Breaking News

ವುಹಾನ್ ನಗರದಲ್ಲಿ ಮತ್ತೆ ಸೋಂಕು, ಕ್ಲಸ್ಟರ್ ರಚನೆ – ಶಾಂಘೈ ಡಿಸ್ನಿ ಲ್ಯಾಂಡ್ ಓಪನ್

Spread the love

ಬೀಜಿಂಗ್: ಕೋವಿಡ್ 19 ಮೂಲ ನೆಲೆ ವುಹಾನ್ ನಗರದಲ್ಲಿ ಮತ್ತೆ ಐದು ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆ.

ಒಂದೇ ಕಾಂಪೌಂಡಿನ 5 ಮಂದಿಯಲ್ಲಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಆ ಜಾಗವನ್ನು ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಲಾಕೌಡೌನ್ ತೆರೆಯಲಾಗಿತ್ತು. ಈಗ ಮತ್ತೆ 5 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಲಸ್ಟರ್ ರಚಿಸಲಾಗಿದೆ.

ಈ ಹಿಂದೆ ಏಪ್ರಿಲ್ 3 ರಂದು ವುಹಾನ್ ನಗರದಲ್ಲಿ ಕೊನೆಯದಾಗಿ ಸೋಂಕು ಕಾಣಿಸಿಕೊಂಡಿತ್ತು. ಆದಾದ ಬಳಿಕ ಮತ್ತೆ 5 ಮಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಶುಕ್ರವಾರ ಚೀನಾ ಸರ್ಕಾರ ಸಿನಿಮಾ ಮಂದಿರ, ಮ್ಯೂಸಿಯಂಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು. ಈ ಎಲ್ಲ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಶಾಂಘೈ ನಗರದಲ್ಲಿ ಈಗಾಗಲೇ ರಾತ್ರಿ ಮನರಂಜನೆ ನೀಡುವ ಡಿಸ್ಕೋಥೆಕ್ ತೆರೆಯಲಾಗಿದೆ. ವಾಲ್ಟ್ ಡಿಸ್ನಿ  ಕಂಪನಿ ಮೂರು ತಿಂಗಳ ಬಳಿಕ ಶಾಂಘೈ ಡಿಸ್ನಿ ಲ್ಯಾಂಡ್ ಪಾರ್ಕ್ ಅನ್ನು ತೆರೆದಿದೆ. ಚೀನಾದಲ್ಲಿ ಒಟ್ಟು 82,918 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 4,633 ಮಂದಿ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ

Spread the loveಟೆಹ್ರಾನ್‌: ಅಮೆರಿಕ-ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ವಿರುದ್ಧ ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ