Breaking News
Home / ರಾಜಕೀಯ / ಸಾವಿರಾರು ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಅಶ್ಲೀಲ ವಿಡಿಯೊ

ಸಾವಿರಾರು ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಅಶ್ಲೀಲ ವಿಡಿಯೊ

Spread the love

ಪಟ್ನಾ: ಮೊಬೈಲ್ ಗಳಲ್ಲಿ ಕದ್ದು ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿಬಿದ್ದು ಮುಜುಗರಕ್ಕೀಡಾದವರು ಅನೇಕರಿದ್ದಾರೆ. ಆದರೆ ಸಾವಿರಾರು ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ವೀಕ್ಷಣೆಗಿಟ್ಟ ಜಾಹೀರಾತು ಪರದೆ ಮೇಲೆ ಖುಲ್ಲಂಖುಲ್ಲಾ ಅಶ್ಲೀಲ ವಿಡಿಯೊ ಪ್ರಸಾರವಾಗಿಬಿಟ್ಟರೆ ಹೇಗಾಗಬೇಡ?

ಅಂಥದ್ದೊಂದು ಮುಜುಗರದ ಸಂಗತಿ ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಜನ ಮಾಹಿತಿಗಾಗಿ ವೀಕ್ಷಿಸುತ್ತಿದ್ದರೆ ಏಕಾಏಕಿ ಅಶ್ಲೀಲ ವಿಡಿಯೊ ಶುರುವಾಗಿದೆ. ಒಂಟಿ ಹೈದರೆಲ್ಲ ತುಂಟತನದಿಂದ ಕಣ್ಣಿಟ್ಟರೆ ಕುಟುಂಬ ಸಹಿತ ಬಂದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಬರೊಬ್ಬರಿ ಮೂರು ನಿಮಿಷ ಅಶ್ಲೀಲ ವೀಡಿಯೊ ಪ್ರಸಾರವಾಗಿದ್ದು ಮಹಿಳೆಯರೆಲ್ಲ ಮುಖ ಕಿವುಚಿ “ಛೀ..” ಎಂದಿದ್ದಾರೆ.

ಅನಿರೀಕ್ಷಿತವಾದ ಈ ಮುಜುಗರದ ಬೆಳವಣಿಗೆಯಿಂದ ರೈಲ್ವೆ ನಿಲ್ದಾಣದ ಸಿಬ್ಬಂದಿ ಕೂಡ ಬಾಲಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು ಟಿವಿ ಆಫ್ ಮಾಡಿಸಿ ಬಹಿರಂಗ ಶೃಂಗಾರ ಲೀಲೆಗೆ ಮುಸುಕು ಮುಚ್ಚಿದ್ದಾರೆ. ಇದೇ ವೇಳೆ ಜಾಹಿರಾತು ಗುತ್ತಿಗೆಯನ್ನು ರದ್ದುಪಡಿಸಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ