Breaking News

ನಮ್ಮ ಪಕ್ಷಕ್ಕೆ ಬರ್ತಿಯೋ ಇಲ್ಲ ಸಿಡಿ ಬಿಡಲೋ ಎಂದು ಡಿ.ಕೆ.ಶಿ. ಸಚಿವರೊಬ್ಬರನ್ನು ಬೆದರಿಸುತ್ತಿದ್ದಾರೆ:. ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಮಂತ್ರಿಯೋರ್ವರಿಗೆ ಡಿ.ಕೆ.ಶಿ ಕಾಂಗ್ರೆಸ್ ಸೇರ್ತಿಯಾ ಇಲ್ಲ ಸಿಡಿ ಬಿಡುಗಡೆ ಮಾಡ್ಲಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಸಚಿವರೊಬ್ಬರನ್ನು ಬೆದರಿಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬರ್ತಿಯೋ ಇಲ್ಲ ಸಿಡಿ ಬಿಡಲೋ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಸಿಡಿ ರಾಜಕಾರಣ ಪ್ರಸ್ತಾಪಿಸಿದ್ದಾರೆ.

ನಾವು ಯುದ್ಧ ಮಾಡುವವರು ಹೊರತು ಷಡ್ಯಂತ್ರ ಮಾಡುವವರಲ್ಲ. ಡಿ.ಕೆ.ಶಿವಕುಮಾರ್ ಪತ್ನಿಯೂ ನನ್ನ ತಂಗಿ ಇದ್ದ ಹಾಗೇ. ಮನೆ ಒಡೆಯಬಾರದು. ನನ್ನ ಬಳಿ ಸಾಕ್ಷಾಧಾರಗಳಿದ್ದರೂ ಬಿಡಲ್ಲ. ನನಗೊಬ್ಬನಿಗೆ ತೊಂದರೆ ಆಗಿದೆ. ಅದರಿಂದ ನಾನು ಹೊರಗೆ ಬಂದಿದ್ದೇನೆ. ಬೇರೆಯವರಿಗೆ ಈರೀತಿ ಆಗಬಾರದು. ಡಿ.ಕೆ.ಶಿವಕುಮಾರ್ ಅಂತಹ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಏನಾಗಬಹುದು. ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದಿದ್ದಾರೆ.

 


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ