Breaking News

‘ಏರೋ ಇಂಡಿಯಾ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

Spread the love

ಬೆಂಗಳೂರು: ಈ ಬಾರಿಯ ಏರೋ ಇಂಡಿಯಾ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಕುತೂಹಲ ಭರಿತರಾಗಿ ನೋಡುತ್ತಿದ್ದಾರೆ. ಇನ್ನೇನು ಚುನಾವಣೆಯೂ ಹತ್ತಿರದಲ್ಲಿದ್ದು ಪ್ರಧಾನಿ ಮೋದಿ ಎರಡನೇ ಬಾರಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಏರೋ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

 

ನಿಗದಿಗಿಂತ ಮೊದಲೇ ರಾಜಭವನದಿಂದ ಹೊರಟ ಪ್ರಧಾನಿ ಮೋದಿ (ಬೆಳಗ್ಗೆ 8.35ರ ಹೊತ್ತಿಗೆ) ರಸ್ತೆ ಮಾರ್ಗವಾಗಿ ಮೇಖ್ರೀ ರಸ್ತೆಯಲ್ಲಿರುವ HQTC ಹೆಲಿಪ್ಯಾಡ್​ಗೆ ಆಗಮಿಸಿದರು. ಅಲ್ಲಿಂದ ಯಲಹಂಕ ವಾಯುನೆಲೆಗೆ ವಾಯು ಮಾರ್ಗವಾಗಿ Mi17 ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿದರು. ಈ ಸಂದರ್ಭ ಅವರೊಂದಿಗೆ ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​ ಕೂಡ ಸಾಥ್ ನೀಡಿದರು.ಏರ್​ ಶೋ ಈ ಬಾರಿ ವಾಣಿಜ್ಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದ್ದು ಅನೇಕ ಕಾರ್ಯಕ್ರಮಗಳನ್ನು ಈ ಸಂದರ್ಭ ಆಯೋಜಿಸಲಾಗಿದೆ. ಈ ಬಾರಿಯ ಏರ್​ ಶೋನಲ್ಲಿ ಅನೇಕ ದೇಶಗಳ ರಕ್ಷಣಾ ಮಂತ್ರಿಗಳು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಿಗಳು, ಹೀಗೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ