ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದರೆ ಡಿಕೆ ಶಿವಕುಮಾರ್ ಸಂಪುಟದ ಸಚಿವರೂ ಸೇರಿ 20 ರಿಂದ 25 ಜನ ಶಾಸಕರು ಬಿಜೆಪಿ ಸೇರೋಕೆ ರೆಡಿ ಇದ್ದಾರೆ ಎಂದು ವಿಜಯೇಂದ್ರ) ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ವಿಜಯೇಂದ್ರ, ನಾವು ಯಾರನ್ನೂ ಸೆಳೆಯುತ್ತಿಲ್ಲ. ಆದ್ರೆ ನಾಳೆಯೇ ಚುನಾವಣೆ ಘೋಷಣೆಯಾದರೆ 25 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ. ಅದೂ ಸಚಿವರನ್ನ ಒಳಗೊಂಡು ಸೇರುತ್ತಾರೆ. ಅಂಥ ವಾತಾವರಣ ಈಗ ಇದೆ. ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಆಡಳಿತ ಪಕ್ಷದಲ್ಲೇ ಸಿಎಂ ಮೇಲೆ ವಿಶ್ವಾಸ ಹೋಗಿದೆ ಎಂದು ಹೇಳಿದ್ದಾರೆ.
ಮುಂದುವರಿದು… ಕಾಂಗ್ರೆಸ್ ನಲ್ಲಿ ಕೆಲವರು ಅಧಿಕಾರ ಕಸಿದುಕೊಳ್ಳಲು ಸ್ಟಿಂಗ್ ಮಾಡಿದ್ದಾರೆ ಅಂತ ಚರ್ಚೆ ನಡೀತಿದೆ. ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿಸೋದು ರಾಜಕೀಯ ವ್ಯಭಿಚಾರ ಎಂದು ಲೇವಡಿ ಮಾಡಿದ್ದಾರೆ.
ಕೆಲವರು ಸಚಿವರಾಗಲು, ಕೆಲವರು ಸಿಎಂ ಆಗಲು ಸ್ಟಿಂಗ್ ಮಾಡಿದ್ದಾರೆ ಅನ್ನೋ ಚರ್ಚೆ ನಡೆದಿದೆ. ಸ್ಟಿಂಗ್ ಆಪರೇಷನ್ ನಂತಹ ಬೆಳವಣಿಗೆ ಕರ್ನಾಟಕದ ರಾಜಕೀಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯಾರು ಯಾರ ವಿರುದ್ಧ ಸ್ಟಿಂಗ್ ಮಾಡಿದ್ದಾರೆ ಎಲ್ಲವರೂ ಚರ್ಚೆ ಅಗುತ್ತಿದೆ. ಮುಂದೆ ಎಲ್ಲವೂ ಬಹಿರಂಗವಾಗಲಿದೆ. 420 ಕೆಲಸ ಮಾಡಿದವರು ಅನುಭವಿಸುತ್ತಾರೆ. ಕರ್ನಾಟಕದ ರಾಜಕಾರಣ ಈ ಮಟ್ಟಕ್ಕೆ ಹೋಗಬಾರದಿತ್ತು, ದುರಾದೃಷ್ಟವಶಾತ್ ಹೋಗಿದೆ. ಸ್ಟಿಂಗ್ ಮಾಡೋದು ರಾಜಕೀಯ ವ್ಯಭಿಚಾರದ ಹಾಗೆ ಅಂತ ಕಿಡಿ ಕಾರಿದ್ದಾರೆ.
Laxmi News 24×7