ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಸೆ.23ರಂದು ಉತ್ತರ ಒಳನಾಡಿನಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಸೆ.23 ಮತ್ತು 24ರಂದು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. …
Read More »ಲೇಡಿ ಪಿಎಸ್ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್ಗೌಡ ಪುತ್ರಿ
ಮಂಡ್ಯ: ಲೇಡಿ ಪಿಎಸ್ಐಗೆ ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್ಗೌಡ ಪುತ್ರಿ ಐಶ್ವರ್ಯ ಪಿಎಸ್ಐ ಸವಿತಾ ಪಾಟೀಲ್ಗೆ ವೀಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ಗೌಡ ಪುತ್ರಿ ಐಶ್ವರ್ಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವರ ದರ್ಶನಕ್ಕೆ ಬಂದಿದ್ದ ವೇಳೆ ಗರ್ಭಗುಡಿಗೆ ಬಿಡುವ ವಿಚಾರದಲ್ಲಿ ಕಿರಿಕ್ ಮಾಡಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಸವಿತಾ ಬಳಿ ಐಶ್ವರ್ಯ ವಾಗ್ವಾದ ನಡೆಸಿದ್ದರು. ಈ ವೇಳೆ ಐಶ್ವರ್ಯ ಪಿಎಸ್ಐಗೆ …
Read More »ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ – ರಜೆ ಮೇಲೆ ಊರಿಗೆ ಬಂದಿದ್ದ ಐಟಿಬಿಪಿ ಯೋಧ ಸಾವು
ರಾಮನಗರ: ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿ, ರಜೆಯ ಮೇಲೆ ಊರಿಗೆ ಬಂದಿದ್ದ ಐಟಿಬಿಪಿ ಯೋಧ ಮೃತಪಟ್ಟ ಘಟನೆ ಕನಕಪುರ ಬೈಪಾಸ್ ರಸ್ತೆಯ ಗಡಸಳ್ಳಿ ಬಳಿ ತಡರಾತ್ರಿ ನಡೆದಿದೆ. ಕನಕಪುರ ತಾಲೂಕಿನ ಶಿವನಹಳ್ಳಿ ನಿವಾಸಿ ಚನ್ನವೀರೇಗೌಡ (45) ಮೃತಪಟ್ಟ ಯೋಧ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಪಡೆಯ ಯೋಧರಾಗಿದ್ದ ಚನ್ನವೀರೇಗೌಡ, ಮೊನ್ನೆಯಷ್ಟೇ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ತಡರಾತ್ರಿ ಯೋಧ ತಮ್ಮ ಮಗನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಗಡಸಳ್ಳಿ ಬಳಿ ರಸ್ತೆ ಬದಿ ನಿಂತಿದ್ದ …
Read More »ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ಬೀದರ್ನಲ್ಲಿ 3 ಕಡೆ ಲೋಕಾಯುಕ್ತ ದಾಳಿ
ಬೀದರ್: ಬೆಳಂಬೆಳ್ಳಗ್ಗೆ ಲೋಕಾಯುಕ್ತ ಪೊಲೀಸರ ತಂಡ ಏಕಕಾಲಕ್ಕೆ ಮೂರು ಕಡೆ ದಾಳಿ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಕೃಷಿ ಇಲಾಖೆಯ ಆಡಳಿತಾಧಿಕಾರಿಯಾಗಿದ್ದ ಮಾಣೀಕ್ ಶೆರಿಕಾರ್ ಎಂಬ ನಿವೃತ್ತ ಅಧಿಕಾರಿಗೆ ಲೋಕಾ ಶಾಕ್ ನೀಡಿದೆ. ಬೀದರ್ ನಗರದ ಹಕ್ಕ್ ಕಾಲೋನಿ ನಿವಾಸ, ಹುಮ್ನಾಬಾದ್ನ ನಿವಾಸ ಮತ್ತು ಚಿಟಗುಪ್ಪ ತಾಲೂಕಿನ ಮುತ್ತಂಗಿಯ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಮೇಲೆ …
Read More »ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ – ಏಳು ಮಂದಿ ಅರೆಸ್ಟ್
ಆನೇಕಲ್: ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ ನಡೆಸುತ್ತಿದ್ದ ಗ್ಯಾಂಗನ್ನ ಆನೇಕಲ್ ಪೊಲೀಸರು ಬೇಟೆಯಾಡಿದ್ದಾರೆ. ಗನ್ ಡೀಲಿಂಗ್ ನಡೆಸುತ್ತಿದ್ದ 7 ಆರೋಪಿಗಳನ್ನ ಆನೇಕಲ್ ಪೊಲೀಸರು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಬಂಧಿಸಿದ 7 ಮಂದಿ ಪೈಕಿ 6 ಮಂದಿ ನಟೋರಿಯಸ್ ರೌಡಿ ಶೀಟರ್ಗಳಾಗಿದ್ದಾರೆ. ಬಂಧಿತರನ್ನ ಪ್ರದೀಪ್ ರಮೇಶ್, ಮನೋಜ್ @ ಜಾಕಿ, ರಿಜ್ವಾನ್ ಪಾಷ @ ಕುಳ್ಳ ರಿಜ್ವಾನ್, ನಂಜಪ್ಪ @ ಡೆಡ್ಲಿ …
Read More »ತಡರಾತ್ರಿ ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು
ಧಾರವಾಡ: ತಡರಾತ್ರಿ ಹುಬ್ಬಳ್ಳಿ–ಗದಗ ಬೈಪಾಸ್ನಲ್ಲಿ ಕೊರಿಯರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತರನ್ನು ಜಯರಾಜನಗರ ನಿವಾಸಿಗಳಾದ ರಜನಿ ತಿಕಲಾ ಹಾಗೂ ಸುಕುಮಾರ ತಿಕಲಾ ಎಂದು ಗುರುತಿಸಲಾಗಿದೆ. ರಜನಿ ತಿಕಲಾ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ರಜನಿಯನ್ನು ಪತಿ ಸುಕುಮಾರ ಬೈಕ್ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಎದುರಿನಿಂದ …
Read More »ಸಾಮೂಹಿಕ ರಾಜೀನಾಮೆಗೆ ʻ108ʼ ಸಿಬ್ಬಂದಿ ನಿರ್ಧಾರ – ಇಂದಿನಿಂದಲೇ ರಾಜ್ಯದಲ್ಲಿ ಸೃಷ್ಟಿಯಾಗುತ್ತಾ ಹೆಲ್ತ್ ಎಮೆರ್ಜೆನ್ಸಿ?
ಬೆಂಗಳೂರು: ನಗರ ಸೇರಿ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಸೃಷ್ಠಿಯಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇಂದು ಜಿವಿಕೆ ಸಂಸ್ಥೆ ಜೊತೆ 108 ನೌಕರರ ಮಹತ್ವದ ಸಭೆ ನಡೆಯಲಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದ ನೌಕರರು, ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬೇಡಿಕೆ ಈಡೇರದೇ ಇದ್ರೆ ಇಂದು ರಾತ್ರಿಯಿಂದಲೇ 108 ಅಂಬುಲೆನ್ಸ್ ಸೇವೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಸಾಮೂಹಿಕ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿದ್ಧತೆ ನಡೆದಿದೆ. …
Read More »ಬರದ ಬಗ್ಗೆ ಚರ್ಚೆಗೆ ಸಚಿವರ ʻಬರʼ; ಕಾಂಗ್ರೆಸ್ – ಬಿಜೆಪಿ ಮಧ್ಯೆ ತೀವ್ರ ಜಟಾಪಟಿ
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಬರದ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಚರ್ಚೆ ಆರಂಭಕ್ಕೂ ಮುನ್ನವೇ ಸದನದಲ್ಲಿ ಸಚಿವರ ಗೈರುಹಾಜರಿ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಬರದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಸಚಿವರು ಸದನದಲ್ಲಿ ಹಾಜರಿ ಇಲ್ಲದಿರುವುದನ್ನ ವಿಪಕ್ಷ ಸದಸ್ಯರು ಪ್ರಶ್ನಿಸಿದರು. ʻʻಬರದ ಬಗ್ಗೆ ಚರ್ಚೆಗೆ ಸಚಿವರ ಬರ ಇದೆ. ಮಂತ್ರಿಗಳಿಗೆ …
Read More »ಶಾಲಾ ಮಕ್ಕಳಿಗೆ ಉಪಾಹಾರ ಯೋಜನೆ ವಿಸ್ತರಿಸಿದ ಸಿಎಂ ವಿಜಯ್
ಚೆನ್ನೈ: ಶಾಲಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಬೆಳಗಿನ ಉಪಾಹಾರ (ಬ್ರೇಕ್ಫಾಸ್ಟ್) ಯೋಜನೆಯನ್ನು 6ರಿಂದ 8ನೇ ತರಗತಿ ವರೆಗೆ ತಮಿಳುನಾಡು ) ಸರ್ಕಾರ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಮಂಗಳವಾರ ಚೆನ್ನೈನ ತಿರುವನ್ಮಿಯೂರ್ನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವಿಸ್ತರಿತ ‘ಪೆರುಂತಲೈವರ್ ಕಾಮರಾಜರ್ ಉಚಿತ ಉಪಹಾರ ಯೋಜನೆ’ಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಉಪಾಹಾರ ಬಡಿಸಿದ ಸಿಎಂ ವಿಜಯ್, ಬಳಿಕ ಮಕ್ಕಳ ಜೊತೆ ತಾವೂ ಕುಳಿತು ಪೊಂಗಲ್ ಸವಿದರು. …
Read More »‘ವಂದೇ ಮಾತರಂ’ 2 ಚರಣ ಹಾಡುವ ರಾಜ್ಯ ಸರ್ಕಾರ ಆದೇಶ ಪ್ರಶ್ನಿಸಿ ಅರ್ಜಿ; ವಿಚಾರಣೆ 3 ವಾರ ಮುಂದೂಡಿಕೆ
ಬೆಂಗಳೂರು: ವಂದೇ ಮಾತರಂ ಗೀತೆಯ ಎರಡು ಚರಣಗಳನ್ನ ಮಾತ್ರ ಹಾಡುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅನಗದ್ ಕಾಮತ್ ವಾದ ಮಂಡಿಸಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಗೀತೆಯ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮಾತ್ರ ತೀರ್ಮಾನಿಸುವ ಅಧಿಕಾರ ಹೊಂದಿದ್ದು, ಪ್ರತಿ ರಾಜ್ಯ ಸರ್ಕಾರ ಹೊಸದಾಗಿ ಅದೇಶ ಮಾಡಲು ಸಾಧ್ಯವಿಲ್ಲ. …
Read More »
Laxmi News 24×7