Breaking News

ಹೆರಿಗೆ ವೇಳೆ ವೈದ್ಯರ ನಿರ್ಲಕ್ಷದಿಂದ ಮಗು ಸಾವು

Spread the love

ದಗ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷದಿಂದ ಮಗು ಸಾವು ಎಂಬ ಆರೋಪ ಆಗಾಗ ಕೇಳಿ ಬರುತ್ತಲಿರುತ್ತದೆ. ಅಂಥ ಪ್ರಕರಣಗಳ ಪಟ್ಟಿಗೆ ಇಂದು ಇನ್ನೊಂದು ಸೇರ್ಪಡೆ ಆಗಿದೆ. ಇಲ್ಲಿ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಹೊಡೆದಿದ್ದು, ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿದೆ ಎಂದೂ ಹೇಳಲಾಗಿದೆ.

 

ಗದಗ ಜಿಮ್ಸ್​ನಲ್ಲಿ ಈ ಪ್ರಕರಣ ನಡೆದಿದೆ. ಹೆರಿಗೆಗೆ ಎಂದು ಬಂದಿದ್ದ ಮಹಿಳೆಯನ್ನು ಹೆರಿಗೆಗೆ ಒಳಪಡಿಸದೆ ವಿಳಂಬ ಮಾಡಲಾಗಿದೆ ಎನ್ನಲಾಗಿದೆ. ಮಾತ್ರವಲ್ಲ, ಹೆರಿಗೆ ಮಾಡಿಸದೆ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಬಾರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

 

ಬಳಿಕ ಆಶಾ ಕಾರ್ಯಕರ್ತೆ ಮೇಲೂ ಜಿಮ್ಸ್ ಆಸ್ಪತ್ರೆ ವೈದ್ಯೆ ಹಲ್ಲೆ ಮಾಡಿರುವ ಆರೋಪವೂ ಇದೆ. ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿದ್ದು, ಮಗುವಿನ ಸಾವಿಗೆ ಕಾರಣ ಏನು ಎಂಬುದನ್ನು ಕೂಡ ವೈದ್ಯರು ತಿಳಿಸಿಲ್ಲ ಎಂದು ಗರ್ಭಿಣಿಯ ಕಡೆಯವರು ಆರೋಪಿಸಿದ್ದಾರೆ.

 

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ವೈದ್ಯೆಯ ಹಲ್ಲೆಯನ್ನು ಖಂಡಿಸಿ ಜಿಮ್ಸ್ ಆಸ್ಪತ್ರೆ ಎದುರು ನೂರಾರು ಆಶಾ ಕಾರ್ಯಕರ್ತೆಯರ ಧರಣಿ ನಡೆಸಿದ್ದು, ಜಿಮ್ಸ್ ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಕಾಲಿನಲ್ಲಿ ನಿಲ್ಲಿಸಿ ಆಶಾ ಕಾರ್ಯಕರ್ತೆ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕೂಡ ಆರೋಪಿಸಲಾಗಿದ್ದು, ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

 


Spread the love

About Laxminews 24x7

Check Also

ಕೆಲಸ ಮುಗಿಸಿ ಬರುವಾಗ ಸಿಡಿಲು ಬಡಿದು ರೈತ ಸಾವು

Spread the love ಗದಗ: ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಗದಗ  ಜಿಲ್ಲೆಯ ರೋಣ  ತಾಲೂಕಿನ ಮೆಣಸಗಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ