ಬೆಳಗಾವಿ : ಕೆ.ಎಲ್.ಇ. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೇರ್)ನ ಕೆ.ಎಲ್.ಇ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರು ಹಾಗೂ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾಗಿದ್ದ ಪ್ರೊ. (ಡಾ.) ಸುನೀಲ ಎಸ್. ಜಲಾಲಪುರೆ ಅವರು ಕೆ.ಎಲ್.ಇ. ಸಂಸ್ಥೆಯ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 1998ರಿಂದ ಕೆ.ಎಲ್.ಇ. ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 2013ರಿಂದ ಆಜೀವ ಸದಸ್ಯರಾಗಿದ್ದಾರೆ. ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತ ಕ್ಷೇತ್ರಗಳಲ್ಲಿ 28 ವರ್ಷಗಳ ಅನುಭವ ಹೊಂದಿರುವ ಡಾ. …
Read More »ಬುಧವಾರವೂ ಶಾಲೆ, ಕಾಲೇಜುಗಳಿಗೆ ರಜೆ
ಬೆಳಗಾವಿ : ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ 3 ತಾಲೂಕುಗಳ ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ ವ್ಯಾಪಕ ಮಳೆ: ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಪ್ಪಾಣಿ, ಖಾನಾಪುರ ತಾಲ್ಲೂಕುಗಳ ಮತ್ತು ಬೆಳಗಾವಿ ನಗರ …
Read More »ಬೆಳಗಾವಿಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ: ಬೆಳಗಾವಿ ಬಿಲ್ಲೆಯ ನಿಪ್ಪಾಣಿ ಸಮೀಪದ ಸ್ಥವನಿಧಿ ಘಾಟ್‌ನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರು ದುರ್ಮಣ ಹೊಂದಿರುವ ಘಟನೆ ನಡೆದಿದೆ. ಚಲಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಉಳಿದ ಇಬ್ಬರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರನ್ನು …
Read More »ಮುಂಬೈನಲ್ಲಿ ಮಳೆಯ ರೌದ್ರನರ್ತನ; ಒಟ್ಟು 10 ಸಾವು; ಇಂದು ಕೂಡ 43 ರೈಲು ಸಂಚಾರ ರದ್ದು
ಮುಂಬೈ: ಕಳೆದ ಮೂರು ದಿನಗಳಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ, ರೈಲು ಸೇವೆ ಮತ್ತು ದೈನಂದಿನ ಬದುಕಿನ ಮೇಲೆ ಮಳೆಯ ಪರಿಣಾಮ ತೀವ್ರವಾಗಿದೆ. ಈ ದುರ್ಘಟನೆಗಳ ನಡುವೆ ಭಿವಂಡಿಯಲ್ಲಿ ಮನಕಲಕುವ ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ 13 ವರ್ಷದ ಬಾಲಕ ಮುಹಮ್ಮದ್ ಅಬೂಝರ್ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ನೀರಿನ ರಭಸಕ್ಕೆ ಸಿಲುಕಿ …
Read More »ಹಿಟ್ & ರನ್‌ಗೆ 28 ವರ್ಷದ ಯುವಕ ಬಲಿ; ಬೈಕ್‌ಗೆ ಡಿಕ್ಕಿ ಹೊಡೆದು ಚಾಲಕ ಎಸ್ಕೇಪ್
ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣದಲ್ಲಿ 28 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರದ ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪಯ್ಯನಗರ ಬಳಿ ನಡೆದಿದೆ. 28 ವರ್ಷದ ವಿನೋದ್ ಮೃತ ಯುವಕ. ವಿನೋದ್ ತನ್ನ ಅಣ್ಣನ ಜೊತೆ ಸೇರಿ ಮಾದನಾಯಕನಹಳ್ಳಿಯಲ್ಲಿ ಬೇಕರಿ ನಡೆಸುತ್ತಿದ್ದ. ಪ್ರತಿದಿನದಂತೆ ಅಂಗಡಿ ಮುಚ್ಚಿಕೊಂಡು ಹೆಸರಘಟ್ಟದಲ್ಲಿರುವ ಮನೆಗೆ ಆಕ್ಟಿವಾ ಬೈಕ್‌ನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕೆಂಪಯ್ಯನಗರ ಬಳಿ ಎದುರಿನಿಂದ ಬಂದ …
Read More »ಕೊಡಗಿನಲ್ಲಿ ಬಿರುಸು ಪಡೆದ ಮಳೆ – ಜಲಾವೃತ ಸೇತುವೆಯಿಂದ ಗ್ರಾಮಕ್ಕೆ ಸಂಪರ್ಕ ಕಡಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯ ಪರಿಣಾಮ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದ ಬಸವೇಶ್ವರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಜಲ ದಿಗ್ಬಂಧನಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ದಿನೇದಿನೇ ಬಿರುಸು ಪಡೆಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೇತುವೆಯ ಮೇಲೆ ಸುಮಾರು ಮೂರು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಏಕಾಏಕಿ ನೀರಿನ ಮಟ್ಟ ಹೆಚ್ಚಾದ ಕಾರಣ ಗ್ರಾಮಸ್ಥರಲ್ಲಿ …
Read More »ಹುಡುಗಿಯರನ್ನ ಇಟ್ಕೊಂಡು ದಂಧೆ ನಡೆಸ್ತಿದ್ದ ನಟೋರಿಯಸ್ ಪಿಂಪ್ ಬಂಧನ
ಬೆಂಗಳೂರು: ಹುಡುಗಿಯರನ್ನ ಇಟ್ಟುಕೊಂಡು ದಂಧೆ ನಡೆಸುತ್ತಿದ್ದ ನಟೋರಿಯಸ್ ಪಿಂಪ್ ಒಬ್ಬನನ್ನ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಕುಮಾರ್ @ ಮಂಗಳಮುಖಿ ಚೇತನ್ (40) ಬಂಧಿತ ಆರೋಪಿ. ನಟೋರಿಯಸ್ ಪಿಂಪ್ ಚೇತನ್ ವಿರುದ್ಧ ಪೀಣ್ಯಾ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ಹಲವು ಠಾಣೆಗಳಲ್ಲಿ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದನ್ನೂ ಮಂಗಳಮುಖಿ ವೇಷ ಧರಿಸುತ್ತಿದ್ದ ಚೇತನ್ ಪೊಲೀಸರಿಂದಲೂ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ. ಹೊರ ರಾಜ್ಯಗಳಿಂದ ಹುಡುಗಿಯರನ್ನ ಕರೆತಂದು ದಂಧೆ ನಡೆಸುತ್ತಿದ್ದ. 10 ಕ್ಕೂ …
Read More »ʻಜೀವನ ಸಾಕಾಗಿದೆʼ – ಗೆಳೆಯನಿಗೆ ಕೊನೇ ಮೆಸೇಜ್ ಮಾಡಿ ಸ್ಯಾಂಕಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನ ಚಿಕ್ಕಬಾಣವರ ಮೂಲದ ತೇಜು (20) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸದಾಶಿವನಗರ ಪೊಲೀಸರು ಮೃತದೇಹವನ್ನ ಹೊರಗೆ ತೆಗೆದಿದ್ದಾರೆ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಶಂಕೆ ಮೇಲ್ನೋಟಕ್ಕೆ, ಪ್ರೀತಿ ವಿಚಾರಕ್ಕೆ ತೇಜು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೂ ಮುನ್ನ ಆಕೆ ʻನನಗೆ ಜೀವನ ಸಾಕಾಗಿದೆʼ …
Read More »ಡಿಒ ಕಿರುಕುಳ ಆರೋಪ – ಡೆತ್ ನೋಟ್ ಬರೆದಿಟ್ಟು ಬಿಲ್ ಕಲೆಕ್ಟರ್ ಆತ್ಮಹತ್ಯೆ
ದಾವಣಗೆರೆ: ಪಿಡಿಒ ಕಿರುಕುಳದಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಬಿಲ್ ಕಲೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಬಿಳಚೋಡು ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಶಿವಪ್ಪ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಶಿವಪ್ಪ, ಬಿಳಚೋಡು ಪಿಡಿಒ ನಂದಲಿಂಗೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಹೆಚ್ಚುವರಿ …
Read More »4 ದಿನಗಳ ಬಳಿಕ ಪತ್ರಿಕಾ ಪ್ರಕಟಣೆ – ಅನುಮಾನಕ್ಕೆ ಎಡೆ ಮಾಡಿಕೊಟ್ಟ ಅಂಜನಾದ್ರಿ ಹುಂಡಿ ಎಣಿಕೆ
ಕೊಪ್ಪಳ: ಅಂಜನಾದ್ರಿಯ ಹುಂಡಿ ಎಣಿಕೆಯಾದ ನಾಲ್ಕು ದಿನಗಳ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ಥಳ ಎಂದೇ ಖ್ಯಾತಿ ಪಡೆದಿದೆ. ಇತ್ತೀಚಿಗೆ ಜು.3ರಂದು ಅಂಜನಾದ್ರಿಯ ಆಂಜನೇಯನ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಅದಾದ ಬಳಿಕ ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನಾಲ್ಕು ದಿನಗಳ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ ತಾಲೂಕು ಆಡಳಿತದ ನಡೆ ಇದೀಗ …
Read More »
Laxmi News 24×7