Breaking News

ಬೆಂಗ್ಳೂರಲ್ಲಿ ದಂಪತಿಯ ಬರ್ಬರ ಹತ್ಯೆ- ಮಗ ಟೆಕ್ಕಿಯಿಂದ್ಲೇ ಕೃತ್ಯ ಶಂಕೆ………….

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಮಗ ಟೆಕ್ಕಿಯೇ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದಂಪತಿ. ಇವರನ್ನು ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಗೋವಿಂದಪ್ಪ ಅವರು ಆರ್‍ಬಿಐ ನಿವೃತ್ತ ನೌಕರನಾಗಿದ್ದು, ಮಗ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆ-ತಾಯಿಯನ್ನು ಕೊಲೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ನವೀನ್ ನನ್ನು ಕೋಣನಕುಂಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

Spread the loveಬೆಂಗಳೂರು: ದೆಹಲಿಗೆ  ತೆರಳಿರುವ ಡಿಸಿಎಂ ಡಿಕೆಶಿ  ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ