Breaking News

ವೈದ್ಯರ ನಿರ್ಲಕ್ಷ್ಯ ಹೊಟ್ಟೆ ನೋವೆಂದು ಆಸ್ಪತ್ರೆಯಲ್ಲಿ ದಾಖಲಾದ 6 ತಿಂಗಳ ಮಗು ವಿಧಿವಶ

Spread the love

ಬೆಂಗಳೂರು: ಹೊಟ್ಟೆ ನೋವು ಅಂತ ಕರೆದುಕೊಂಡು ಬಂದಿದ್ದ ಮಗು ಸಾವಿಗೀಡಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದು 6 ತಿಂಗಳ ಮಗುವಿಗೆ ಒವರ್ ಡೋಸ್ ಮಾಡಿ ವೈದ್ಯರು ಸಾಯಿಸಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಹೊಸಕೋಟೆ ನಗರದ ಒವಂ ಆಸ್ವತ್ರೆಯಲ್ಲಿ ನಡೆದಿದೆ.

ತಾಲೂಕಿನ ಕಂಬಳಿಪುರ ನಿವಾಸಿ ವೇಣುಗೋಪಾಲ್ ಪ್ರಿಯಾಂಕ ಎಂಬುವವರ ಮಗುವಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒವಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕಳೆದ 15 ದಿನಗಳಿಂದ ಹೊಟ್ಟೆ ನೋವಿಗೆ ಚಿಕಿತ್ಸೆ ವೈದ್ಯರು ನೀಡುತ್ತಿದ್ದರು.

ಆದರೆ ಕಳೆದ‌ ಸೋಮವಾರ ಮಗುವಿಗೆ ಓವರ್ ಡೋಸ್ ಕೊಟ್ಟ ಕಾರಣ ಮಗು ಸಾವಿಗೀಡಾಗಿದೆ ಎಂದು ಪೋಷಕ ಆರೋಪ ಮಾಡಿತ್ತಿದ್ದು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಸತ್ತ ಮಗುವಿಗೆ ವೆಂಟಿಲೇಟರ್ ಹಾಕಿ ಬೇರೆ ಆಸ್ಪತ್ರೆಗೆ ಕಳಿಸಿದ್ದರು ಎಂದೂ ಪೋಷಕರು ಆರೋಪಿಸಿದ್ದಾರೆ. ಈವರೆಗೂ ನಾಲ್ಕೈದು ಮಕ್ಕಳು ಇದೇ ರೀತಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪಿವೆ ಎಂದೂ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಜಮಾಯಿಸಿರುವ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆಯ ಮೆಡಿಕಲ್ ಬಂದ್ ಮಾಡಿಸಿ ಗಲಾಟೆ ಮಾಡುತ್ತಿದ್ದಾರೆ. ಈ ವೇಳೆ ಆಸ್ವತ್ರೆಯ ಒಳ ಭಾಗದಲ್ಲಿ ನೂಕಾಟ ತಳ್ಳಾ‌ಟ‌ವೂ ನಡೆದಿದ್ದು ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರ ಹರಸಾಹಸ ಪಟ್ಟರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ