Breaking News

ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ಡಿಸಿಎಂ ಕಾರಜೋಳ‌ ಮನವಿ

Spread the love

ಬೆಂಗಳೂರು. : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಷ್ಟದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ
ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ , ಭಾರತ ರತ್ನ, ಮಹಾ ಮಾನವತಾವಾದಿ ಡಾ. ಬಿ. ಆರ್ . ಅಂಬೇಡ್ಕರ್ ರವರ 129 ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಮುಂಭಾಗ ದಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಶ್ರೀ‌ ಗೋವಿಂದ ಎಂ‌ ಕಾರಜೋಳ ಮತ್ತು ಇತರೇ ಗಣ್ಯರು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಲಿದ್ದಾರೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಣ ಗೊಳಿಸಲು ರಾಷ್ಟ್ರದಾದ್ಯಂತ ಲಾಕ್ ಡೌನ್ ಅನುಷ್ಠಾನ ದಲ್ಲಿದ್ದು, ,ಸೆಕ್ಷನ್ 144 ಜಾರಿಯಲ್ಲಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಈ ಮಹಾನ್ ಚೇತನರ ಅಭಿಮಾನಿಗಳು , ಅನುಯಾಯಿಗಳು ಸಹಕರಿಸಿ ಏ.14 ರಂದು ಡಾ. ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಯನ್ನು ತುಂಬಾ ಸರಳವಾಗಿ ಹೆಚ್ಚಿನ ಜನಸಂದಣಿ ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಬೇಕು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ‌ ಗೋವಿಂದ ಎಂ ಕಾರಜೋಳ‌ ಅವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ