Breaking News

SIR ನಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆ

Spread the love

ನವದೆಹಲಿ: ಎಸ್‌ಐಆರ್‌ನಲ್ಲಿ  ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ʻಸುಪ್ರೀಂ ಕೋರ್ಟ್‌ ಬಾಗಿಲು ಎಲ್ಲರಿಗೂ ತೆರೆದಿದೆʼ ಎಂಬ ಸಿಜೆಐ ಸೂರ್ಯಕಾಂತ್‌  ಅವರ ಹೇಳಿಕೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸೋಮವಾರ (ಇಂದು) ನ್ಯಾಯಾಲಯದ ಅರ್ಜಿ ಸ್ವೀಕೃತಿ ವಿಭಾಗವು (ಫೈಲಿಂಗ್ ಕೌಂಟರ್) ಮುಚ್ಚುವ ಸ್ವಲ್ಪ ಸಮಯಕ್ಕೆ ಮೊದಲು ಅಡ್ವೊಕೇಟ್ ಆನ್ ರೆಕಾರ್ಡ್ (ಕಕ್ಷಿದಾರರ ಪರ ವಕೀಲರು) ಎಸ್. ಪ್ರಸನ್ನ ಅವರು ಅರ್ಜಿ ಸಲ್ಲಿಸಿದರು.

ರಿಟ್‌ ಅರ್ಜಿ‌ ಎಂದರೇನು?
ರಿಟ್ ಅರ್ಜಿ  ಎಂದರೆ ನಾಗರಿಕರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಅಥವಾ ಸರ್ಕಾರದ ಯಾವುದೇ ಇಲಾಖೆ/ಅಧಿಕಾರಿಗಳು ಕಾನೂನುಬಾಹಿರವಾಗಿ ನಡೆದುಕೊಂಡಾಗ, ನೇರವಾಗಿ ಉಚ್ಚ ನ್ಯಾಯಾಲಯ  ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ  ಸಲ್ಲಿಸುವ ಒಂದು ಔಪಚಾರಿಕ ಲಿಖಿತ ಅರ್ಜಿ.

ಈ ಪ್ರಕರಣಕ್ಕೆ ʻʻರಾಹುಲ್‌ ಗಾಂಧಿ vs ಭಾರತೀಯ ಚುನಾವಣಾ ಆಯೋಗʼʼ ಎಂದು ಹೆಸರಿಸಲಾಗಿದೆ. ಆದ್ರೆ ಅರ್ಜಿಯಲ್ಲಿನ ವಿವರಗಳು, ಕೋರ್ಟ್‌ಗೆ ಮಾಡಲಾದ ಮನವಿ ಹಾಗೂ ನಾಯಕರು ಕೋರಿರುವ ನಿರ್ದಿಷ್ಟ ಪರಿಹಾರದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಈ ಬೆನ್ನಲ್ಲೇ ಅರ್ಜಿಯನ್ನು ಖುದ್ದಾಗಿ ಸಲ್ಲಿಸಲು ಸಮಯ ವಸ್ತರಿಸುವಂತೆ ರಾಹುಲ್ ಗಾಂಧಿ ಅವರ ಕಾನೂನು ತಂಡವು ಕೋರ್ಟ್‌ ರಿಜಿಸ್ಟ್ರಿಯಿಂದ ಅನುಮತಿ ಪಡೆಯಲು ಪ್ರಯತ್ನಿಸಿದೆ ಎಂದು ತಿಳಿದುಬಂದಿದೆ.

ಅರ್ಜಿ ಸಲ್ಲಿಕೆ ಕೌಂಟರ್‌ಗೆ ತೆರಳಲು ಕಾಂಗ್ರೆಸ್ ನಿಯೋಗಕ್ಕೆ ಅನುಮತಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮತ್ತು ಮತಗಳ್ಳತನ ಆರೋಪದ ವಿರುದ್ಧ ಅರ್ಜಿ ಸಲ್ಲಿಸಲು 10-15 ಕಾಂಗ್ರೆಸ್‌ ನಾಯಕರ ನಿಯೋಗಕ್ಕೆ ಕೋರ್ಟ್‌ ಆವರಣದಲ್ಲಿರುವ ಅರ್ಜಿ ಸಲ್ಲಿಕೆ ಕೌಂಟರ್‌ಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದಾಗ್ಯೂ ಈ ನಿಯೋಗ ಭದ್ರತಾ ವಲಯದಿಂದ ಹೊರಗೇ ಇರುತ್ತಿದೆ ಎಂದು ಹೇಳಲಾಗಿದೆ.

ದೆಹಲಿ ಚಲೋ ಶುರುವಾಗ್ತಿದ್ದಂತೆ ಅರ್ಜಿ ಸಲ್ಲಿಕೆ
ಚುನಾವಣಾ ಆಯೋಗದ ಕಾರ್ಯವೈಖರಿ ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಇಂಡಿಯಾ’  ಮೈತ್ರಿಕೂಟವು ಕನ್ನಾಟ್ ಪ್ಲೇಸ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ಹಮ್ಮಿಕೊಂಡಿದ್ದ ʻಚಲೋ ದೆಹಲಿʼ ಮೆರವಣಿಗೆ ಶುರುವಾಗುತ್ತಿದ್ದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ನಡೆಯಿತು ಎಂದು ಪಕ್ಷದ ಉನ್ನತ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ.


Spread the love

About Laxminews 24x7

Check Also

ಸ್ಟಿಂಗ್ ಆಪರೇಷನ್ ರಾಜಕೀಯ ನಾಟಕ, ಡಿ.ಕೆ ಶಿವಕುಮಾರ್ ಆಸ್ಕರ್ ಪ್ರಶಸ್ತಿಗೆ ಯೋಗ್ಯರು: ಸಿ.ಟಿ ರವಿ ವ್ಯಂಗ್ಯ

Spread the loveಕೋಲಾರ: ಡಿ.ಕೆ ಶಿವಕುಮಾರ್  ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ  ವ್ಯಂಗ್ಯವಾಡಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ