ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ತಿಂಗಳುಗಳು ಬಾಕಿ ಇರುವಾಗ ಕೇಂದ್ರ ಬಿಜೆಪಿಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಲಾಗಿದೆ.
ಪಕ್ಷದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅಮಿತ್ ಮಾಳವೀಯ ಅವರನ್ನು ಬದಲಾಯಿಸಿ ಛತ್ತೀಸ್ಗಢದ ದೀಪಕ್ ಮ್ಹಾಸ್ಕೆಅವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ.
ದೇಶಾದ್ಯಂತ ಪಕ್ಷದ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ಹಾಗೂ ಮರುಸಂಘಟಿಸುವ ಉದ್ದೇಶದಿಂದ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಅಮಿತ್ ಮಾಳವೀಯ ಅವರನ್ನು ಜುಲೈ 2015 ರಲ್ಲಿ ಬಿಜೆಪಿ ಐಟಿ ಸೆಲ್ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಕಳೆದ 11 ವರ್ಷಗಳಿಂದ ಅವರು ಈ ಹುದ್ದೆಯಲ್ಲಿದ್ದರು.
ಸಾಮಾಜಿಕ ಜಾಲತಾಣ ತಂಡದಲ್ಲೂ ಬದಲಾವಣೆ ಮಾಡಲಾಗಿದ್ದು, ನಾಲ್ಕು ರಾಜ್ಯಗಳಿಂದ ನೂತನ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಪ್ರೀತಿ ಗಾಂಧಿ (ಮಹಾರಾಷ್ಟ್ರ), ಶಿವಾನಂದ್ ದ್ವಿವೇದಿ (ದೆಹಲಿ), ಅಲೋಕ್ ಭಟ್ (ಉತ್ತರಾಖಂಡ), ಅರುಣ್ ಯಾದವ್ (ಹರಿಯಾಣ) ನೇಮಕವಾಗಿದ್ದಾರೆ.
ಅನಿಲ್ ಬಲೂನಿ ಅವರು ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಚಾಲಕರಾಗಿ ಮುಂದುವರಿಯಲಿದ್ದಾರೆ.
ರಾಷ್ಟ್ರೀಯ ಉಪಾಧ್ಯಕ್ಷರು: ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ, ರಾಮ್ ಮಾಧವ್, ಬೈಜಯಂತ್ ಜಯ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ಡಾ. ಭಾರತಿ ಪವಾರ್ ಮತ್ತು ಮನ್ಪ್ರೀತ್ ಸಿಂಗ್ ಬಾದಲ್ ಸೇರಿದಂತೆ 13 ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು: ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇಬ್, ಸ್ಮೃತಿ ಇರಾನಿ, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಂಘಟನಾ ಪ್ರಧಾನ ಕಾರ್ಯದರ್ಶಿ: ಬಿ. ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಅವರು ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿ
ಕೆ. ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಭೋಲಾ ಸಿಂಗ್, ಪ್ರದೀಪ್ ವರ್ಮಾ, ಫಾಂಗ್ನಾನ್ ಕೊನ್ಯಾಕ್, ಅನಿಲ್ ಆಂಟನಿ, ಸಂದೀಪ್ ಪಾಠಕ್ ಮತ್ತು ಮನೋಜ್ ತಿಗ್ಗಾ ಮತ್ತಿತರರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿದ್ದಾರೆ.
ಇತರ ಪ್ರಮುಖ ಹೊಣೆಗಾರಿಕೆಗಳು: ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಕೋಶಾಧಿಕಾರಿಯನ್ನಾಗಿ (Treasurer) ನೇಮಿಸಲಾಗಿದ್ದು, ತರುಣ್ ಚುಗ್ ಅವರಿಗೆ ಕೇಂದ್ರ ಕಚೇರಿಯ ಉಸ್ತುವಾರಿ (Central Office In-charge) ನೀಡಲಾಗಿದೆ.
Laxmi News 24×7