Breaking News

ಗ್ರೇಡ್‌- 2 ತಹಶೀಲ್ದಾರ್‌ ಹುದ್ದೆ: 47 ಮಂದಿಗೆ ನೇಮಕಾತಿ ಆದೇಶ

Spread the love

ಬೆಂಗಳೂರು: 2017ರ ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆಯಲ್ಲಿ ಗ್ರೇಡ್‌-2 ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾಗಿದ್ದ 50 ಮಂದಿಯ ಪೈಕಿ 47 ಮಂದಿಗೆ ಕಂದಾಯ ಇಲಾಖೆ ಶುಕ್ರವಾರ ನೇಮಕಾತಿ ಆದೇಶ ನೀಡಿದೆ.

106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ 2017ರಲ್ಲಿ ಪ್ರಕ್ರಿಯೆ ಆರಂಭಿಸಲಾಗಿತ್ತು.

2021ರ ಫೆಬ್ರುವರಿಯಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. 2022ರ ಸೆಪ್ಟೆಂಬರ್‌ 9ರಂದು ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು.

ಕಂದಾಯ ಇಲಾಖೆಯ ಮೂಲ ವೃಂದದ 44 ಹಾಗೂ ಹೈದರಾಬಾದ್‌ ಕರ್ನಾಟಕ ವೃಂದದ ಆರು ತಹಶೀಲ್ದಾರ್‌ ಗ್ರೇಡ್‌-2 ಹುದ್ದೆಗಳಿಗೆ ಒಟ್ಟು 50 ಅಭ್ಯರ್ಥಿಗಳ ಅಯ್ಕೆಪಟ್ಟಿ ಪ್ರಕಟಿಸಲಾಗಿತ್ತು. ಈಗ ಕಂದಾಯ ಇಲಾಖೆಯ ಮೂಲ ವೃಂದಕ್ಕೆ ಆಯ್ಕೆಯಾದ 42 ಮತ್ತು ಹೈದರಾಬಾದ್‌ ಕರ್ನಾಟಕ ವೃಂದಕ್ಕೆ ಆಯ್ಕೆಯಾದ ಐದು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ