Breaking News

ಚಿಕ್ಕೋಡಿಯಲ್ಲಿ ದಾನಮ್ಮದೇವಿ ಮಂದಿರ ಉದ್ಘಾಟನೆ

Spread the love

ಭಾರತವು ಧರ್ಮಪ್ರಧಾನ ರಾಷ್ಟ್ರವಾಗಿದ್ದು, ಧರ್ಮ ಮತ್ತು ದೇವರೇ ಈ ದೇಶದ ಜೀವಾಳ ಹಾಗೂ ತಾಯಿ ಬೇರು. ಇವುಗಳಿಲ್ಲದ ಭಾರತದ ಕಲ್ಪನೆಯೇ ಅಸಾಧ್ಯ ಎಂದು ಯಡೂರು ಶ್ರೀಕ್ಷೇತ್ರ ಹಾಗೂ ಶ್ರೀಶೈಲ ಜಗದ್ಗುರು ಶ್ರೀಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಪಟ್ಟಣದ ರಾಜರಾಜೇಶ್ವರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ದಾನಮ್ಮ ದೇವಿ ಮಂದಿರದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶನಿವಾರ ಅವರು ಆಶೀರ್ವಚನ ನೀಡಿದರು.
ಮಾನವರು ಧನ, ದೇಹ ಮತ್ತು ವೈಯಕ್ತಿಕ ಅಭಿಮಾನಗಳನ್ನು ಬದಿಗೊತ್ತಿ, ದೇಶಾಭಿಮಾನ ಹಾಗೂ ಧರ್ಮಾಭಿಮಾನವನ್ನು ಬೆಳೆಸಿಕೊಳ್ಳಬೇಕು, ಧರ್ಮದ ಹೆಸರಿನಲ್ಲಿ ನಡೆಯುವ ದಾನ, ಪುಣ್ಯ ಮತ್ತು ಪರೋಪಕಾರಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಪ್ರಪಂಚದಲ್ಲೆಲ್ಲೂ ಇಲ್ಲದ ಅಪೂರ್ವ ಮಂದಿರಗಳು ಭಾರತದಲ್ಲಿದ್ದು, ಅಲ್ಲಿನ ಜನರ ಭಕ್ತಿಭಾವದಿಂದಲೇ ಉಳಿದುಕೊಂಡಿವೆ ಎಂದು ಹೇಳಿದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ದೇವಸ್ಥಾನಗಳ ನಿರ್ಮಾಣ ಭಾರತದ ಭವ್ಯ ಇತಿಹಾಸವನ್ನು ಬಿಂಬಿಸುವುದರ ಜತೆಗೆ ಭಾರತೀಯ ಸಂಪ್ರದಾಯವನ್ನು ಸಾರುತ್ತದೆ. ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಮಂದಿರಗಳ ನಿರ್ಮಾಣಕ್ಕೆ ಕೈಜೋಡಿಸಬೇಕು. ಧರ್ಮ ಲಿಂಗದೀಕ್ಷೆ ಪಡೆದು, ಧಾರ್ಮಿಕ ಪರಂಪರೆ ಬೆಳೆಸುವ ಮೂಲಕ ಧರ್ಮ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾತನಾಡಿ ”ಮಠಮಾನ್ಯಗಳು ಮಾನವಕುಲದ ನಿಜವಾದ ಆಸ್ತಿಯಾಗಿವೆ. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ತಳೆದು ಮುನ್ನಡೆಯಬೇಕಿದೆ. ಈ ಮೂಲಕ ಹಿಂದೂ ಪರಂಪರೆಯನ್ನು ಉಳಿಸಿ, ಬೆಳೆಸೋಣ ಮತ್ತು ಪಾಲಿಸೋಣ” ಎಂದು ಹೇಳಿದರು.
ಹಾಲಕೇರಿ ಸಂಸ್ಥಾನಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ, ನೂಲ ಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಪಟ್ಟಣದ ಚರಮೂರ್ತಿ ಸಂಪಾದನಾ ಸ್ವಾಮೀಜಿ, ಚಿಂಚಣಿ ಶಿವಪ್ರಸಾದ ದೇವರು ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು,


Spread the love

About Laxminews 24x7

Check Also

ಬೀದಿ ವ್ಯಾಪಾರಿಗಳ ಭೂಬಾಡಿಗೆ ಜಿಲ್ಲಾಧಿಖಾರಿ ಕಚೇರಿ ಎದುರು ಪ್ರತಿಭಟನೆ

Spread the loveಬೆಳಗಾವಿ : ಗ್ರಾಪಂದಿಂದ ಬೀದಿ ವ್ಯಾಪಾರಿಗಳ ದಿನಿನಿತ್ಯದ ಭೂಬಾಡಿಗೆಯನ್ನು ಏಕಾಏಕಿಯಾಗಿ ಹೆಚ್ಚುವರಿ ಮಾಡುವುದರ ಜತೆಗೆ, ಕಟ್ಟುವ ಬಾಡಿಗೆಗೆ ರಸೀದಿಯನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ