Breaking News

ಹಾಸನದ ಯೋಧ ಅಸ್ಸಾಂನಲ್ಲಿ ಅನಾರೋಗ್ಯದಿಂದ ನಿಧನ

Spread the love

ಹಾಸನ: ಕರ್ತವ್ಯದಲ್ಲಿದ್ದಾಗಲೇ ಹಾಸನ  ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ  ನಡೆದಿದೆ.

ಆಲೂರು  ತಾಲೂಕಿನ, ಹಾಂಜಿಹಳ್ಳಿ ಗ್ರಾಮದ ಮಧು. ಹೆಚ್.ಹೆಚ್. (34) ನಿಧನರಾದ ಯೋಧ. ಮಧು ಅವರು ಕಳೆದ 15 ವರ್ಷಗಳಿಂದ ಬಿಎಸ್ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಂದುವರೆ ತಿಂಗಳ ಹಿಂದಷ್ಟೇ ಅವರ ಪತ್ನಿಗೆ ಮಗು ಜನಿಸಿತ್ತು. ಮಧು ಅವರ ನಿವೃತ್ತಿಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಇನ್ನೂ ಕುಟುಂಬಸ್ಥರ ಜೊತೆ ಫೋನ್‌ನಲ್ಲಿ ಮಾತನಾಡಿದ್ದ ಅವರು ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದ ವೇಳೆ ದಿಢೀರ್ ಅನಾರೋಗ್ಯದಿಂದ ಕ್ಯಾಂಪ್‌ನಲ್ಲಿ ನಿಧನರಾಗಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಂಜಿಹಳ್ಳಿ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರಿಯೆ ನೆರವೇರಲಿದೆ.


Spread the love

About Laxminews 24x7

Check Also

8,000 ಕ್ಯೂಸೆಕ್ ನೀರು ಹರಿಯುತ್ತಿದ್ರೂ 6,000 ಕ್ಯೂ. ನೀರು ಬಿಡ್ತಿಲ್ಲ ಎಂದ ಚಲುವರಾಯಸ್ವಾಮಿ

Spread the loveಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಪ್ರಸ್ತುತ 8 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದ್ದರೂ, 6 ಸಾವಿರ ಕ್ಯೂಸೆಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ