Breaking News

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಮಕ್ಕಳನ್ನೇ ಕೊಂದ ತಂದೆ

Spread the love

ದೇವದುರ್ಗ (ರಾಯಚೂರು ಜಿಲ್ಲೆ): ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ದೇವದುರ್ಗ ತಾಲ್ಲೂಕಿನ ಜಕ್ಲೇರದೊಡ್ಡಿ ಗ್ರಾಮದ ನಿಂಗಪ್ಪ ಎಂಬಾತ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶನಿವಾರ ಕೃತ್ಯ ನಡೆದಿದ್ದು, ಭಾನುವಾರ ಗೊತ್ತಾಗಿದೆ.

 

ಶಿವರಾಜ ನಿಂಗಪ್ಪ (5), ರಾಘವೇಂದ್ರ ನಿಂಗಪ್ಪ (3) ಕೊಲೆಯಾದ ಮಕ್ಕಳು. ಶನಿವಾರ ಮಧ್ಯರಾತ್ರಿಯೇ ದೇವದುರ್ಗ ಪೊಲೀಸ್‌ ಠಾಣೆಗೆ ತೆರಳಿ ಪತಿ ನಿಂಗಪ್ಪನ ವಿರುದ್ಧ ಪತ್ನಿ ಪ್ರಭಾವತಿ ದೂರು ಸಲ್ಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ. ಮಕ್ಕಳಿಬ್ಬರು ನನಗೆ ಹುಟ್ಟಿಲ್ಲ ಎಂದು ನಿಂಗಪ್ಪ ನಿಂದಿಸಿದ. ಕೆ.ಇರಬಗೇರಾ ಗ್ರಾಮದಲ್ಲಿದ್ದ ಮಕ್ಕಳಿಬ್ಬರನ್ನು ಜಕ್ಲೇರದೊಡ್ಡಿಗೆ ಕರೆತಂದು ಕತ್ತು ಹಿಸುಕಿ ಸಾಯಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ