Breaking News

ಕೊರೋನಾ ಸಂಕಷ್ಟ:ಮುಂದುವರೆದ “ಹಸಿದವರತ್ತ ನಮ್ಮ ಚಿತ್ತ” ಅಭಿಯಾನ: ಅಶೋಕ ಚಂದರಗಿ

Spread the love

ಕೊರೋನಾ ಸಂಕಷ್ಟ:ಮುಂದುವರೆದ
“ಹಸಿದವರತ್ತ ನಮ್ಮ ಚಿತ್ತ” ಅಭಿಯಾನ!
ಎಚ್.ಐ.ವಿ.ಯುವತಿಯರ
” ಆಶ್ರಯ” ಕ್ಕೂ ಆಹಾರ ಧಾನ್ಯ ವಿತರಣೆ

ಕೊರೋನಾ ಸಂಕಷ್ಟದ ಸಮಯದಲ್ಲಿ ದಾನಿಗಳ ಬೆಂಬಲದಿಂದ ಕಳೆದ ಮಾರ್ಚ 20 ರಿಂದ ಬೆಳಗಾವಿ ಮಹಾನಗರದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಆರಂಭಿಸಿರುವ ” ಹಸಿದವರತ್ತ ನಮ್ಮ ಚಿತ್ತ”
ಅಭಿಯಾನವು ಮುಂದುವರೆದಿದ್ದು
ಗುರುವಾರ ಎಪ್ರೀಲ್ 9 ರಂದು ಮಹಾಂತೇಶ ನಗರದಲ್ಲಿರುವ ಎಚ್.ಐ.ವಿ.ಪೀಡಿತ ಯುವತಿಯರ ” ಆಶ್ರಯ” ಕ್ಕೂ ಆಹಾರ ಧಾನ್ಯವನ್ನು ವಿತರಿಸಲಾಯಿತು.


18 ವರ್ಷ ವಯಸ್ಸಿಗಿಂತಲೂ ಅಧಿಕ ವಯೋಮಾನದ 17 ಯುವತಿಯರಿಗೆ ಈ ಆಶ್ರಯ ಫೌಂಡೇಶನ್ ಆಶ್ರಯ ನೀಡಿದೆ.ರಾಜ್ಯದಲ್ಲಿ ಇದೊಂದೇ ಯುವತಿಯರಿಗೆ ಆಶ್ರಯ ನೀಡುವ ಸಂಸ್ಥೆಯಾಗಿದೆ.ಶ್ರೀಮತಿ ನಾಗರತ್ನ ಅವರು ಈ ಸಂಸ್ಥೆಯನ್ನು ನಡೆಸುತ್ತಿದ್ದು ಸರಕಾರದಿಂದ ಯಾವದೇ ನೆರವು ಸಿಗುವದಿಲ್ಲ.ದಾನಿಗಳು ನೀಡುವ ದಾನದಿಂದಲೇ ಸಂಸ್ಥೆ ನಡೆದಿದೆ.


ಅಕ್ಕಿ,ತೊಗರೆಬೇಳೆಯನ್ನು ವಿತರಿಸಿ ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು,ಇಂಥ ಸಂಸ್ಥೆಗೆ ನೆರವು ನೀಡಲು ಹೆಚ್ಚೆಚ್ಚು ದಾನಿಗಳು ಮುಂದೆ ಬರಬೇಕೆಂದರು.
ಶ್ರೀಮತಿ ನಾಗರತ್ನ ಅವರು ಮಾತನಾಡಿ ,ಸಂಸ್ಥೆಯನ್ನು ನಡೆಸುವಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಹೇಳಿದರು.


ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಕಾರ್ಯಕರ್ತರಾದ ಆನಂದ ಹುಲಮನಿ,ಸಂದೀಪ ಹೊಸಳ್ಳಿ,ಭರತ ಮುದಕನ್ನವರ,ಹರೀಶ ಕರಿಗೊಣ್ಣವರ ಮತ್ತು ವಿರೇಂದ್ರ ಗೋಬರಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ