Breaking News

ಗದಗ ಬಿಜೆಪಿ ಸಮಾವೇಶ , ಕೂಲ್‌ ಡ್ರಿಂಕ್ಸ್‌ ತಂದವ ಕಕ್ಕಾಬಿಕ್ಕಿ : ಫ್ರೀ.. ಫ್ರೀ..ಎಂದು ಮುಗಿಬಿದ್ದ ಜನ, ವ್ಯಾಪಾರಿ ಕಣ್ಣೀರು

Spread the love

ದಗ: ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿ ಜನರು ಬೇಸಿಗೆಯ ಬಿಸಿಲಿಗೆ ಬಾಯಾರಿಕೆಯಿಂದ ತತ್ತರಿಸಿಹೋಗಿದ್ದರು, ಕೂಲ್‌ ಡ್ರಿಂಕ್ಸ್‌ ವ್ಯಾನ್ ಕಂಡು ಮುಗಿಬಿದ್ದು ಕೊಂಡೊಯ್ದ ಘಟನೆ ನಡೆದಿದೆ.

 

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಆದ್ರೆ ಕಾರ್ಯಕ್ರಮಕ್ಕೆ ಬಂದ ಜನರಿಗೆ ಆಯೋಜಕರು ನೀರಿನ ವ್ಯವಸ್ಥೆ ಮಾಡದ ಕಾರಣದಿಂದಾಗಿ ಜನರು ಬೇಸಿಗೆಯ ಬಿಸಿಲಿನಿಂದ ನೀರು ಕುಡಿಯದೇ ಬಳಲಿದ್ದರು.

ಏಕಾಏಕಿ ಕೂಲ್‌ ಡ್ರಿಂಕ್ಸ್‌ ವ್ಯಾನ್ ಕಂಡು ಓಡೋಡಿ ಬಂದು ಕಿತ್ತಕೊಂಡು ಹೋಗಿದ್ದರು. ನೀರಿನ ಬಾಟಲು ಕಿತ್ತಕೊಂಡು ಹೋಗಿದ್ದಕ್ಕೆ ಕಂಗಾಲಾದ ವ್ಯಾಪಾರಿ ಶರೀಫ್ ಕಣ್ಣೀರು ಹಾಕಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.


Spread the love

About Laxminews 24x7

Check Also

ಕೆಲಸ ಮುಗಿಸಿ ಬರುವಾಗ ಸಿಡಿಲು ಬಡಿದು ರೈತ ಸಾವು

Spread the love ಗದಗ: ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಗದಗ  ಜಿಲ್ಲೆಯ ರೋಣ  ತಾಲೂಕಿನ ಮೆಣಸಗಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ