Breaking News

Laxminews 24x7

ಕೃಷ್ಣಾ ನದಿ ನೀರಿನ ಪ್ರಮಾಣ ಇನಷ್ಟು ಹೆಚ್ಚಳ

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗ ಕೃಷ್ಣಾ ವೇದಗಂಗಾ, ದೂಧಗಂಗಾ ನದಿಗಳ ನೀರಿನ ಮಟ್ಟ ಭಾನುವಾರ ಇಂದು ಏರಿಕೆಯಾಗಿದೆ. ಕೊಯ್ನಾ ಜಲಾನಯನ ಪ್ರದೇಶ ಮತ್ತು ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆಮಹಾರಾಷ್ಟ್ರ ರಾಜಾಪುರ ಬ್ಯಾರೇಜ್ ಮೂಲಕ 42 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ವೇದಗಂಗಾ,ದೂಧಗಂಗಾ ನದಿಗಳ ನೀರು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ …

Read More »

ಆರೋಗ್ಯಯುತ ಬದುಕಿಗೆ ಪರಿಸರ ರಕ್ಷಣೆ ಅಗತ್ಯ

ಬೈಲಹೊಂಗಲ: ಮನುಷ್ಯ ಸೇರಿ ಎಲ್ಲ ಪ್ರಾಣಿಗಳು ಆರೋಗ್ಯಯುತವಾಗಿ ಬದುಕಲು ಪರಿಸರ ರಕ್ಷಣೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಳ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಮುಂದಿನ …

Read More »

ನೀರಾವರಿ ಯೋಜನೆ ಸಾಕಾರಕ್ಕೆ ಸಹಕರಿಸಿ

ಹುಕ್ಕೇರಿ: ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 40 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ಅಂತರ್ಜಲ ಹೆಚ್ಚಾಗಿ ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆ ಕಾಡುವುದಿಲ್ಲ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು. ತಾಲೂಕಿನ ಸುಲ್ತಾನಪುರ ಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾದಗೂಡ, ಬೆಳವಿ, ಶೇಲಾಪುರ, ಹುಲ್ಲೋಳಿ ಹಟ್ಟಿ ಸೇರಿದಂತೆ ಒಟ್ಟು 21 ಕೆರೆಗಳಿಗೆ 42.50 ಕೋಟಿ …

Read More »

ಹಾವು ಕಡಿತದ ಬಗ್ಗೆ ಸಾರ್ವಜನಿಕರಲ್ಲಿ ಇರಲಿ ಎಚ್ಚರ

ಚಿಕ್ಕೋಡಿ: ಹಾವು ಕಡಿತದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಸರ್ಪ ಕಡಿತದ ಸಂಖ್ಯೆ ಹೆಚ್ಚಿದ್ದು, ಹೊಲ-ಗದ್ದೆಗಳಲ್ಲಿ, ಹೊರ ಆವರಣದಲ್ಲಿ ಕೆಲಸ ಮಾಡುವ ಜನರು ಜೀವಭಯದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಶಾಲೆ-ಕಾಲೇಜುಗಳ ಮೈದಾನ, ಉದ್ಯಾನಗಳಲ್ಲೂ ಹಾವುಗಳ ಭಯ ಕಾಡುವಂತಾಗಿದೆ. ಮಳೆಗಾಲದಲ್ಲಿ ಜಮೀನು, ಶಾಲೆ-ಕಾಲೇಜು, ಮನೆ, ಶಿಥಿಲ ಕಟ್ಟಡಗಳ ಸುತ್ತಲು ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಹಾವುಗಳ ವಂಶಾಭಿವೃದ್ಧಿಗೆ ಸೂಕ್ತ ಸಮಯವಾಗಿರುವ ಹಿನ್ನೆಲೆಯಲ್ಲಿ ಈ ದಿನಗಳಲ್ಲಿ …

Read More »

ಕೃಷ್ಣಾ, ಪಂಚಗಂಗಾ ನದಿ ಪ್ರವಾಹಕ್ಕೆ ಸಂಗಮೇಶ್ವರ ಮಂದಿರ ಮುಳುಗಡೆ

ಬೆಳಗಾವಿ: ಮಾಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಗಡಿಭಾಗಕ್ಕೆ ಹೊಂದಿಕೊಂಡಿರುವ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮುಳಗುವ ಹಂತಕ್ಕೆ ತಲುಪಿದೆ. ಕೃಷ್ಣಾ ಮತ್ತು ಪಂಚಗಂಗಾ ನದಿಗಳ  ನೀರಿನ ಮಟ್ಟದಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟ ಬರೋಬ್ಬರಿ 10 ಅಡಿಗಳಷ್ಟು ಹೆಚ್ಚಾಗಿದ್ದು, ಪ್ರವಾಹದ  ನೀರು ಇಲ್ಲಿನ ಪ್ರಸಿದ್ಧ ದತ್ತ ಮಂದಿರದ ಸಮೀಪಕ್ಕೆ ಬಂದು ತಲುಪಿದೆ. ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ದತ್ತ ದೇವಸ್ಥಾನದ ಆಡಳಿತ ಮಂಡಳಿ …

Read More »

ಬೆಳಗಾವಿ ಅರಣ್ಯ ಇಲಾಖೆಯಿಂದ ತುರ್ತು ನಿಯಂತ್ರಣ ಕೊಠಡಿ ಸ್ಥಾಪನೆ

ಬೆಳಗಾವಿ: ಮುಂಗಾರು ಮಳೆ ಗಾಳಿಗೆ ಬೆಳಗಾವಿ ನಗರದ ರಸ್ತೆ ಅಕ್ಕಪಕ್ಕದಲ್ಲಿರುವ ಮರಗಳು ಮತ್ತು ಅದರ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುವ ಜನರ, ವಾಹನ ಸಂಚಾಲಕು ಮತ್ತು ವಾಹನಗಳ ಮೇಲೆ ಬಿದ್ದು ಜೀವಹಾನಿ, ಆಸ್ತಿ ಹಾನಿಯಾಗುವ ಸಂಭವವಿರುವುದರಿಂದ ಅಂತಹ ಮರಗಳನ್ನು ಜಂಟಿಯಾಗಿ ಸರ್ವೆ ಮಾಡಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸಲು ಅವಶ್ಯಕವಾದ ಪರಿಕರಗಳನ್ನು ಹಾಗೂ ಸಿಬ್ಬಂದಿಗಳನ್ನು ಸದಾ ಸಿದ್ಧತೆಯಲ್ಲಿಡಲು ತಂಡವನ್ನು ರಚಿಸಿ ತುರ್ತು ಪ್ರತಿಕ್ರಿಯೆ ತಂಡವನ್ನು …

Read More »

ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಜನರಿಗೆ ಧೈರ್ಯ ತುಂಬಿದ ಶಾಸಕಿ ಶಶಿಕಲಾ ಜೊಲ್ಲೆ

ಬೆಳಗಾವಿ: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಿಪ್ಪಾಣಿ ಮತಕ್ಷೇತ್ರದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಶಾಸಕಿ ಶಶಿಕಲಾ ಜೊಲೆ ಅವರು ನದಿ ತೀರದ ಜನರೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಶಶಿಕಲಾ ಜೊಲ್ಲೆ ಅವರು ಸೋಮವಾರ ಕ್ಷೇತ್ರದ ಭೀವಶಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ, ವೇದಗಂಗಾ ನದಿಯ ನೀರಿನ ಮಟ್ಟ ಹಾಗೂ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು. …

Read More »

ಸಂಶೋಧನೆಯಲ್ಲಿ ನೈತಿಕತೆ ಮತ್ತು ಮೌಲ್ಯಗಳು ಅಗತ್ಯ: ಪ್ರೊ. ಪಿ.ಜಿ. ತಡಸದ

ಬೆಳಗಾವಿ: ನಾವು ಯಾವುದೇ ಕೆಲಸದಲ್ಲಿ ತೊಡಗಿಕೊಂಡಾಗ ನೈತಿಕತೆ ಮತ್ತು ಮೌಲ್ಯಗಳು  ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.  ಸಂಶೋಧನೆಯು  ವೈಜ್ಞಾನಿಕ ಪ್ರಕ್ರಿಯೆ ಆಗಿರುವುದರಿಂದ ನಾವು ಸಂಶೋಧನೆಯ  ಚೌಕಟ್ಟಿನೊಳಗೆ ಅಗತ್ಯವಾದ  ಮಾರ್ಗಸೂಚಿಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪಿ.ಜಿ. ತಡಸದ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ,  ಆಂತರಿಕ ಗುಣಮಟ್ಟ ಆಂತರಿಕ ಗುಣಮಟ್ಟದ ಭರವಸೆ ಕೋಶ  ಮತ್ತು ಗ್ರಂಥಾಲಯ ವಿಜ್ಞಾನ ವಿಭಾಗ  “ಸಂಶೋಧನೆ …

Read More »

ಹಾದಿ ಬೀದಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ಗೆ ಅನುಮತಿ ನೀಡಿದ್ದು ಯಾರು – ಸುರೇಶ್‌ಕುಮಾರ್‌ ಪ್ರಶ್ನೆ

ಬೆಂಗಳೂರು: ನಗರದಲ್ಲಿ ಯಾರೇ ಪ್ರತಿಭಟನೆ ಮಾಡಿದ್ದರೂ ಫ್ರೀಡಂ ಪಾರ್ಕ್‌ನಲ್ಲಿ ನಡೆಸಬೇಕು. ಹಾದಿ ಬೀದಿಯಲ್ಲಿ ಪ್ರತಿಭಟನೆ  ನಡೆಸಲು ಕಾಂಗ್ರೆಸ್‌ನವರಿಗೆ ಅನುಮತಿ ನೀಡಿದ್ದು ಯಾರು ಎಂದು ರಾಜಾಜಿನಗರ ಬಿಜೆಪಿ  ಶಾಸಕ ಸುರೇಶ್‌ ಕುಮಾರ್‌  ಪ್ರಶ್ನಿಸಿದ್ದಾರೆ. ಇಂದಿನ ಕಾಂಗ್ರೆಸ್‌ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಸೋಮವಾರ ನಾನು ಕ್ಷೇತ್ರ ಜನರೊಂದಿಗೆ ಮಾತನಾಡುತ್ತೇನೆ. ಈ ವೇಳೆ ಜನರು ಬಂದು ಹಲವು ಸಮಸ್ಯೆಗಳನ್ನು ಹೇಳುತ್ತಾರೆ. ಇಂದು 63ನೇ ಜನರೊಂದಿಗೆ ಜನಸೇವಕ ಕಾರ್ಯಕ್ರಮ ನಡೆಸುವಾಗ ಮುತ್ತಿಗೆ ಹಾಕಿದ್ದಾರೆ. …

Read More »

ನಿರ್ಭಯ ಕೇಸ್‌ನಲ್ಲಿದ್ದಂತವರಲ್ಲ ಇವರು, ಪೋಕ್ಸೋ ಆರೋಪಿಗಳನ್ನು ಬಿಡಿ – ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಕಲಬುರಗಿ: ರಾಜ್ಯದಲ್ಲಿ ಹುಸಿ ಬಾಂಬ್ ಬೆದರಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಯಾದಗಿರಿ  ಹಾಗೂ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ನಿರ್ಭಯ  ಪ್ರಕರಣದಲ್ಲಿದ್ದ ಆರೋಪಿಗಳ ರೀತಿಯಲ್ಲ, ಈ ಪೋಕ್ಸೋ ಆರೋಪಿಗಳನ್ನು ಬಿಡಿ ಎಂದು ಕಲಬುರಗಿ ಕೋರ್ಟ್‌ಗೆ  ಬಂದ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ 2 ರಿಂದ 3 ಬಾರಿ ಬಾಂಬ್ ಬೆದರಿಕೆ ಬಂದಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ತಮಿಳುನಾಡು …

Read More »