Breaking News

ಸಕಾರಾತ್ಮಕ ಚಿಂತನೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ

Spread the love

ಇಟಗಿ: ಪರಸ್ಪರ ಸಹಕಾರ ಮತ್ತು ಸಕಾರಾತ್ಮಕ ಚಿಂತನೆಯಿAದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಅವರೊಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು, ಭೂ ದಾನಿಗಳು ಹಾಗೂ ಜನಪ್ರತಿನಿಽಗಳ ಸಹಕಾರದೊಂದಿಗೆ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಚೌಕಟ್ಟು ಪೂಜಾ ಸಮಾರಂಭದಲ್ಲಿ ಮಾತನಾಡಿ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭೂ ದಾನ ಮಾಡಿದ ಭೀಮರಾವ ಕುಲಕರ್ಣಿ ಹಾಗೂ ಸಾವಿತ್ರಿಬಾಯಿ ಕುಲಕರ್ಣಿ ಸೇವೆ ಸ್ಮರಣೀಯ. ವೈಯಕ್ತಿಕವಾಗಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಹಾಗೂ ವಿವಿಧ ಜನಪ್ರತಿನಿಽಗಳ ಅನುದಾನದಲ್ಲಿ ನಿರ್ಮಾಣ ಕಾರ್ಯಕ್ಕೆ ಸಹಕರಿಸುವುದಾಗಿ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೋಚೇರಿ ಮಾತನಾಡಿ, ಗ್ರಾಮಸ್ಥರೆಲ್ಲರೂ ಸೇರಿ ಕಲ್ಯಾಣ ಮಂಟಪ ನಿರ್ಮಾಣ ಕೈಗೊಂಡಿದ್ದು ಗ್ರಾಮದ ಏಕತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು.
ಬಿಜೆಪಿ ಮುಖಂಡ ಬಸವರಾಜ ಸಾಣಿಕೊಪ್ಪ ಮಾತನಾಡಿದರು. ಮಲಗೌಡ ಪಾಟೀಲ, ರುದ್ರಪ್ಪ ಶಿವಪ್ಪನವರ, ವಿಠ್ಠಲ ಭರಮಪ್ಪನವರ, ವಕೀಲ ಆರ್.ಎನ್.ಪಾಟೀಲ, ಕಲ್ಲಪ್ಪ ಎಮ್ಮೋಜಿ, ಯಶವಂತ ಕೊಡೊಳ್ಳಿ, ಶೇಖರ ಕೊಡೊಳ್ಳಿ, ನಾಗಭೂಷಣ ಪಾಟೀಲ, ಬಿ.ಎಸ್.ನಾಗನ್ನವರ, ಸಹದೇವ ಬಡಿಗೇರ, ಯು.ಜಿ.ಮಾಯಪ್ಪನವರ, ಮಂಜುನಾಥ ಕೊಲೆಕರ ಇತರರಿದ್ದರು.

Spread the love

About Laxminews 24x7

Check Also

ಬೀದಿ ವ್ಯಾಪಾರಿಗಳ ಭೂಬಾಡಿಗೆ ಜಿಲ್ಲಾಧಿಖಾರಿ ಕಚೇರಿ ಎದುರು ಪ್ರತಿಭಟನೆ

Spread the loveಬೆಳಗಾವಿ : ಗ್ರಾಪಂದಿಂದ ಬೀದಿ ವ್ಯಾಪಾರಿಗಳ ದಿನಿನಿತ್ಯದ ಭೂಬಾಡಿಗೆಯನ್ನು ಏಕಾಏಕಿಯಾಗಿ ಹೆಚ್ಚುವರಿ ಮಾಡುವುದರ ಜತೆಗೆ, ಕಟ್ಟುವ ಬಾಡಿಗೆಗೆ ರಸೀದಿಯನ್ನೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ