Breaking News

ಹ್ಯಾಟ್ರಿಕ್ ತಪ್ಪು, ಮುಂದಿನ ಸೀಸನ್‌ನ ಮೊದಲ ಪಂದ್ಯಕ್ಕೆ ಟಿಮ್ ಡೇವಿಡ್ ಬ್ಯಾನ್!

Spread the love

ಅಹಮದಾಬಾದ್‌: ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಫೈನಲ್ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್  ಅವರಿಗೆ ಮುಂದಿನ ಸೀಸನ್‌ನ ಒಂದು ಪಂದ್ಯಕ್ಕೆ ನಿಷೇಧ ಹೇರಿ ಐಪಿಎಲ್ ಶಿಸ್ತು ಸಮಿತಿ ಆದೇಶಿಸಿದೆ.

ಗುಜರಾತ್ ಟೈಟನ್ಸ್  ವಿರುದ್ಧದ ಫೈನಲ್ ಪಂದ್ಯದ 10ನೇ ಓವರ್‌ನಲ್ಲಿ ವಿಕೆಟ್ ಪತನದ ಬಳಿಕ ಟಿಮ್ ಡೇವಿಡ್ ಅವರು ಮೈದಾನದ ಅಂಪೈರ್ ನಿತಿನ್ ಮೆನನ್ ಅವರತ್ತ ಐಸ್ ಬ್ಯಾಗ್ ಎಸೆದಿದ್ದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆ (ಮೈದಾನದಲ್ಲಿ ಅಂಪೈರ್ ಅಥವಾ ಆಟಗಾರರ ಮೇಲೆ ಯಾವುದೇ ವಸ್ತುಗಳನ್ನು ಎಸೆಯುವುದು ಅಪರಾಧ) ಆಗಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ನಿಷೇಧ ಜೊತೆ ಪಂದ್ಯದ ಸಂಭಾವನೆಯಲ್ಲಿ 50% ರಷ್ಟು ದಂಡ ಕೂಡ ಹಾಕಲಾಗಿದೆ.

ಈ ತಪ್ಪಿಗಾಗಿ ಅವರಿಗೆ 2 ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಈ ಸೀಸನ್‌ನಲ್ಲಿ ಇದು ಅವರ 3ನೇ ತಪ್ಪು ಹಾಗೂ ಒಟ್ಟು ಡಿಮೆರಿಟ್ ಅಂಕಗಳು 5ಕ್ಕೆ ತಲುಪಿದ ಕಾರಣ ನಿಯಮಾವಳಿಗಳ ಪ್ರಕಾರ ಸ್ವಯಂಚಾಲಿತವಾಗಿ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

ನಿಷೇಧದ ಅನ್ವಯ ಟಿಮ್ ಡೇವಿಡ್ ಅವರು ಐಪಿಎಲ್‌ 2027 ರ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಮುಂದಿನ ಸೀಸನ್‌ನಲ್ಲಿ ಅವರು ಆರ್‌ಸಿಬಿ ಪರ ಆಡಿದರೂ ಅಥವಾ ಬೇರೆ ಯಾವುದೇ ಫ್ರಾಂಚೈಸಿ ಪರ ಆಡಿದರೂ ಆ ತಂಡದ ಮೊದಲ ಪಂದ್ಯಕ್ಕೆ ಈ ನಿಷೇಧ ಅನ್ವಯಿಸುತ್ತದೆ.


Spread the love

About Laxminews 24x7

Check Also

KPSC ನಲ್ಲಿ 400 ಹುದ್ದೆಗಳಿಗೆ 800 ಕೋಟಿ ಡೀಲ್‌ ಆಗಿದೆ: ಆರ್‌. ಅಶೋಕ್‌ ಬಾಂಬ್‌

Spread the loveಬೆಂಗಳೂರು: ಕೆಪಿಎಸ್‌ಸಿ ನಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗಳ ಮಾರಾಟ ಆಗಿದೆ. 400 ಹುದ್ದೆಗಳಿಗೆ 2 ಕೋಟಿ ರೂ. ನಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ