ರಗಾರಿಕೆ..?
ಕಾಂಗ್ರೆಸ್ ಹೈಕಮಾಂಡ್ ಚುನಾವಣೆ ತಂತ್ರ ಮಾಡ್ತಿದ್ದಂತೆ ಇತ್ತ ಬಿಜೆಪಿ ಹೈಕಮಾಂಡ್ ತಂತ್ರ ರೂಪಿಸಲು ಪ್ಲಾನ್ ಮಾಡಿದೆ. ಅದಕ್ಕಾಗಿ ಬುಧವಾರದ ಮುಹೂರ್ತ ಫಿಕ್ಸ್ ಮಾಡಿರೋ ಕಮಲ ನಾಯಕರು, ಸಿಎಂ ಬೊಮ್ಮಾಯಿಗೆ ಬುಲಾವ್ ನೀಡಿದ್ದಾರೆ. ಅವತ್ತು ಇಡೀ ದಿನ ದೆಹಲಿಯಲ್ಲಿ ರಾಜ್ಯ ಗೆಲ್ಲುವ ರಣತಂತ್ರದ ಬಗ್ಗೆಯೇ ಚರ್ಚೆ ನಡೆಯಲಿದೆ. ಗುಜರಾತ್ ಗೆದ್ದು ಬೀಗಿದ ಕೇಸರಿ ಬ್ರಿಗೇಡ್, ಕರ್ನಾಟಕದತ್ತ ಚಿತ್ತ ಹರಿಸಿದೆ. ಈಗಾಗಲೇ ಬಿಜೆಪಿ ಕೈಯಲ್ಲಿರೋ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸೋ ನಿಟ್ಟಿನಲ್ಲಿ ಇಡೀ …
Read More »ಕನ್ನಡದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಕಡಾಡಿ
ಬೆಳಗಾವಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ. ದೇಶದ ಜನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ವೀರ ಯೋಧರ ತ್ಯಾಗ, ಬಲಿದಾನಗಳ ಸ್ಮರಣೆಗಾಗಿ ಹಾಗೂ ಸೇನೆಯಲ್ಲಿ ಯೋಗದಾನ ನೀಡುತ್ತಿರುವ ನಮ್ಮೆಲ್ಲ ಸೈನಿಕರ ಗೌರವಾರ್ಥವಾಗಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪಿಸಲು ಆಗ್ರಹಿಸಿದರು. ಕಡಾಡಿ ಮಾತನಾಡುತ್ತಿರುವಾಗ ಸದನದವು ಗದ್ದಲ ಗೂಡಾಗಿತ್ತು.
Read More »
Laxmi News 24×7