ರೌಡಿಗೆ ಕೈಮುಗಿದ ಪ್ರಧಾನಿಬಿಜೆಪಿ ನಾಯಕರನ್ನು ಅಣಕಿಸಿದಕಾಂಗ್ರೆಸ್

Spread the love

ಬೆಂಗಳೂರು: ಭ್ರಷ್ಟಾಚಾರವನ್ನೆ ಉಸಿರಾಗಿಸಿಕೊಂಡಿರುವ 40% ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಮರ್ಯಾದೆ! ಕಳ್ಳರ ಬೆಂಬಲ ಕಳ್ಳರಿಗಷ್ಟೆ ಅಲ್ವೇ ಸಿಎಂ ಬೊಮ್ಮಾಯಿ ಅವರೇ ಎಂದು ರಾಜ್ಯ   ಬಿಜೆಪಿ ನಾಯಕರನ್ನು ಅಣಕಿಸಿದೆ.

ಪ್ರಧಾನಿಯೇ ರೌಡಿಗೆ ಕೈಮುಗಿಯುವಾಗ ಇವರು ಭ್ರಷ್ಟರಿಗೆ ಬಡ್ತಿ ನೀಡದೆ ಇರುತ್ತಾರ? ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಭ್ರಷ್ಟೋತ್ಸವ ನಡೆಸುತ್ತಿರುವ ಭ್ರಷ್ಟ ಜನತಾ ಪಾರ್ಟಿ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.

ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ! ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ ಕತೆ ಹೇಳುತ್ತವೆ. ಹಣ ನೀಡಿದರೂ, ಏನೇ ಸರ್ಕಸ್ ಮಾಡಿದರೂ ಬಿಜೆಪಿಯತ್ತ ಜನ ಸುಳಿಯದಿರುವುದು ಮಡುಗಟ್ಟಿದ ಜನಾಕ್ರೋಶಕ್ಕೆ ನಿದರ್ಶನ. ಖಾಲಿ ಕುರ್ಚಿ ಕಂಡು ಯಾತ್ರೆ ಮೊಟಕುಗೊಳಿಸುವುದಕ್ಕಿಂತ ನಾಚಿಕೆಗೇಡು ಇನ್ನೇನಿದೆ ಎಂದು ಪ್ರಶ್ನಿಸಿದೆ.

ಪ್ರಧಾನಿ ಮೋದಿಯವರೇ, ನಾವು ಎಂದೂ ಯಾರ ಸಾವನ್ನು ಬಯಸುವುದಿಲ್ಲ. ನೀವು ಆರೋಗ್ಯವಾಗಿರಿ. ದೀರ್ಘಾಯುಷಿ ಆಗಿರಿ. ಹಾಗೇನಾದರೂ ನಿಮಗೆ ತೊಂದರೆ ಆದರೆ ಅದಕ್ಕೆ ಇಂತಹ ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮೆದುರು ತಂದು ನಿಲ್ಲಿಸುವ ನಿಮ್ಮ ಪಕ್ಷದವರೇ ಕಾರಣ. ಇಂತಹವರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಸಲಹೆ ನೀಡಿದೆ.


Spread the love

About Laxminews 24x7

Check Also

ಅಮೇರಿಕಾರದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು: ಕುಟುಂಬಕ್ಕೆ 260 ಕೋಟಿ ಪರಿಹಾರ!

Spread the loveಸಿಯಾಟಲ್: ಅಮೆರಿಕದ ಸಿಯಾಟಲ್‌ನಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ