ಮೈಸೂರು ರಾಜವಂಶಸ್ಥರಾದ ಒಡೆಯರ್ ಅವರಿಂದಾಗಿ ದಸರಾ ಜಗದ್ವಿಖ್ಯಾತಿಯಾಗಿದೆ. ಹಬ್ಬದ ಸಮಯದಲ್ಲೇ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ದಸರಾ ಹೊತ್ತಲ್ಲೇ ಒಡೆಯರ್ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ ಮನೆಮಾಡಿದೆ. ಯದುವೀರ್ ಹಾಗೂ ಪತ್ನಿ ರಾಣಿ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು …
Read More »ಟಾಟಾ ಟ್ರಸ್ಟ್’ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ
ಮುಂಬೈ: ಟಾಟಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ವಿಶಾಲವಾದ ಟಾಟಾ ಗ್ರೂಪ್ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಒಟ್ಟಾರೆಯಾಗಿ 66% ಪಾಲನ್ನು ಹೊಂದಿರುವ ಟ್ರಸ್ಟ್ಗಳ ನಾಯಕತ್ವವನ್ನು ಅವರು ವಹಿಸಿಕೊಳ್ಳುತ್ತಾರೆ. ದಿವಂಗತ ರತನ್ ಟಾಟಾ ಅವರ ನಿಕಟವರ್ತಿ ಮತ್ತು ಪ್ರಮುಖ ಟಾಟಾ ಚಾರಿಟಿಗಳ ಟ್ರಸ್ಟಿ ಮೆಹ್ಲಿ ಮಿಸ್ತ್ರಿ ಸೇರಿದಂತೆ ಇತರ ಸಂಭಾವ್ಯ ಅಭ್ಯರ್ಥಿಗಳನ್ನು ಪರಿಗಣಿಸಿದ ನಂತರ ನೋಯೆಲ್ ಅವರ ನೇಮಕಾತಿ ಬಂದಿದೆ. ನೋಯೆಲ್ …
Read More »ತಾಯಿ ಚಾಮುಂಡೇಶ್ವರಿ ಕೃಪೆ ನನ್ನ ಮೇಲಿದೆ, ಅದಕ್ಕೆ ದೀರ್ಘಕಾಲದಿಂದ ರಾಜಕೀಯದಲ್ಲಿದ್ದೇನೆ:ಸಿಎಂ
ಮೈಸೂರು : ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಾಜಕೀಯದಲ್ಲಿ …
Read More »ಚರ್ಚ್‌ನಲ್ಲಿ ಆಯುಧ ಪೂಜೆ ಮಾಡಿ ಗಮನ ಸೆಳೆದ ಕ್ರೈಸ್ತರು
ಚಾಮರಾಜನಗರ, ಅಕ್ಟೋಬರ್, 11: ಇಂದು (ಅಕ್ಟೋಬರ್ 11) ಆಯುಧ ಪೂಜಾ ಕಾರ್ಯಗಳು ನಡೆಯುತ್ತಿವೆ. ಮತ್ತೊಂದೆಡೆ ಕ್ರೈಸ್ತ ಸಮುದಾಯದವರು ಹಿಂದೂಗಳ ಪವಿತ್ರ ಆಚರಣೆಯಾದ ಆಯುಧ ಪೂಜೆಯನ್ನು ಮಾಡುವ ಮೂಲಕ ಗಮನ ಸೆಳೆದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು, ಇಂದು ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್‌ಗೆ ಕೊಂಡೊಯ್ದು ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲಿನ ಪಾದ್ರಿ ಸಗಾಯ್ ರಾಜ್ ಪ್ರಾರ್ಥನೆ, …
Read More »ಗಣಿಗಾರಿಕೆ ಅಕ್ರಮಗಳ ತನಿಖೆಯ ಎಸ್‌ಐಟಿ ಕಾರ್ಯಾವಧಿ ವಿಸ್ತರಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಅಕ್ಟೋಬರ್ 10: ಗಣಿಗಾರಿಕೆ ಅಕ್ರಮಗಳ ಕುರಿತ ತನಿಖೆಯ ಎಸ್‌ಐಟಿ ಕಾರ್ಯಾವಧಿಯನ್ನು ಜುಲೈ 1ರಿಂದ ಒಂದು ವರ್ಷ ವಿಸ್ತರಿಸಿದೆ. ಇಂದು ಸಿಎಂ ಸಿದ್ದರಾಮಯ್ಯ(Siddaramaiah)ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್, ಗಣಿಗಾರಿಕೆ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಇದೀಗ ಅದರ ಅವಧಿ …
Read More »ವಾರಾಂತ್ಯದ ರಜೆ: ರಸ್ತೆಗಳಲ್ಲಿ ದಟ್ಟಣೆ
ಬೆಂಗಳೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ವಾರಾಂತ್ಯ ಮೂರು ದಿನಗಳು ರಜೆ ಇರುವುದರಿಂದ ಪ್ರವಾಸ, ಧಾರ್ಮಿಕ ಸ್ಥಳ ಹಾಗೂ ಊರಿಗೆ ತೆರಳುವರ ಸಂಖ್ಯೆ ಹೆಚ್ಚಾಗಿದ್ದು, ನಗರದ ಬಸ್ ನಿಲ್ದಾಣಗಳೆಲ್ಲ ಗುರುವಾರ ಪ್ರಯಾಣಿಕರಿಂದ ಭರ್ತಿಯಾಗಿದ್ದವು. ನಗರದಿಂದ ಹೊರಟ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಬುಧವಾರ ರಾತ್ರಿಯಿಂದಲೇ ಜನರು ಊರಿನತ್ತ ತೆರಳಿದ್ದು ಕಂಡುಬಂತು. ಕೆಂಪೇಗೌಡ ಬಸ್‌ನಿಲ್ದಾಣ, ಯಶವಂತಪುರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದಲ್ಲೂ ಪ್ರಯಾಣಿಕರ ದಟ್ಟಣೆಯಿತ್ತು. ಸುತ್ತಮುತ್ತಲಿನ ರಸ್ತೆಗಳಲ್ಲಿ …
Read More »ದರ್ಶನ್ ಜಾಮೀನು ಅರ್ಜಿ: ಅ.14ಕ್ಕೆ ಆದೇಶ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅಪಹರಣ, ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ 57ನೇ ಸಿಸಿಎಚ್ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತು. ಮುಂದುವರಿದ ವಾದ-ಪ್ರತಿವಾದವನ್ನು ಗುರುವಾರವೂ ಆಲಿಸಿದ ನ್ಯಾಯಾಧೀಶ ಜೈಶಂಕರ್ ಅವರು ಅಕ್ಟೋಬರ್ 14ಕ್ಕೆ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಪ್ರಕಟಿಸುವುದಾಗಿ ಹೇಳಿದರು. ಅದೇ ದಿನವೇ, ದರ್ಶನ್ ಆಪ್ತರಾದ ಪವಿತ್ರಾಗೌಡ, ರವಿಶಂಕರ್, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಅವರ ಜಾಮೀನು ಅರ್ಜಿ ಆದೇಶವೂ ಪ್ರಕಟ …
Read More »ಮಹಿಳೆಗೆ ನಂಬಿಸಿ ಹಣ ದೋಚಿದ 71 ವರ್ಷದ ನಿವೃತ್ತ ನೌಕರ
ಹುಬ್ಬಳ್ಳಿ, ಅ.10: ಹಲವು ಊಹೆಗೂ ಮೀರಿದ ವಿಚಿತ್ರ, ವಿಶೇಷ ಘಟನೆಗಳು ನಡೆಯುತ್ತಿರುತ್ತದೆ. 70 ವರ್ಷದ ಶ್ರೀಮಂತ ವ್ಯಕ್ತಿಯ ಜೊತೆಗೆ 21 ರ ಯುವತಿ ಮದುವೆ, ತಂದೆಯೇ ಮಗಳನ್ನುಮದುವೆಯಾಗುವಪದ್ದತಿ ಸೇರಿದಂತೆ ಅನೇಕ ಚಿತ್ರ ವಿಚಿತ್ರ ಸನ್ನಿವೇಷಗಳು ಜರುಗುತ್ತವೆ. ಅದರಂತೆ ಇದೀಗ ‘ನನಗೆ ಡಿವೋರ್ಸ್ ಆಗಿದೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ 71 ವರ್ಷದ ನಿವೃತ್ತ ನೌಕರನಿಗೆ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿ(Hubli)ಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಮಹಿಳೆಗೆ …
Read More »9600 Bus: ರಸ್ತೆಗಳಿಯಲಿವೇ ‘ಐರಾವತ ಕ್ಲಬ್ ಕ್ಲಾಸ್ 2.0’ ಬಸ್: ರಾಮಲಿಂಗಾ ರೆಡ್ಡಿ
ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಬಸ್ ಖರೀದಿ ಪ್ರಕ್ರಿಯೆ ಮುಂದುವರೆಸಿದೆ. ಜನ ಸಾಮಾನ್ಯರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಹೊಸ 9600 ವೋಲ್ವೊ ಮಲ್ಟಿಎಕ್ಸೆಲ್ ಮಾದರಿಯ ‘ಐರಾವತ ಕ್ಲಬ್ ಕ್ಲಾಸ್ 2.0’ ಬಸ್‌ಗಳನ್ನು ಖರೀದಿಸುತ್ತಿದೆ. ಈಗಾಗಲೇ ಒಂದನ್ನು ಪ್ರಾಯೋಗಿಕವಾಗಿ ಪರಿಶೀಲಿಸಿರುವ ಸಾರಿಗೆ ಸಚಿವರು ಇಂದು ಖುದ್ದು ತಯಾರಿಕಾ ಘಟಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಹೌದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಸೋಮವಾರ …
Read More »ಮುಖ್ಯಮಂತ್ರಿ ಆಕಾಂಕ್ಷಿತರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು: ಬಿ.ವೈ.ವಿಜಯೇಂದ್ರ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸುವರು ಎಂದು ಹೇಳುವವರೇ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು’ ಎಂದರು. ‘ಸಿದ್ದರಾಮಯ್ಯ ಅವರು ಸೂಚಿಸುವ ವ್ಯಕ್ತಿಗಳೇ ಸಹಜವಾಗಿ ಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಅವರನ್ನು ಓಲೈಸಿಕೊಳ್ಳಲು ಪದೇ ಪದೇ …
Read More »
Laxmi News 24×7