ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ, ಇಲ್ಲಿನ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 100 ಜನರಿಗೆ ಆಂಜಿಯೊಗ್ರಫಿ ಹಾಗೂ 25 ಹೃದ್ರೋಗಿಗಳಿಗೆ ಆಂಜಿಯೊಪ್ಲಾಸ್ಟಿಯನ್ನು ಉಚಿತವಾಗಿ ಮಾಡಲಾಗುವುದು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ. ದಯಾನಂದ ತಿಳಿಸಿದರು. ‘ಆರ್ಥಿಕವಾಗಿ ಹಿಂದುಳಿದವರು ಮಾತ್ರ ಇದನ್ನು ಬಳಸಿಕೊಳ್ಳಲು ಸಾಧ್ಯ. ಈಗಾಗಲೇ ಸರ್ಕಾರದ ವೈದ್ಯಕೀಯ ಸವಲತ್ತು, ವಿಮೆ ಅನುಕೂಲ ಇದ್ದವರಿಗೆ ಬರುವುದಿಲ್ಲ. …
Read More »ಸಕಾರಾತ್ಮಕ ಸುದ್ದಿಗೆ ಆದ್ಯತೆ ನೀಡಿ: ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ: ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜನಪ್ರತಿನಿಧಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಚಾಕಚಕ್ಯತೆ ಹೊಂದಿರಬೇಕು. ಜಗತ್ತಿನಲ್ಲಿ ನಡೆಯುವ ದಿನನಿತ್ಯದ ಆಗು ಹೋಗುಗಳನ್ನು ಗಮನಿಸಿ ಸಕಾರಾತ್ಮಕ ಹಾಗೂ ಸ್ಥಳೀಯ ಸುದ್ದಿಗಳನ್ನು ನಿಖರವಾಗಿ, ನಿಷ್ಪಕ್ಷವಾಗಿ ಬರೆದು ಜನಮನ್ನಣೆ ಪಡೆಯಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು. ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ …
Read More »ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ
ಬೆಳಗಾವಿ: ‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ ತುಂಬಿದೆ. ಸರ್ಕಾರಿ ಮಾರ್ಗಸೂಚಿಯಂತೆ, ಅರ್ಥಪೂರ್ಣವಾಗಿ ಅಧಿವೇಶನದ ಶತಮಾನೋತ್ಸವ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶತಮಾನೋತ್ಸವ ಆಚರಣೆಗೆ ಸರ್ಕಾರ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು’ ಎಂದರು. ‘ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕರಿಸಿದ್ದ ಗೊತ್ತುವಳಿಗಳ …
Read More »ಘಟಪ್ರಭಾ ನದಿ ಪ್ರವಾಹ: 42 ಗ್ರಾಮಗಳು ಬಾಧಿತ
ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಮಳೆ ಅಬ್ಬರ ತಗ್ಗಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಇದೆ. ಹೀಗಾಗಿ ಕೃಷ್ಣಾ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಯಥಾಸ್ಥಿತಿಯಿದೆ. 44 ಸೇತುವೆಗಳು ಮುಳುಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 2.45 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ದೂಧಗಂಗಾ ನದಿಯಿಂದ 48,570 ಕ್ಯುಸೆಕ್ ಸೇರಿ 2.93 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ನಲ್ಲಿ ಹರಿಯುತ್ತಿದೆ. ನವೀಲುತೀರ್ಥ ಅಣೆಕಟ್ಟೆಯಿಂದ 5 ಸಾವಿರ …
Read More »ಮುಂಬೈನಲ್ಲಿ ಮಹಿಳೆಯನ್ನು ಕೊಂದು ಸಿಕ್ಕಿಬಿದ್ದ ಕಲಬುರಗಿ ಮೂಲದ ದಾವೂದ್ ಶೇಖ್
ಥಾಣೆ, ಜು 30 (ಪಿಟಿಐ) : ನವಿ ಮುಂಬೈನ ಉರಾನ್ ರೈಲು ನಿಲ್ದಾಣದ ಬಳಿ 20 ವರ್ಷದ ಮಹಿಳೆಯ ಶವ ಪತ್ತೆಯಾದ ಎರಡು ದಿನಗಳ ನಂತರ, ಆಕೆಯನ್ನು ಕೊಂದ ಆರೋಪದ ಮೇಲೆ ಕರ್ನಾಟಕ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ದಾವೂದ್ ಶೇಖ್ ನನ್ನು ಕರ್ನಾಟಕದ ಗುಲ್ಬರ್ಗಾದ ಶಹಾಪುರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಶನಿವಾರ ಮಧ್ಯರಾತ್ರಿ 2 ಗಂಟೆ …
Read More »ಕರೊನಾಗೆ ಕೊರೊನಿಲ್ ಔಷಧಿ; ಹೇಳಿಕೆ ತೆಗೆಯುವಂತೆ ರಾಮದೇವ್ಗೆ ದೆಹಲಿ ಕೋರ್ಟ್ ಸೂಚನೆ
ನವದೆಹಲಿ: ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರ ಸಾವಿಗೆ ಅಲೋಪತಿ ವೈದ್ಯರೇ ಕಾರಣ ಎಂದು ದೂಷಿಸಿರುವ ಮತ್ತು ಪತಂಜಲಿಯ ಕೊರೊನಿಲ್ ಔಷಧವನ್ನು ಚಿಕಿತ್ಸೆಯಾಗಿ ಪ್ರಚಾರ ಮಾಡುವ ಎಲ್ಲಾ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ಬಾಬಾ ರಾಮ್‌ದೇವ್ ಅವರಿಗೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು, ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ರಾಮ್‌ದೇವ್ ಅವರಿಗೆ ಸೂಚಿಸಿದೆ. ಮತ್ತು ಸಾಮಾಜಿಕ ಜಾಲತಾಣದಲ್ಲಿನ ಹೇಳಿಕೆಗಳನ್ನು ಮೂರು ದಿನಗಳಲ್ಲಿ ತೆಗೆದುಹಾಕುವಂತೆ ಸೂಚಿಸಿದೆ. …
Read More »ಪ್ರವಾಹದಲ್ಲಿ ಕೊಚ್ಚಿ ಹೋದ ಪುಸ್ತಕ, ಕಣ್ಣೀರಿಟ್ಟ ವಿದ್ಯಾರ್ಥಿನಿ!
ಬಾಗಲಕೋಟೆ: ರಾಜ್ಯದಲ್ಲಿ ಕೆಲವಾರಗಳಿಂದ ವರುಣನ ಆರ್ಭಟ ನಿಲ್ಲುತ್ತಲೇ ಇಲ್ಲ. ಈಗಾಗಲೇ ಕೆಲ ಜಿಲ್ಲೆಗಳು ವರುಣನ ಅಬ್ಬರಕ್ಕೆ ಜಲಾವೃತವಾಗಿದ್ದು, ಘಟಪ್ರಭಾ ನದಿ ಪ್ರವಾಹದಿಂದ, ಬಾಗಲಕೋಟೆಯ (Bagalkote) ಮುಧೋಳ ತಾಲೂಕಿನ ಮಿರ್ಜಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಈ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ, ನೂರಾರು ಮನೆಗಳು ಜಲಾವೃತವಾಗಿ (Flood), ಈಗಾಗಲೇ ಕಾಳಜಿ ಕೇಂದ್ರಕ್ಕೆ ಜನರು ಸ್ಥಳಾಂತರವೂ ಆಗಿದ್ದಾರೆ. ಮಳೆಯಬ್ಬರದಿಂದ ಮಿರ್ಜಿ ಗ್ರಾಮ ನದಿಯಂತಾಗಿದ್ದು, ಈಗಾಗಲೇ 70 ಕುಟುಂಬಗಳು ಮನೆಗೆ ಬೀಗ …
Read More »ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ‘ಮೇಕೆದಾಟು’ ಅಣೆಕಟ್ಟು ಕಟ್ಟಲು ನಾವು ಸಿದ್ಧ ; ಸಿಎಂ
ಬೆಂಗಳೂರು : ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ ‘ಮೇಕೆದಾಟು’ ಆಣೆಕಟ್ಟು ಕಟ್ಟಲು ನಾವು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದರು. 5ನೇ ಹಣಕಾಸು ಆಯೋಗದ ಅವಧಿಯಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ …
Read More »ಲಂಕಾಗೆ ಬಂದಿಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಕೊಲಂಬೊ: ಶ್ರೀಲಂಕಾ ವಿರುದ್ದದ ಏಕದಿನ ಸರಣಿಗಾಗಿ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma), ಹಿರಿಯ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಏಕದಿನ ಸರಣಿಗಾಗಿ ಮಾತ್ರ ಆಯ್ಕೆಯಾದ ಆಟಗಾರರು ದ್ವೀಪ ರಾಷ್ಟ್ರಕ್ಕೆ ಬಂದಿಳಿದರು. ಭಾರತೀಯ ನಾಯಕನ ಹೊರತಾಗಿ, ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳಿಗೆ ಪ್ರತ್ಯೇಕವಾಗಿ ಆಯ್ಕೆಯಾದ ಆಟಗಾರರು ಭಾನುವಾರ ರಾತ್ರಿ ಶ್ರೀಲಂಕಾ ರಾಜಧಾನಿಯಲ್ಲಿರುವ ಐಟಿಸಿ ರತ್ನದೀಪ ಹೋಟೆಲ್ ತೆರಳಿದರು. ವಿರಾಟ್ ಕೊಹ್ಲಿ, …
Read More »ಕಬಿನಿಗೆ ಬಾಗೀನ ಅರ್ಪಿಸಿದ ಸಿಎಂ , ಡಿಸಿಎಂ
ಮೈಸೂರು: ಬಾಗೀನ ಸಮರ್ಪಣೆ ಹಿನ್ನೆಲೆ ಕಬಿನಿ ಜಲಾಶಯ, ಕೆಆರ್ಎಸ್ ಜಲಾಶಯ ವಿವಿಧ ಹೂಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದ್ವು. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿಂದು ಸಂಭ್ರಮ ಮನೆ ಮಾಡಿತ್ತು. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಜಲಾಶಯ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. …
Read More »
Laxmi News 24×7